Advertisement

ರೌಡಿ ಮಂಜನ ಮನೆಯಲ್ಲಿ 8 ಲಕ್ಷ ರೂ. ಜಪ್ತಿ

11:47 AM Mar 29, 2019 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರೌಡಿಗಳ ಚಟುವಟಿಕೆಗಳ ಮೇಲೆ ಹದ್ದಿನಕಣ್ಣಿಟ್ಟಿರುವ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಗುರುವಾರ ಬೆಳಗ್ಗೆ ನಗರದ ಹತ್ತು ಮಂದಿ ರೌಡಿಗಳ ನಿವಾಸಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು,ರೌಡಿಯೊಬ್ಬನ ನಿವಾಸದಲ್ಲಿ ದಾಖಲೆಯಿಲ್ಲದ 8 ಲಕ್ಷ ರೂ ಜಪ್ತಿ ಮಾಡಿಕೊಂಡಿದೆ.

Advertisement

ಸಿಸಿಬಿಯ 10 ತಂಡಗಳು ರೌಡಿಗಳಾದ ಮಂಜುನಾಥ್‌ ಅಲಿಯಾಸ್‌ ಅಪ್ಪಿ, ಡಾಬರ್‌ ಮೂರ್ತಿ, ರೌಡಿ ಲಕ್ಷ್ಮಣನ ಸಹಚರನಾಗಿದ್ದ ಆ್ಯಪಲ್‌ ಸಂತು, ಡಬಲ್‌ ಮೀಟರ್‌ ಮೋಹನ, ವಿಲ್ಸನ್‌ ಗಾರ್ಡನ್‌ ನಾಗ, ಕೋತಿರಾಮ, ಧೋಬಿಘಾಟ್‌ ನಾಗ,ಲಕ್ಷ್ಮಣನ ಹತ್ಯೆ ಪ್ರಕರಣದ ಆರೋಪಿಗಳಾದ ಕ್ಯಾಟ್‌ರಾಜ, ರೂಪೇಶ, ಹೇಮಿ ಮನೆಗಳಲ್ಲಿ ಶೋಧ ಕಾರ್ಯಚರಣೆ ನಡೆಸಿವೆ.

ಈ ಪೈಕಿ ಹಂದ್ರಳ್ಳಿಯಲ್ಲಿರುವ ಮಂಜುನಾಥ್‌ ನಿವಾಸದಲ್ಲಿ ದೊರೆತ ಎಂಟು ಲಕ್ಷ ರೂ.ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಇದುವರೆಗೂ ಆತ ಹಣಕ್ಕೆ ದಾಖಲೆಯನ್ನು ಒದಗಿಸಿಲ್ಲ. ಅದೇ ರೀತಿ ಕೆಲ ಆರೋಪಿಗಳ ಮನೆಯಲ್ಲಿ ದೊರೆತ ಪೆಪ್ಪರ್‌ ಸ್ಪ್ರೆ„ ಬಾಟಲ್‌ ಹಾಗೂ ಡ್ರ್ಯಾಗರ್‌ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ರೌಡಿಗಳ ಮೇಲೆ ನಿಗಾ ಇಡಲಾಗಿದೆ. ಹೀಗಾಗಿ ಮುಂಜಾಗ್ರತಾ ಸಲುವಾಗಿ ರೌಡಿಗಳ ನಿವಾಸಗಳ ಮೇಲೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಜತೆಗೆ, ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next