Advertisement

Bangladesh Journalist: ಬಾಂಗ್ಲಾ ಸರೋವರದಲ್ಲಿ ಪತ್ರಕರ್ತೆಯ ಮೃತದೇಹ ಪತ್ತೆ…

04:44 PM Aug 28, 2024 | Team Udayavani |

ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಹಾತಿರ್ ಸರೋವರದಲ್ಲಿ ಮಹಿಳಾ ಪತ್ರಕರ್ತೆಯ ಮೃತದೇಹವೊಂದು ಪತ್ತೆಯಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Advertisement

ಬಾಂಗ್ಲಾದ ‘ಘಾಜಿ ಟಿವಿ’ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಾರಾ ರಹ್ನುಮಾ ಎಂಬ ಮಹಿಳಾ ಪತ್ರಕರ್ತೆ ಶವವಾಗಿ ಪತ್ತೆಯಾಗಿದ್ದಾರೆ.

ಘಾಜಿ ಚಾನೆಲ್ ಅನ್ನು ಕೈಗಾರಿಕೋದ್ಯಮಿ ಹಾಗೂ ಬಾಂಗ್ಲಾದೇಶದ ಜವಳಿ ಸಚಿವರಾಗಿರುವ ಗೋಲಂ ದಸ್ತಗೀರ್ ಘಾಜಿ ಅವರು ನಡೆಸುತ್ತಿದ್ದಾರೆ. ಅವರು ‘ಅವಾಮಿ ಲೀಗ್’ ಜೊತೆ ಸಂಬಂಧ ಹೊಂದಿದ್ದರು. 2024 ರಲ್ಲಿ, ಅವರು ಸತತ ನಾಲ್ಕನೇ ಬಾರಿಗೆ ನಾರಾಯಣಗಂಜ್ ಪ್ರದೇಶದಿಂದ ಸಂಸದರಾದರು. ಈಗ ಸರ್ಕಾರ ಬದಲಾದ ನಂತರ ಅವರನ್ನೂ ಬಂಧಿಸಲಾಗಿದೆ ಎನ್ನಲಾಗಿದೆ.

ಮಂಗಳವಾರ ತಡರಾತ್ರಿ (ಆಗಸ್ಟ್ 27) 12:30 ರ ಸುಮಾರಿಗೆ ಢಾಕಾದಲ್ಲಿರುವ ಹತಿರ್‌ಜೀಲ್ ಸರೋವರದಲ್ಲಿ ಸಾರಾ ರಹ್ನುಮಾ ಅವರ ದೇಹ ತೇಲುತ್ತಿರುವುದು ಪತ್ತೆಯಾಗಿದ್ದು ಇದನ್ನು ಕಂಡ ಅಲ್ಲಿನ ಸ್ಥಳೀಯರು ಸರೋವರದಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ತಪಾಸಣೆ ನಡೆಸಿದ ವೈದ್ಯರು ಪತ್ರಕರ್ತೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಸಾರಾ ಸಾಯುವ ಮೊದಲು ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು ಅದರಲ್ಲಿ ಫಹೀಮ್ ಫೈಸಲ್ ಎಂಬ ವ್ಯಕ್ತಿಯನ್ನು ಟ್ಯಾಗ್ ಮಾಡಿ ಅವರ ಸ್ನೇಹಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ ಮತ್ತು ನಿಮ್ಮ ಎಲ್ಲಾ ಕನಸುಗಳು ನನಸಾಗಲಿ, ನಾವು ಅನೇಕ ಯೋಜನೆಗಳನ್ನು ಹೊಂದಿದ್ದೇವೆ, ಆದರೆ ಆ ಯೋಜನೆಗಳನ್ನು ಪೂರೈಸಲು ಸಾಧ್ಯವಾಗದಿದ್ದಕ್ಕಾಗಿ ನನಗೆ ವಿಷಾದವಿದೆ ಎಂದು ಬರೆದಿದ್ದಾರೆ.

Advertisement

ಇನ್ನೊಂದು ಪೋಸ್ಟ್‌ನಲ್ಲಿ, ಒಬ್ಬ ವ್ಯಕ್ತಿಯು ಸತ್ತಂತೆ ಬದುಕುವುದಕ್ಕಿಂತ ಸಾಯುವುದು ಉತ್ತಮ ಎಂದು ಬರೆದಿದ್ದಾರೆ. ಸದ್ಯ ಈ ಪೋಸ್ಟ್ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next