ಬೆಂಗಳೂರು: ರಾಜ್ಯದಲ್ಲಿ ರೈತರ ಸಾಲ ಮನ್ನಾಗೆ ಸಂಬಂಧಿಸಿದಂತೆ ವಾಣಿಜ್ಯ ಬ್ಯಾಂಕ್‌ಗಳ 7.49 ಲಕ್ಷ ರೈತರ 3929 ಕೋಟಿ ರೂ. ಮನ್ನಾ ಮಾಡಲಾಗಿದೆ.
ಉಳಿದ 1.5 ಲಕ್ಷ ರೈತರ ಪಟ್ಟಿ ಸಿದ್ಧಗೊಂಡಿದ್ದು 900 ಕೋಟಿ ರೂ. ಮೊತ್ತ ಏ.23 ರ ನಂತರ ಬಿಡುಗಡೆಯಾಗಲಿದೆ ಎಂದು ಸಾಲಮನ್ನಾ ಯೋಜನೆಯ ನೋಡಲ್ ಅಧಿಕಾರಿ ಮನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ಸಹಕಾರ ಬ್ಯಾಂಕ್‌ಗಳ ಸಾಲ ಮನ್ನಾಗೆ ಸಂಬಂಧಿಸಿದಂತೆ 8.1 ಲಕ್ಷ ರೈತರ 3488 ಕೋಟಿ ರೂ. ಏಪ್ರಿಲ್ ಅಂತ್ಯದವರೆಗೆ ಬಿಡುಗಡೆಯಾಗಿದೆ. ಪ್ರತಿ ತಿಂಗಳ ಸಾಲ ಮನ್ನಾ ಬಾಬ್ತು ಹಣ ಸಕಾಲಕ್ಕೆ ಬಿಡುಗಡೆ ಮಾಡಲಾಗುತ್ತಿದೆ.
ಇದುವರೆಗೂ ಸಹಕಾರ ಮತ್ತು ವಾಣಿಜ್ಯ ಬ್ಯಾಂಕುಗಳ 15.5 ಲಕ್ಷ ರೈತರ 7417 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.