Advertisement

ಅಂಬೇಡ್ಕರ್‌ ಹೋರಾಟದ ಹಾದಿ ಎಲ್ಲರಿಗೂ ತಿಳಿಯಲಿ

04:27 PM Apr 15, 2021 | Team Udayavani |

ಕನಕಪುರ: ದೇಶದಲ್ಲಿ ಸಮಾನತೆ ಸಾರಲು ಬೃಹತ್ತಾದಸಂವಿಧಾನ ರಚನೆ ಮಾಡಿದ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ ಹೋರಾಟದ ಹಾದಿ ಪ್ರತಿಯೊಬ್ಬಮಕ್ಕಳಿಗೂ ತಿಳಿದಿರಬೇಕು ಎಂದು ಸಮತಾ ಸೈನಿಕದಳದ ಬೆಣಚಕಲ್ಲುದೊಡ್ಡಿ ರುದ್ರೇಶ್‌ ತಿಳಿಸಿದರು.

Advertisement

ತಾಲೂಕಿನ ಹಾರೋಹಳ್ಳಿ ಹೋಬಳಿಯಬೆಣಚಕಲ್ಲು ದೊಡ್ಡಿ ಗ್ರಾಮದಲ್ಲಿ ಅಂಬೇಡ್ಕರ್‌ ಅವರ130 ಜಯಂತ್ಯುತ್ಸವದ ಅಂಗವಾಗಿ ಅಂಬೇಡ್ಕರ್‌ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗ್ರಾಮದ ಮಕ್ಕಳಿಗೆಬ್ಯಾಗ್‌ ಮತ್ತು ಲೇಖನ ಪರಿಕರಗಳನ್ನು ವಿತರಿಸಿ ಮಾತನಾಡಿದರು.

ದಲಿತ ಸಮುದಾಯಗಳನ್ನುಸಮಾಜದ ಮುಖ್ಯವಾಹಿನಿಗೆ ತಂದು ಮೇಲು-ಕೀಳುಎಂಬ ತಾರತಮ್ಯಗಳನ್ನು ಹೋಗಲಾಡಿಸಲುಅಂಬೇಡ್ಕರ್‌ ಅವರು ಆನೇಕ ಹೋರಾಟಗಳನ್ನುಮಾಡಿದರು. ಅವರ ಹೋರಾಟದಿಂದ ದಲಿತರುಹಿಂದುಳಿದವರು ಸಮಾಜದಲ್ಲಿ ನೆಮ್ಮದಿಯಿಂದಬದುಕುವ ವಾತಾವರಣ ನಿರ್ಮಾಣವಾಗಿದೆ.

ಅಂತ ಮಹನೀಯರ ತತ್ವಗಳು ಹೋರಾಟಗಳನ್ನು ಇಂದಿನಯುವಪೀಳಿಗೆ ತಮ್ಮ ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದರು. ಮಕ್ಕಳಿಗೆ ಬ್ಯಾಗ್‌ಮತ್ತು ಲೇಖನಗಳನ್ನು ಪರಿಕರಗಳನ್ನು ವಿತರಣೆಮಾಡಲಾಯಿತು

Advertisement

Udayavani is now on Telegram. Click here to join our channel and stay updated with the latest news.

Next