Advertisement

4.15 ಕೋಟಿ ರೂ. ಹಳೇ ನೋಟು ವಶ: 11 ಮಂದಿ ಬಂಧನ

01:31 PM Jun 07, 2017 | Team Udayavani |

ಬೆಂಗಳೂರು: ನಗರದಲ್ಲಿ ಬ್ಲಾಕ್‌ ಆ್ಯಂಡ್‌ ವೈಟ್‌ ದಂಧೆ ಮೂಲಕ ಅಮಾನ್ಯಗೊಂಡ ಹಳೇ ನೋಟುಗಳ ವಿನಿಮಯ ಮುಂದುವರಿದಿದ್ದು, ಈ ದಂಧೆಯಲ್ಲಿ ತೊಡಗಿದ್ದ 11 ಮಂದಿಯನ್ನು ದಕ್ಷಿಣ ವಿಭಾಗದ ಬಸವನಗುಡಿ ಮತ್ತು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 4.15 ಕೋಟಿ ರೂ. ಮೌಲ್ಯದ ಹಳೇ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಬಸವನಗುಡಿಯ ಎಸ್‌ಎಲ್‌ವಿ ಹೋಟೆಲ್‌ ಬಳಿ ಅಮಾನ್ಯಗೊಂಡ ನೋಟುಗಳ ಬದಲಾವಣೆಗೆ ಯತ್ನಿಸಿದ್ದ ಮೊಹಮ್ಮದ್‌ ಇಕ್ಬಾಲ್‌ (40), ರಾಜೇಶ್‌ (30), ರವೀಂದ್ರನಾಥ್‌ (44) ಎಂಬುವವರನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ ಸಾವಿರ ರೂ. ಮುಖಬೆಲೆಯ 176 ಕಟ್ಟುಗಳಲ್ಲಿ 1.76 ಕೋಟಿ ರೂ. ಹಾಗೂ 500 ರೂ. ಮುಖ ಬೆಲೆಯ 39 ಲಕ್ಷ ರೂ. ಸೇರಿದಂತೆ ಒಟ್ಟು 2.15 ಕೋಟಿ ರೂ. ಹಳೆ ನೋಟುಗಳು, 2 ಮೊಬೈಲ್‌, 7 ಲಕ್ಷ ರೂ. ಮೌಲ್ಯದ ಕಾರು, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅದೇ ರೀತಿ ಬ್ರಿಗೇಡ್‌ ಮಿಲೇನಿಯಮ ಅಪಾರ್ಟ್‌ಮೆಂಟ್‌ನ ಬಿಒಬಿ ಕಾಲೋನಿಯ ಕೆರೆ ರಸ್ತೆ ಮತ್ತು ಪುಟ್ಟೇನಹಳ್ಳಿಯ ಕೆರೆ ಬಳಿ ವಾಹನ ತಪಾಸಣೆ ವೇಳೆ ಎರಡು ಕಾರುಗಳಲ್ಲಿ ಇಟ್ಟಿದ್ದ 2 ಕೋಟಿ ರೂ. ಮೌಲ್ಯದ ಹಳೆ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ  ಸಂಜಯ್‌ನಗರದ ಮುರುಳಿ (39), ಬಾಲಾಜಿ (36), ಶಫೀಕ್‌ (36) ಮತ್ತು ಮಂಜುನಾಥ್‌ (25), ಚಿಕ್ಕಜಾಲದ ಭರತ್‌ (21), ಉತ್ತರಹಳ್ಳಿಯ ಶ್ರೀನಿವಾಸ (50), ಶಿಢಘಟ್ಟದ ಶ್ರೀನಿವಾಸ ಮೂರ್ತಿ (48), ವೇಲೂರಿನ ಚಂದ್ರೇಗೌಡ (31) ಎಂಬುವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next