Advertisement

ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದ ಪ್ರಕರಣ : ಮಾಜಿ ಕ್ರಿಕೆಟಿಗ ಅಜಯ್‌ ಜಡೇಜಗೆ 5 ಸಾವಿರ ದಂಡ

10:42 PM Jun 29, 2021 | Team Udayavani |

ಪಣಜಿ : ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಅಜಯ್‌ ಜಡೇಜ ಗೋವಾದ ಗ್ರಾಮ ವೊಂದರ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿ 5 ಸಾವಿರ ರೂ. ದಂಡ ಕಟ್ಟಿದ್ದಾರೆ.

Advertisement

“ಕಸದ ಸಮಸ್ಯೆಯಿಂದ ನಮ್ಮ ಗ್ರಾಮ ತತ್ತರಿಸಿ ಹೋಗಿದ್ದು, ಹೊರಗಿನಿಂದ ತಂದ ಕಸವನ್ನು ಇಲ್ಲಿ ಎಸೆಯಲಾಗುತ್ತದೆ. ಆ ಕಸದ ಚೀಲಗಳು ಯಾರದ್ದು ಎಂಬುದನ್ನು ಪತ್ತೆ ಹಚ್ಚಲು ನಾವು ಕೆಲವು ಯುವಕರನ್ನು ನೇಮಿಸಿಕೊಂಡಿದ್ದೇವೆ. ಅದರಂತೆ ಕಸದ ಚೀಲವೊಂದರ ಮೇಲೆ ಅಜಯ್‌ ಜಡೇಜ ಅವರ ಹೆಸರು ಕಾಣಿಸಿಕೊಂಡಿತು.

ಮುಂದೆ ಇಲ್ಲಿ ಕಸವನ್ನು ವಿಲೇವಾರಿ ಮಾಡಬೇಡಿ ಎಂದು ನಾವು ಅವರಿಗೆ ಸಲಹೆ ನೀಡಿದ್ದೇವೆ’ ಎಂದು ಗ್ರಾ.ಪಂ ಅಧ್ಯಕ್ಷ ಬಂದೋಡ್ಕರ್‌ ಹೇಳಿದ್ದಾರೆ.

ಇದನ್ನೂ ಓದಿ :ಅಮೆರಿಕದಲ್ಲಿ ನಡೆಯುವ ಸ್ಪೆಲ್ಲಿಂಗ್‌ ಬೀ ಸ್ಪರ್ಧೆಯ ಅಂತಿಮ ಸುತ್ತಿಗೆ 9 ಭಾರತೀಯರು!

Advertisement

Udayavani is now on Telegram. Click here to join our channel and stay updated with the latest news.

Next