Advertisement

ಸರಕಾರ ವಿಪಕ್ಷದ ನಡುವೆ ನಿಯಮ ಕದನ: 2ನೇ ದಿನವೂ ಸಂಸತ್‌ ಕಲಾಪ ವ್ಯರ್ಥ

11:36 PM Jul 21, 2023 | Team Udayavani |

ಹೊಸದಿಲ್ಲಿ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ನಗ್ನವಾಗಿ ಮೆರ ವಣಿಗೆ ನಡೆಸಿದ ವಿಚಾರ ಸಂಸತ್‌ನಲ್ಲಿ 2ನೇ ದಿನವೂ ಕೋಲಾಹಲಕ್ಕೆ ಕಾರಣವಾಗಿ ಕಲಾಪ ನಡೆಸಲು ಅಸಾಧ್ಯವಾಗಿದೆ. ಹೀಗಾಗಿ, ಸೋಮವಾರಕ್ಕೆ ಎರಡೂ ಸದನಗಳ ಕಲಾಪ ಮುಂದೂಡಿಕೆಯಾಗಿದೆ.

Advertisement

ರಾಜ್ಯಸಭೆಯಲ್ಲಿ ಶುಕ್ರವಾರ ಕಲಾಪ ನಡೆಸಲು ಸಾಧ್ಯವೇ ಆಗಲಿಲ್ಲ. ಮಹಿಳೆಯರ ಮೆರವಣಿಗೆ ವಿಚಾರದಲ್ಲಿ ವಿಪಕ್ಷಗಳು ಪದೇ ಪದೆ ಗದ್ದಲ ಎಬ್ಬಿಸಿದ್ದರಿಂದ ಸಭಾಪತಿ ಜಗದೀಪ್‌ ಧನ್ಕರ್‌ ಸೋಮವಾರಕ್ಕೆ ಮುಂದೂಡಿಕೆ ಮಾಡಿದರು. ಜತೆಗೆ ಕೆಲವೊಂದು ಪದಗಳನ್ನು ಕಡತದಿಂದ ತೆಗೆದು ಹಾಕುವ ಬಗ್ಗೆ ತೀರ್ಮಾನ ಕೈಗೊಂಡದ್ದೂ ವಿಪಕ್ಷಗಳ ಆಕ್ಷೇಪಕ್ಕೆ ಕಾರಣವಾಯಿತು.

ಈಶಾನ್ಯ ರಾಜ್ಯದಲ್ಲಿ ಉಂಟಾ ಗಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ರಾಜ್ಯ ಸಭೆಯ ನಿಯಮ 267 ಅಥವಾ 176ರ ಅನ್ವಯ ಚರ್ಚೆ ನಡೆ ಸಬೇಕೋ ಎಂಬ ಬಗ್ಗೆ ಕೇಂದ್ರ ಸರಕಾರ ಹಾಗೂ ವಿಪಕ್ಷಗಳ ನಡುವೆ ಜಟಾಪಟಿಯೂ ಉಂಟಾಗಿದೆ.

ರೂಲ್‌ 267 ಪ್ರಕಾರ, ಇತರೆ ಎಲ್ಲ ವಿಚಾರಗಳನ್ನೂ ಬದಿಗಿಟ್ಟು ಇಡೀ ದಿನ ಮಣಿಪುರದ ವಿಚಾರವನ್ನೇ ಚರ್ಚಿಸಬೇಕು ಎಂದು ವಿಪಕ್ಷಗಳ ಪಟ್ಟು ಹಿಡಿದವು. ಆದರೆ ಕೇಂದ್ರ ಸರಕಾರ ನಿಯಮ 176ರ ಅನ್ವಯ ಮಣಿಪುರದ ಕುರಿತು ಅಲ್ಪಕಾಲದ ಚರ್ಚೆ ನಡೆಯಬೇಕು ಎಂದು ಪ್ರತಿಪಾದಿಸಿತು. ಅದರ ಅನ್ವಯ ಎರಡೂವರೆ ಗಂಟೆಗಳ ಕಾಲ ಚರ್ಚೆ ಮಾಡಲು ಮಾತ್ರ ಅವಕಾಶ ಇದೆ.

ವಿಪಕ್ಷನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಮೋದ್‌ ತಿವಾರಿ, ರಂಜಿತ್‌ ರಂಜನ್‌, ಕರ್ನಾಟಕದ ರಾಜ್ಯಸಭಾ ಸದಸ್ಯ ಸಯ್ಯದ್‌ ನಾಸಿರ್‌ ಹುಸೇನ್‌, ಸಹಿತ 12 ಮಂದಿ ಸಂಸದರು ನಿಯಮ 267ರ ಅನ್ವಯ ನೋಟಿಸ್‌ ನೀಡಿ ಮಣಿಪುರ ವಿಚಾರದ ಬಗ್ಗೆ ಚರ್ಚೆ ನಡೆಸಬೇಕು. ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿ ದ್ದಾರೆ. ಆದರೆ ಇದಕ್ಕೆ ಸರಕಾರಒಪ್ಪದ ಕಾರಣ ಗದ್ದಲ ಏರ್ಪಟ್ಟಿತು.

Advertisement

ಲೋಕಸಭೆಯಲ್ಲಿ: ಲೋಕಸಭೆ ಯಲ್ಲೂ ಮಣಿಪುರ ಹಿಂಸಾಚಾರ ಘಟನೆ ಖಂಡಿಸಿ ವಿಪಕ್ಷಗಳು ಗದ್ದಲ ಎಬ್ಬಿಸಿವೆ.

ರಾಜಸ್ಥಾನದ ಸಚಿವರ ವಜಾ
ರಾಜ್ಯದಲ್ಲಿನ ಮಹಿಳೆಯರ ಸ್ಥಿತಿಗತಿ ಕುರಿತು ಬೆಳಕು ಚೆಲ್ಲಿದ ರಾಜಸ್ಥಾನದ ಸಚಿವರೊಬ್ಬರು ವಜಾ ಶಿಕ್ಷೆ ಅನುಭವಿಸಿದ್ದಾರೆ. ಶುಕ್ರವಾರ ರಾಜಸ್ಥಾನ ಅಸೆಂಬ್ಲಿಯಲ್ಲಿ ಮಾತನಾಡುವ ವೇಳೆ ಸಚಿವ ರಾಜೇಂದ್ರ ಗುಧಾ ಅವರು, “ಮಣಿಪುರದ ಪರಿಸ್ಥಿತಿ ಕುರಿತು ಚರ್ಚಿಸುವ ಬದಲು ನಮ್ಮ ರಾಜ್ಯದಲ್ಲಿ ನಾವು ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ವಿಫ‌ಲ ರಾಗಿದ್ದೇವೆ. ರಾಜಸ್ಥಾನದಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಜಾಸ್ತಿಯಾಗಿದೆ’ ಎಂದಿದ್ದಾರೆ. ಇದರಿಂದ ಕ್ರುದ್ಧರಾದ ಸಿಎಂ ಅಶೋಕ್‌ ಗೆಹೊÉàಟ್‌, ಕೂಡಲೇ ರಾಜೇಂದ್ರ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next