Advertisement

“ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ’ಪಾದಯಾತ್ರೆ; ದೇಶ ವಿಭಜಿಸುವ ಷಡ್ಯಂತ್ರ: ಡಾ|ಭಟ್‌

12:41 AM Mar 21, 2022 | Team Udayavani |

ಉಳ್ಳಾಲ: ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್‌ನ ಮುಸ್ಲಿಂ ತುಷ್ಟೀಕರಣದಿಂದ ದೇಶ ವಿಭಜನೆಯಾಯಿತು. ಈಗ ಹಿಜಾಬ್‌ನಂತಹ ವಿಚಾರವನ್ನು ಮುನ್ನೆಲೆಗೆ ತಂದಿದ್ದು, ಮತ್ತೆ ದೇಶವನ್ನು ವಿಭಜಿಸುವಂತಹ ಕುತಂತ್ರ ನಡೆಯುತ್ತಿದೆ. ಇದರ ವಿರುದ್ಧ ಹಿಂದೂಗಳು ಸಂಘಟಿತರಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಅಭಿಪ್ರಾಯಪಟ್ಟರು.

Advertisement

ವಿಶ್ವ ಹಿಂದೂ ಪರಿಷತ್‌ ಮಂಗಳೂರು ವಿಭಾಗದ ವತಿಯಿಂದ ರವಿವಾರ ಶ್ರೀ ಕ್ಷೇತ್ರ ಕದ್ರಿಯಿಂದ ಕುತ್ತಾರು ಆದಿ ಕೊರಗಜ್ಜ ಕ್ಷೇತ್ರದವರೆಗೆ ನಡೆದ “ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ’ ಪಾದಯಾತ್ರೆ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಅವರು  ದಿಕ್ಸೂಚಿ ಭಾಷಣ ಮಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿಯೇ ಮುಸ್ಲಿಂ ತುಷ್ಟೀಕರಣ ಆರಂಭವಾಗಿತ್ತು. ಆರಂಭದಲ್ಲಿ ಕಾಂಗ್ರೆಸ್‌ನ ಮೂಲ ಪ್ರಾರ್ಥನೆಯಾದ ವಂದೇಮಾತರಂ ಮಹಮ್ಮದಾಲಿ ಜಿನ್ನನಿಗಾಗಿ ಕಡಿತವಾಯಿತು. ರಾಷ್ಟ್ರಧ್ವಜವಾಗಬೇಕಿದ್ದ ಕೇಸರಿ ಧ್ವಜ ಕೇಸರಿ, ಬಿಳಿ, ಹಸಿರು ಬಣ್ಣದ್ದಾಯಿತು. ರಘುಪತಿ ರಾಘವ ರಾಜಾರಾಮ್‌ ಕಡಿತವಾಯಿತು. ಈಗ ಹಿಜಾಬ್‌ ಹೆಸರಿನಲ್ಲಿ ಉಡುಪಿಯಲ್ಲಿ ಮುಗ್ಧ ಹೆಣ್ಣುಮಕ್ಕ ಳನ್ನು ಬಳಸಿ ದೇಶಾದ್ಯಂತ ಪ್ರತ್ಯೇಕತ ವಾದದ ಭಾವನೆ ಮೂಡಿಸುವ ಯತ್ನ ನಡೆಯುತ್ತಿದೆ. ಶಾಲಾ ಸಮವಸ್ತ್ರ ಧರಿಸಿ ಕಲಿತು ಉನ್ನತ ಸ್ಥಾನಕ್ಕೇರಿರುವ ಅನೇಕ ಮುಸ್ಲಿಂ ಮಹಿಳೆಯರಿದ್ದಾರೆ. ಅವರ ಶಿಕ್ಷಣಕ್ಕೆ ಇಲ್ಲಿ ಯಾವುದೇ ಅಡ್ಡಿಯಾ ಗಿಲ್ಲ. ಈಗ ಅಡ್ಡಿಯಾಗುತ್ತಿದೆ ಎನ್ನುತ್ತಿರು ವುದು ಖೇದನೀಯ ಎಂದರು.

ನಾವೂ ಬದುಕುವುದು ಬೇಡವೇ?
ಇತಿಹಾಸದ ಪುಟ ತೆರೆದು ಓದಿದರೆ ಹಿಂದೂ ಧರ್ಮದ ಯಾರೂ ಕೂಡ ತಾವಾಗಿಯೇ ಇನ್ನೊಬ್ಬರ ಮೇಲೆ ದಾಳಿ ಮಾಡಿದ ಉದಾಹರಣೆ ಇಲ್ಲ. ಸದಾ ನೋವು ತಿನ್ನುತ್ತಾ ಇರಬೇಕೇ? ಹಿಂದೂಗಳು ಬದುಕುವುದು ಬೇಡವೇ? ಅನ್ಯ ಧರ್ಮೀಯರನ್ನು ದ್ವೇಷಿಸಲು ಹೇಳಿಕೊಡುವ ಮತಗಳು ಮೇಲೋ ಅಥವಾ ಮಾನವರು ಮಾತ್ರವಲ್ಲದೆ ಸೃಷ್ಟಿಯ ಎಲ್ಲ ಜೀವಜಂತುಗಳಿಗೆ ಶ್ರೇಯಸ್ಸು ಬಯಸುವ ಹಿಂದೂ ಧರ್ಮ ಮೇಲೋ? ಎಂದು ಡಾ| ಪ್ರಭಾಕರ ಭಟ್‌ ಪ್ರಶ್ನಿಸಿದರು.

