Advertisement

Gangavathiಅಕಾಲಿಕ ಮಳೆಗಾಳಿಗೆ 61 ಕೋ.ರೂ.ಮೌಲ್ಯದ ಭತ್ತದ ಬೆಳೆ ನಷ್ಟ ಶೀಘ್ರ ಪರಿಹಾರ: ತಂಗಡಗಿ

07:11 PM Nov 11, 2023 | Team Udayavani |

ಗಂಗಾವತಿ: ಇತ್ತೀಚೆಗೆ ಸುರಿದ ಅಕಾಲಿಕ ಮಳೆ ಗಾಳಿ ಪರಿಣಾಮ ತಾಲೂಕಿನ ವಿವಿಧ ಹೋಬಳಿಗಳಲ್ಲಿ ಅಂದಾಜು 61 ಕೋಟಿ.ರೂ.ಮೌಲ್ಯದ ಭತ್ತದ ಬೆಳೆ ನಷ್ಟವಾಗಿದ್ದು ಸರಕಾರ ಸರ್ವೇ ನಡೆಸಿ ವೈಜ್ಞಾನಿಕ ರೀತಿಯಲ್ಲಿ ಪರಿಹಾರದ ವಿತರಣೆ ಮಾಡಲಾಗುತ್ತದೆ.ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಕನ್ನಡ ಸಂಸ್ಕೃತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ಹೇಳಿದರು.

Advertisement

ಅವರು ತಾಲೂಕಿನ ಮರಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಮಳೆಯಿಂದ ನೆಲಕ್ಕೆ ಬಿದ್ದಿರುವ ಭತ್ತದ ಬೆಳೆಯನ್ನು ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಒಂದೇ ಬಳೆಯ ಮಧ್ಯೆ ಪ್ರಕೃತಿ ವಿಕೋಪದ ಪರಿಣಾಮವಾಗಿ ಅಕಾಲಿಕ ಮಳೆಯಿಂದ ಸುಮಾರು 1200 ಹೆಕ್ಟೇರ್ ನಲ್ಲಿ ಬೆಳೆಯಲಾಗಿದ್ದ ಭತ್ತದ ಬೆಳೆ ನೆಲಕ್ಕೆ ಬಿದ್ದು ಸುಮಾರು 61 ಕೋಟಿಯಷ್ಟು ನಷ್ಟವಾಗಿದೆ. ಇದರಿಂದ ರೈತರಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ರೈತರು ಆತಂಕಪಡುವ ಅಗತ್ಯವಿಲ್ಲ. ಈಗಾಗಲೇ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಸರ್ವೇ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಒಂದೆರಡು ದಿನಗಳಲ್ಲಿ ವರದಿ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಪೂರ್ಣ ವರದಿ ಬಂದ ನಂತರ ಸಿಎಂ ಅವರನ್ನು ಭೇಟಿಯಾಗಿ ನಷ್ಟ ಪರಿಹಾರಕ್ಕೆ ಮನವಿ ಮಾಡಲಾಗುತ್ತದೆ. ಶ್ರೀರಾಮನಗರ, ಮರಳಿ, ಢಣಾಪೂರ, ಹೆಬ್ಬಾಳ, ಮುಸ್ಟೂರು, ಹೇರೂರು ಸುತ್ತಲಿನ ಗ್ರಾಮಗಳ ಹಣವಾಳು ಸೇರಿ ಹಲವು ಗ್ರಾಮಗಳಲ್ಲಿ ಭತ್ತದ ಗದ್ದೆ ನೆಲಕ್ಕೆ ಬಿದ್ದು ನಷ್ಟವಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರೆಡ್ಡಿ ಶ್ರೀನಿವಾಸ, ಅಮರೇಶ ಗೋನಾಳ, ಬಿ.ಫಕೀರಯ್ಯ, ಶಿವರೆಡ್ಡಿ ನಾಯಕ, ಶರಣೇಗೌಡ, ಮಹಮದ್ ರಫಿ, ದ್ಯಾಮಣ್ಣ, ಸಿದ್ದನಗೌಡ, ಪ್ರಕಾಶ ಭಾವಿ, ಗವಿಸಿದ್ದಪ್ಪ, ಗಂಗಾವತಿ, ಕಾರಟಗಿ ತಹಸೀಲ್ದಾರ್‌ಗಳು, ಸಹಾಯಕ ಕೃಷಿ ನಿರ್ದೇಶಕರುಗಳು, ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next