Advertisement

18 ಸಾವಿರ ಕೋಟಿ ರೂ.ಗೆ ಏರಲಿದೆ ಐಪಿಎಲ್‌ ನೇರ ಪ್ರಸಾರ ಹಕ್ಕು?

03:45 AM Feb 13, 2017 | Team Udayavani |

ಮುಂಬಯಿ: ಐಪಿಎಲ್‌ 10ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಈ ಬೆನ್ನಲ್ಲೇ ಮುಂಬರುವ ಆವೃತ್ತಿಗಳ ನೇರ ಪ್ರಸಾರ ಹಕ್ಕನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ಪ್ರತಿಷ್ಠಿತ ಟಿವಿ ಸಂಸ್ಥೆಗಳಿಗೆ ಕಹಿ ಸುದ್ದಿಯೊಂದು ಪ್ರಕಟವಾಗಿದೆ. 

Advertisement

2018ರಲ್ಲಿ ಮುಂದಿನ 10 ವರ್ಷದ ಐಪಿಎಲ್‌ ಟಿವಿ ನೇರ ಪ್ರಸಾರದ ಹಕ್ಕಿಗಾಗಿ ಪರಿಷ್ಕೃತ ಬಿಡ್ಡಿಂಗ್‌ ನಡೆಯಲಿದೆ. ಇದೇ ವೇಳೆ ಆನ್‌ಲೈನ್‌ ಪ್ರಸಾರದ ಹಕ್ಕುಗಳಿಗೂ ಬಿಡ್ಡಿಂಗ್‌ ನಡೆಯಲಿದೆ. ಆನ್‌ಲೈನ್‌ ಒಪ್ಪಂದ ಅವಧಿ 4 ವರ್ಷದ್ದು ಆಗಿರುತ್ತದೆ. ಇದೆಲ್ಲದರ ಒಟ್ಟು ಆದಾಯ ಸೇರಿ 18 ರಿಂದ 30 ಸಾವಿರ ಕೋಟಿ ರೂ. ಮೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ವತಃ ಬಿಸಿಸಿಐ ಮೂಲಗಳು ಈ ವಿಷಯವನ್ನು ಮಾಧ್ಯಮಗಳಿಗೆ ಖಚಿತಪಡಿಸಿವೆ.

ಹೆಚ್ಚಳಕ್ಕೆ ಕಾರಣವೇನು?: ಭಾರತ,  ಇಂಗ್ಲೆಂಡ್‌, ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿಗಳು ಮಾಡಿಕೊಂಡಿದ್ದ ಬಿಗ್‌ ಥ್ರಿà ನೀತಿಗೆ ಇತ್ತೀಚೆಗೆ ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ) ಕೊಕ್‌ ನೀಡಿತ್ತು. ಇದರಿಂದ ಬಿಸಿಸಿಐಗೆ ಸಾಕಷ್ಟು ಆರ್ಥಿಕ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಇದೆಲ್ಲದರ ಪರಿಣಾಮ ಮುಂದಿನ ಆವೃತ್ತಿ ಟಿವಿ ಪ್ರಸಾರದ ಹಕ್ಕುಗಳಲ್ಲಿ ಕೋಟ್ಯಂತರ ರೂ. ಏರಿಕೆ ಕಾಣಲು ಕಾರಣವಾಗಿದೆ. ನೇರ ಪ್ರಸಾರದ ಹಕ್ಕುಗಳಿಂದ ಬರುವ ಆದಾಯದಲ್ಲಿ ಬಿಸಿಸಿಐಗೆ ಸಾಕಷ್ಟು ಆರ್ಥಿಕ ಹರಿವು ಆಗಲಿದೆ ಎಂದು ಅಂದಾಜಿಸಲಾಗಿದೆ.

ಈ ಆವೃತ್ತಿಗೆ ಸೋನಿ ನೆಟ್‌ವರ್ಕ್‌ ಒಪ್ಪಂದ ಅಂತ್ಯ: ಕಳೆದ 10 ವರ್ಷಗಳಿಂದ ಐಪಿಎಲ್‌ ಪ್ರಸಾರದ ಹಕ್ಕನ್ನು ಸೋನಿ ಪಿಕ್ಚರ್ ನೆಟ್‌ವರ್ಕ್‌ ಇಂಡಿಯಾ (ಎಸ್‌ಪಿಎನ್‌ಐ) ಪಡೆದುಕೊಂಡಿತ್ತು. ಒಪ್ಪಂದ ಪ್ರಕಾರ 2017ಕ್ಕೆ ಅವಧಿ ಅಂತ್ಯಗೊಳ್ಳಲಿದೆ. ಹೊಸ ಬಿಡ್ಡಿಂಗ್‌ಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಅಕ್ಟೋಬರ್‌ 25ರೊಳಗೆ ಅರ್ಜಿ ಸಲ್ಲಿಸಲು ಆಸಕ್ತ ಟಿವಿ ಸಂಸ್ಥೆಗಳಿಗೆ ಕಾಲಾವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next