ವಿಹಿಂಪ ಪ್ರಾಂತ ಕಾರ್ಯಕಾರಿಣಿ ಸದಸ್ಯ ಕೃಷ್ಣಮೂರ್ತಿ, ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌, ಜಿಲ್ಲಾ ಅಧ್ಯಕ್ಷ ಗೋಪಾಲ ಕುತ್ತಾರ್‌, ಜಿಲ್ಲಾ ಸೇವಾ ಪ್ರಮುಖ್‌ ಪ್ರವೀಣ್‌ ಕುತ್ತಾರು, ಪಂಜಂದಾಯ, ಬಂಟ,
ವೈದ್ಯನಾಥ ದೈವಸ್ಥಾನ, ಕೊರಗಜ್ಜ ಆದಿ ಕ್ಷೇತ್ರದ ಮೊಕ್ತೇಸರ ರವೀಂದ್ರ ನಾಥ ಪೂಂಜಾ, ವಿನೋದ್‌ ಶೆಟ್ಟಿ ಬೊಲ್ಯಗುತ್ತು, ರತ್ನಾಕರ ಕಾವ,ಬಜರಂಗದಳ ವಿಭಾಗ ಸಂಚಾಲಕಭುಜಂಗ ಕುಲಾಲ್‌ ಉಪಸ್ಥಿತರಿದ್ದರು.
ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್‌ ಸ್ವಾಗತಿಸಿ, ಬಜರಂಗದಳ ಸುರಕ್ಷಾ ಪ್ರಮುಖ್‌ ಚೇತನ್‌ ಅಸೈಗೋಳಿ ವಂದಿಸಿದರು. ರವಿ ಅಸೈಗೋಳಿ ನಿರೂಪಿದರು.

Advertisement

ರಾಷ್ಟ್ರಧ್ವಜದ ಬಣ್ಣವೂ ಬದಲಾಗಬಹುದು
ಭಾರತಕ್ಕೆ ಸ್ವಾತಂತ್ರ್ಯ ಸನ್ನಿಹಿತವಾಗುತ್ತಿದ್ದಂತೆ ರಾಷ್ಟ್ರಧ್ವಜ ನಿರ್ಮಾಣಕ್ಕೆ ಏಳು ಜನ ಪ್ರಮುಖರ ಧ್ವಜ ಸಮಿತಿ ರಚನೆ ಮಾಡಲಾಯಿತು. ಈ ಸಮಿತಿ ರಾಷ್ಟ್ರಧ್ವಜದಲ್ಲಿ ಕೇಸರಿ ಬಣ್ಣ ಮತ್ತು ಕೊನೆಯಲ್ಲಿ ಚರಕದ ಚಿಹ್ನೆ ಬಳಸುವ ಸೂಚನೆಯನ್ನು ಕಾಂಗ್ರೆಸ್‌ಗೆ ನೀಡಿತು. ತ್ಯಾಗದ ಸಂಕೇತ ಕೇಸರಿ ಬಣ್ಣ. ಆದರೆ ಅಲ್ಪಸಂಖ್ಯಾಕರ ತುಷ್ಟೀಕರಣಕ್ಕೆ ರಾಷ್ಟ್ರ ಧ್ವಜದಲ್ಲಿ ಕೇಸರಿ, ಹಸುರು, ಬಿಳಿ ಬಂತು. ಈಗ ನಾವು ಅದನ್ನು ಗೌರವಿಸುವ. ರಾಷ್ಟ್ರ ಧ್ವಜ ಬರುವುದಕ್ಕೆ ಮೊದಲು ಇಲ್ಲಿ ಬ್ರಿಟಿಷರ ಧ್ವಜವಿತ್ತು. ಅದಕ್ಕೂ ಮೊದಲು ಹಸಿರು ಮತ್ತು ಚಂದ್ರನ ಧ್ವಜವಿತ್ತು. ಈಗ ರಾಜ್ಯ ಸಭೆಯಲ್ಲಿ ಬಹುಮತ ಇದ್ದರೆ ರಾಷ್ಟ್ರಧ್ವಜವನ್ನು ಬದಲಾಯಿಸಲೂ ಅವಕಾಶವಿದೆೆ.
– ಡಾ| ಕಲ್ಲಡ್ಕ ಪ್ರಭಾಕರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next