ಮಲ್ಪೆ: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ನೀರಾವರಿ ಇಲಾಖೆ ಮತ್ತು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಕೆರೆಗಳ ಅಭಿವೃದ್ಧಿ ಹಾಗೂ ಕಿಂಡಿ ಅಣೆಕಟ್ಟುಗಳ ಅಭಿವೃದ್ಧಿಗೆ ಇದುವರೆಗೆ 20 ಕೋ. ರೂ.ಗಳನ್ನು ವಿನಿಯೋಗಿಸಲಾಗಿದೆ ಎಂದು ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಬುಧವಾರ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 4.25 ಕೋ. ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು, ನದಿದಂಡೆ ಸಂರಕ್ಷಣೆ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕೆಲವೆಡೆ ಕಿಂಡಿ ಅಣೆಕಟ್ಟುಗಳ ಗುಣಮಟ್ಟದ ಬಗ್ಗೆ ದೂರು ಕೇಳಿಬರುತ್ತಿದ್ದು, ಲೋಪದೋಷಗಳು ಇದ್ದಲ್ಲಿ ತತ್‌ಕ್ಷಣ ಸರಿಪಡಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಸದಸ್ಯ ರಮೇಶ್ ಕಾಂಚನ್, ಪಂಚಾಯತ್ ಸದಸ್ಯ ಲಕ್ಷ್ಮಣ ಪೂಜಾರಿ, ಗುಂಡು ಬಿ. ಅಮೀನ್, ಸಾಯಿರಾಜ್ ಕೋಟ್ಯಾನ್, ಐರಿನ್ ಅಂದ್ರಾದೆ, ನವೀನ್ ಕೋಟ್ಯಾನ್, ರಾಘವ ಜಿ. ಕೆ., ಹರೀಶ್ ತಿಂಗಳಾಯ, ಮೋಹನ್ ಸುವರ್ಣ, ಗೋವರ್ಧನ ಅಮೀನ್, ಸುನಿಲ್ ಅಮೀನ್, ರಾಘವೇಂದ್ರ, ಸುಕೇಶ್, ಸತೀಶ್, ಪ್ರಸಾದ್, ಪ್ರಕಾಶ್ ಜಿ. ಕೊಡವೂರು, ಗುತ್ತಿಗೆದಾರ ಅಜಿತ್ ಶೆಟ್ಟಿ ಉಪಸ್ಥಿತರಿದ್ದರು.
4.25 ಕೋ.ರೂ. ಅಭಿವೃದ್ಧಿ ಕಾಮಗಾರಿ
ಪ್ರಸ್ತುತ 4.25 ಕೋ. ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಉಡುಪಿ ವಿಧಾನಸಭಾ ಕ್ಷೇತ್ರದ ಕಿದಿಯೂರು, ಕೊಡವೂರು, ನೀಲಾವರ, ಚೇರ್ಕಾಡಿ, ಹಾರಾಡಿ, ಪರ್ಕಳ, ಕರ್ಜೆ, 38ನೇ ಕಳತ್ತೂರು ಗ್ರಾಮಗಳ ಕಿಂಡಿ ಅಣೆಕಟ್ಟು ಮತ್ತು ನದಿ ಸಂರಕ್ಷಣಾ ಕಾಮಗಾರಿಗೆ ಸಚಿವ ಪ್ರಮೋದ್ ಮಧ್ವರಾಜ್ ಶಿಲಾನ್ಯಾಸ ನೆರವೇರಿಸಿದರು.
ಕುಮ್ರಗೋಡು, ಚಾಂತಾರು, ಕೊಕ್ಕರ್ಣೆ, ಬಡಾನಿಡಿಯೂರು ಮತ್ತು ನಾಲ್ಕೂರು ಗ್ರಾಮಗಳ ಕಿಂಡಿ ಅಣೆಕಟ್ಟುಗಳನ್ನು ಉದ್ಘಾಟಿಸಿದರು.