Advertisement
ಮುಂಬಯಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಭಾಗವತ್, ಪರಮಾತ್ಮನೆಂಬುವವನು ಸರ್ವವ್ಯಾಪಿ. ಹೆಸರು, ಸಾಮರ್ಥ್ಯ, ಗೌರವ ಬೇರೆ-ಬೇರೆಯಾಗಿದ್ದರೂ, ಮನು ಜರೆಲ್ಲರೂ ಸಮಾನರು. ಶಾಸ್ತ್ರಗಳ ಹೆಸರಿನಲ್ಲಿ ಕೆಲವು ಪಂಡಿತರು ಏನು ಬೋಧಿಸಿದ್ದರೋ ಅದು ಸುಳ್ಳು. ಜಾತಿ ಹಿರಿಮೆಯ ಭ್ರಮೆಯಿಂದ ನಮ್ಮನ್ನು ಹಾದಿತಪ್ಪಿಸಲಾಗಿದೆ. ಅಂಥ ಭ್ರಮೆಯನ್ನು ಬದಿಗೊತ್ತಬೇಕಿದೆ ಎಂದಿದ್ದರು.
ಬ್ರಾಹ್ಮಣ ಅರ್ಚಕ ಸಮುದಾಯವನ್ನು ಗುರಿ ಯಾ ಗಿಸಿದ್ದಾಗಿದೆ. ಈ ಮೂಲಕ ಬ್ರಾಹ್ಮಣರ ಧಾರ್ಮಿಕ ಭಾವ ನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬಿಹಾರ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಸುಧೀರ್ ಕುಮಾರ್ ಓಜಾ ಎನ್ನುವ ವಕೀಲರು ಅರ್ಜಿ ಸಲ್ಲಿಸಿದ್ದು, ಪ್ರಕರಣ ಸಂಬಂಧಿಸಿದ ವಿಚಾರಣೆಯನ್ನು ನ್ಯಾಯಾಲಯ ಜ.20ಕ್ಕೆ ಪಟ್ಟಿ ಮಾಡಿದೆ.