ಕೆಂಗೇರಿ: ಯಶವಂತಪುರ ಬಿಜೆಪಿ ಮಂಡಲದ ವತಿಯಿಂದ ಪ್ರವಾಹ ಪೀಡಿತರಾದ ಕೊಡಗಿನ ಜನರಿಗೆ ಸಹಾಯ ಮಾಡುವ ಸಲುವಾಗಿ ಕ್ಷೇತ್ರದ ಎಲ್ಲಾ ಮುಖಂಡರ ಜೊತೆಯಲ್ಲಿ ಸಾರ್ವಜನಿಕರಿಂದ ವಸ್ತು ರೂಪದಲ್ಲಿ ಹಣದ ರೂಪದಲ್ಲಿ ಸಂಗ್ರಹಿಸಲಾಗಿದೆ.
15 ಶಕ್ತಿ ಕೇಂದ್ರದ ಎಲ್ಲಾ ಕಾರ್ಯಕರ್ತರು ಸತತ ಮೂರು ದಿನಗಳಿಂದ ಸಂಗ್ರಹಿಸಿದ ವಸ್ತುಗಳನ್ನು ಮೂರು ವಾಹನಗಳಲ್ಲಿ ಕೊಡಗಿನ ನೆರೆ ಸಂತ್ರಸ್ತರಿಗೆ, ಕೇಂದ್ರ ಸಚಿವರಾದ ಸದಾನಂದ ಗೌಡ, ಶೋಭಾ ಕರಂದ್ಲಾಜೆ ಹಾಗೂ ಅಲ್ಲಿನ ಜಿಲ್ಲಾ ಮಂಡಲಾದ್ಯಕ್ಷರ ಸಮ್ಮುಖದಲ್ಲಿ ಅವಶ್ಯಕತೆಗೆ ಆನುಗುಣವಾಗಿ ಜನರಿಗೆ ನೇರವಾಗಿ ತಲುಪಿಸಲಾಗಿದೆ ಎಂದು ಯಶವಂತಪುರ ಬಿಜೆಪಿ ಮಂಡಲದ ಅದ್ಯಕ್ಷ ಸಿ.ಎಂ.ಮಾರೇಗೌಡ ತಿಳಿಸಿದರು.
ಇಂದು ಸಹ ನಾಲ್ಕು ಮೆಟ್ರಿಕ್ ಟನ್ ಅಕ್ಕಿ, 5ಸಾವಿರ ಲೀಟರ್ ಕುಡಿಯುವ ನೀರಿನ ಬಾಟಲ್, 6ಲಕ್ಷ ರೂ. ಹೊಸ ಬಟ್ಟೆಗಳು, ಔಷಧಿಗಳು, 2ಸಾವಿರ ಕಂಬಳಿಗಳನ್ನು ಕಳಿಸಲಾಗುತ್ತಿದೆ. ಇಂದು ಮಧ್ಯಾಹ್ನ 2ಲಕ್ಷ ಮೌಲ್ಯದ ಇನ್ನೊಂದು ವಾಹನದಲ್ಲಿ ಕಂಬಳಿಗಳನ್ನು ಕಳುಹಿಸಲಾಗುವುದು ಎಂದು ತಿಳಿಸಿದರು.
ಇಲ್ಲಿಯ ತನಕ ಸುಮಾರು 12ಲಕ್ಷದ ವಸ್ತುಗಳನ್ನು ವಾಹನದಲ್ಲಿ ಸಾಗಿಸಲಾಗಿದೆ ಹಾಗೂ 5ಲಕ್ಷಗಳ ಹಣ ಸಂಗ್ರಹವಾಗಿದೆ. ಈ ಹಣವನ್ನು ಜಿಲ್ಲಾಧಿಕಾರಿಗಳ “ಸೇವಾ ಭಾರತಿ ಪರಿಹಾರ ನಿಧಿ”ಗೆ ಡಿ.ಡಿ. ರೂಪದಲ್ಲಿ ಕೂಡಲಾಗುತ್ತದೆ ಎಂದು ಪಾಲಿಕೆ ಸದಸ್ಯ ವಿ.ವಿ.ಸತ್ಯನಾರಾಯಣ್ ತಿಳಿಸಿದರು.
ಈ ವೇಳೆ ಮಾತನಾಡಿದ ಮೋರ್ಚಾದ ಜೆ.ರಮೇಶ್, ಕೊಡಗಿನ ನೆರೆಗೆ ಸಹಕರಿಸಿದ ಕೇತ್ರದ ವಿವಿದ ಮಂಡಲದ ಮುಖಂಡರು ಕಾರ್ಯಕರ್ತರು ಶ್ರಮವಹಿಸಿದ್ದಾರೆ. ನೆರೆ ಸಂತ್ರಸ್ಥರಿಗೆ ವಿತರಿಸುವ ವಾಹನದಲ್ಲಿ ಮಂಡಲದ ಮುಖಂಡರಾದ ಶಶಿಕುಮಾರ್,ಜಯರಾಮ್,ಸೌಮ್ಯ ಬಾರ್ಗವಿ, ಪ್ರೇಮ, ಸಂತೋಷ್, ಹಾಗೂ ನವೀನ್ ತೆರಳಿ ಸಂತ್ರಸ್ಥರಿಗೆ ನೇರವಾಗಿ ವಸ್ತುಗಳನ್ನು ವಿತರಿಸುವಾಗಿ ತಿಳಿಸಿದರು.