Advertisement

ಹೊಸ ವರ್ಷಾಚರಣೆಗೆ ಉಡುಪಿ ಜಿಲ್ಲೆಯಲ್ಲಿ ಪ್ರತ್ಯೇಕ ಕಾನೂನು ಜಾರಿ

09:50 AM Dec 29, 2022 | Team Udayavani |

ಉಡುಪಿ: ಹೊಸ ವರ್ಷಾಚರಣೆ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಉಡುಪಿ ಜಿಲ್ಲಾ ಪೊಲೀಸ್‌ ಇಲಾಖೆ ಕೆಲವು ನಿಯಮಗಳನ್ನು ಜಾರಿಗೊಳಿಸಿದೆ. ಕೋವಿಡ್ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆಗಾಗಿ ನಿಯಮ ರೂಪಿಸಲಾಗಿದೆ.

Advertisement

ಪೊಲೀಸ್ ಇಲಾಖೆ ವತಿಯಿಂದ ಹೆಚ್ಚುವರಿಯಾಗಿ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಬಂದೋಬಸ್ತ್ ಕರ್ತವ್ಯಕ್ಕೆ ನೇಮಿಸಲಾಗಿದೆ.

ಡಿಸೆಂಬರ್ 31ರಿಂದ ಜನವರಿ 1ರ 1 ಗಂಟೆಯವರೆಗೆ ಉಡುಪಿ ಜಿಲ್ಲೆಯಾದ್ಯಂತ ಹೊಸ ವರ್ಷದ ಆಚರಣೆ ನಡೆಸುವ ಸಮಯ, ಕಾಠ್ಯಕ್ರಮಗಳ: ಸಂಘಟಕರು ಮತ್ತು ಸಾರ್ವಜನಿಕರು ಈ ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿವೆ.

ಕೋವಿಡ್ 19ಗೆ ಸಂಬಂಧಪಟ್ಟಂತೆ ನೀಡಲಾದ ಸೂಚನೆಗಳನ್ನು ಹೊಸ ವರ್ಷಾಚರಣೆ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು.

ಎಲ್ಲಾ ರೀತಿಯ ಆಚರಣೆಗಳು ಜನವರಿ ಒಂದರ ಮಧ್ಯರಾತ್ರಿ 1 ಗಂಟೆಯ ಒಳಗಾಗಿ ಮುಕ್ತಾಯಗೊಳ್ಳತಕ್ಕದ್ದು ಒಳಾಂಗಣ ಸಮಾರಂಭಗಳು, ಪಬ್, ರೆಸ್ಟೋರೆಂಟ್ ಗಳು, ಕ್ಲಬ್ ಗಳು, ರೆಸಾರ್ಟ್ ಮುಂತಾದ ಕಡೆಗಳಲ್ಲಿ ಅದರ ಸಾಮರ್ಥ್ಯ ಮೀರದಂತೆ ಜನರು ಇರುವಂತೆ ನೋಡಿಕೊಳ್ಳಬೇಕು. ಅಲ್ಲಿ ವಿದ್ಯುತ್ ಅಥವಾ ಅಗ್ನಿ ಅವಘಡಗಳು ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.

Advertisement

ಇದನ್ನೂ ಓದಿ:ವರ್ಷಾಂತ್ಯದಲ್ಲೂ ಅದಿತಿ ಹವಾ: ಒಂದೇ ದಿನ ಎರಡು ಚಿತ್ರ ರಿಲೀಸ್

ಹೋಟೆಲ್, ಪಬ್, ರೆಸ್ಟೋರೆಂಟ್, ಹೋಮ್‌ ಸ್ಟೇ, ಪಿಜಿಗಳಲ್ಲಿ ಸಾರ್ವಜನಿಕರಿಗೆ ಈವೆಂಟ್‌ಗಳನ್ನು ಆಯೋಜಿಸುವಾಗ ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಕಡ್ಡಾಯವಾಗಿ ಮಾಹಿತಿ ನೀಡತಕ್ಕದ್ದು, ಕಾರ್ಯಕ್ರಮಗಳ ಆಯೋಜಕರು, ಭದ್ರತಾ ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಸ್ವಯಂಸೇವಕರು, ಪುರುಷ ಮತ್ತು ಮಹಿಳಾ ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದು.

ವಾಹನ ಪಾರ್ಕಿಂಗ್‌ ಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳುವುದು, ಇತರೇ ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ಆಡತಡೆಯಾಗದೇ ಸಾಗದು ಸಂಚಾರಕ್ಕೆ ಮುಂಗಡವಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವುದು, ಯಾವುದೇ ರೀತಿಯು ವಾಹನ ಅಪಘಾತಗಳಾಗದಂತೆ ಮುಂಜಾಗೃತ ಕ್ರಮ ವಹಿಸುವುದು.

ಬಸ್ ಸ್ಟ್ಯಾಂಡ್, ಬೀಚ್, ರೋಡ್, ಫುಟ್ಪಾತ್, ಗಾರ್ಡನ್ ಮತ್ತು ಇತರೇ ಸಾರ್ವಜನಿಕ ಸ್ಥಳಗಳಲ್ಲಿ ವರ್ಷಾಚರಣೆಯ ಯಾವುದೇ ಕಾರ್ಯಕ್ರಮಗಳನ್ನು ನಡೆಸಬಾರದು.

ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಅಮಲು ಅಥವಾ ಮದ್ಯದ ನಷೆಯಲ್ಲಿ ಆಚರಣೆ ಮಾಡುವದರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುದ್ದದು.

ಹೊಸ ವರ್ಷಾಚರಣೆಯ ನೆಪದಲ್ಲಿ ಜನರೊಂದಿಗೆ ಮಹಿಳೆಯರೊಂದಿಗೆ ಆನುಚಿತ ವರ್ತನೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರಗಿಸಲಾಗುವುದು.

ಲೌಡ್ ಸ್ಪೀಕರ್‌ಗಳನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯ ಮತ್ತು ಸರ್ಕಾರದ ಆದೇಶಗಳನ್ನು ಉಲ್ಲಂಘನೆಯಾಗದಂತೆ ಮತ್ತು ಶಬ್ದ ಮಾಲಿನ್ಯ ಆಗದಂತೆ ಧ್ವನಿವರ್ಧಕದ ಡೆಸಿಬಲ್‌ ಮಿತಿಯಲ್ಲಿ ಇಟ್ಟು ಆಚರಣೆ ನಡೆಸಬೇಕು.

ಹೊಸ ವರ್ಷಾಚರಣೆಯ ಸಮಯ ಅಕ್ಕಪಕ್ಕದ ಜನರಿಗೆ ತೊಂದರೆಯಾಗದಂತೆ ವಿಶೇಷವಾಗಿ ಆಸ್ಪತ್ರೆ, ಅಪಾರ್ಟ್ ಮೆಂಟ್‌ಗಳಲ್ಲಿ ವಾಸಿಸುವ ಹಿರಿಯ ಜನರಿಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸೂಕ್ತ ಎಚ್ಚರಿಕೆ ವಹಿಸಬೇಕು.

ರಾತ್ರಿ ಹೊತ್ತು ಕುಡಿದು ವಾಹನ ಚಾಲನೆ ಮತ್ತು ಅತೀವೇಗ ನಿರ್ಲಕ್ಷ್ಯತನದ ವಾಹನ ಚಾಲನೆ ನಡೆಸುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next