ಶಿವಮೊಗ್ಗ: ಆರ್ ಎಸ್ಎಸ್ ಜಾತಿಗೆ ಸೀಮಿತವಾದ ಸಂಘಟನೆ ಅಲ್ಲ. ರಾಷ್ಟ್ರಕ್ಕಾಗಿ ಕಾರ್ಯಕರ್ತರನ್ನು ಸೃಷ್ಟಿಸುವ ಸಂಘಟನೆ. ಈ ದೇಶದ ರಾಷ್ಟ್ರಪತಿ, ಪ್ರಧಾನಿ, ಆರ್ ಎಸ್ಎಸ್ ನಿಂದ ಸಂಸ್ಕಾರ ಪಡೆದವರು. ಆರ್ ಎಸ್ಎಸ್ ನಿಂದ ಸಂಸ್ಕಾರ ಪಡೆದ ಪ್ರಧಾನಿ ಕೆಂಪುಕೋಟೆಯ ಮೇಲೆ ರಾಷ್ಟ್ರ ಧ್ವಜ ಹಾರಿಸಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಸಚಿವರುಗಳಾಗಿ, ಜಿಲ್ಲೆಗಳಲ್ಲಿ ರಾಷ್ಟ್ರಧ್ವಜ ಹಾರಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಹರಿಪ್ರಸಾದ್ ಅವರು ಆರ್ ಎಸ್ಎಸ್ ಬಗ್ಗೆ ತಿಳುವಳಿಕೆಯಿಲ್ಲದೆ ಮಾತನಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆರ್ ಎಸ್ಎಸ್ ಒಂದು ಜಾತಿವಾದಿ ಸಂಘಟನೆ ಎಂದಿದ್ದಾರೆ. ಹರಿಪ್ರಸಾದ್ ಅವರು ಚಡ್ಡಿ, ಕರಿ ಟೋಪಿ ಹಾಕಿಕೊಂಡಿರುವ ಆರ್ ಎಸ್ಎಸ್ ನವರಿಗೆ ರಾಷ್ಟ್ರಧ್ವಜ ಹಾರಿಸಲು ಅರ್ಹತೆ ಇಲ್ಲ ಎಂದಿದ್ದಾರೆ. ಆರ್ ಎಸ್ಎಸ್ ಬಗ್ಗೆ ಯಾವುದೇ ಕಲ್ಪನೆಯಿಲ್ಲದೆ ಮಾತಾಡಲು ಅವರಿಗೆ ಏನು ಅಧಿಕಾರವಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಚಾರ್ಜ್ ಶೀಟ್ ಹಾಕಿದ ತಕ್ಷಣ ಅಪರಾಧಿ ಆಗುವುದಿಲ್ಲ, ಸಂಪತ್ ರಾಜ್ ಆರೋಪಿಯಷ್ಟೆ : ಸಿದ್ದರಾಮಯ್ಯ
ನರೇಂದ್ರ ಮೋದಿ, ಯಡಿಯೂರಪ್ಪ, ಬಿಜೆಪಿ ಬಗ್ಗೆ ಅವರಿಗೆ ಟೀಕೆ ಮಾಡುವುದು ಅಭ್ಯಾಸವಾಗಿ ಬಿಟ್ಟಿದೆ. ಇದೀಗ ಆರ್ ಎಸ್ಎಸ್ ಬಗ್ಗೆ ಟೀಕೆ ಮಾಡಿ ಸೋನಿಯಾ ಗಾಂಧಿಯವರನ್ನು ಮೆಚ್ಚಿಸಲು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಟೀಕೆ ಮಾಡುವುದಾದರೇ ವೈಯಕ್ತಿಕ ಟೀಕೆ ಮಾಡಲಿ. ಅದನ್ನು ಬಿಟ್ಟು ತಿಳುವಳಿಕೆ ಇಲ್ಲದೇ ಮಾತನಾಡಬೇಡಿ ಎಂದು ಸಲಹೆ ನೀಡಿದರು.
ಈವರೆಗೆ ಪಕ್ಷ ಹಾಗೂ ನಾಯಕರ ಟೀಕೆ ಮಾಡಿದ್ದಕ್ಕೆ ಕಾಂಗ್ರೆಸ್ ಮೂಲೆ ಗುಂಪಾಗಿದೆ. ಇನ್ನೂ ಆರ್ ಎಸ್ಎಸ್ ಟೀಕೆ ಮಾಡಿದರೆ ಕಾಂಗ್ರೆಸ್ ಧೂಳಾಗಿ ಹೋಗುತ್ತದೆ ಎಂದು ಸಚಿವ ಈಶ್ವರಪ್ಪ ಟೀಕಿಸಿದರು.