Advertisement

ಆಧಾರ್‌ ಸೇವೆಗೆ 20 ರೂ

01:10 AM Mar 08, 2019 | Team Udayavani |

ಹೊಸದಿಲ್ಲಿ: ಉದ್ಯಮಗಳು ಮತ್ತು ವ್ಯಾಪಾರ ಸಂಸ್ಥೆಗಳು ಆಧಾರ್‌ ಬಳಸಿ ಗ್ರಾಹಕರ ದಾಖಲೆ ಪರಿಶೀಲನೆ ನಡೆಸಿದರೆ ಪ್ರತಿ ಬಳಕೆಗೆ 20 ರೂ. ಪಾವತಿಸಬೇಕು ಮತ್ತು ಪ್ರತಿ ವ್ಯವಹಾರ ದೃಢೀಕರಣಕ್ಕೂ 50 ಪೈಸೆ ನೀಡಬೇಕೆಂದು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ಗುರುವಾರ ತಿಳಿಸಿದೆ.

Advertisement

ಈ ಕುರಿತು ಪ್ರಕಟಣೆ ಹೊರಡಿಸಿರುವ ಯುಐಡಿಎಐ “ಆಧಾರ್‌ ದೃಢೀಕರಣ ಸೇವೆ ಬಳಸುವವರು ಇನ್ನು ಮುಂದೆ ಹಣ ಪಾವತಿಸಬೇಕು, ಪ್ರತಿ ಇ ಕೆವೈಸಿ ವ್ಯವಹಾರಕ್ಕೆ 20 ರೂ(ತೆರಿಗೆ ಸೇರಿ). ವ್ಯವಹಾರ ದೃಢೀಕರಣಕ್ಕೆ 50 ಪೈಸೆ(ತೆರಿಗೆ ಸೇರಿ) ನೀಡಬೇಕು ಎಂದು ಹೇಳಿದೆ. ಈ ಹೊಸ ನೀತಿ ಸರ್ಕಾರಿ ಉದ್ದಿಮೆಗಳು ಮತ್ತು ಇಲಾಖೆಗಳಿಗೆ ಅನ್ವಯವಾಗುವುದಿಲ್ಲ ಎಂದಿದೆ.
 

Advertisement

Udayavani is now on Telegram. Click here to join our channel and stay updated with the latest news.

Next