Advertisement

Vietnam Trip: ಈ ಕಂಪನಿಯ 4 ಸಾವಿರ ನೌಕರರಿಗೆ ವಿಯೆಟ್ನಾಂ ಪ್ರವಾಸ ಭಾಗ್ಯ!

08:42 PM Aug 28, 2024 | Team Udayavani |

ನವದೆಹಲಿ: ಸನ್‌ ಫಾರ್ಮಾಸುಟಿಕಲ್ಸ್‌ನ ಮಾಲೀಕ, ಖ್ಯಾತ ಉದ್ಯಮಿ ದಿಲೀಪ್ ಶಾಂಘ್ವಿ ತಮ್ಮ ಸಂಸ್ಥೆಯ 4,500 ಉದ್ಯೋಗಿಗಳನ್ನು 2 ವಾರಗಳ ಕಾಲ ವಿಯೆಟ್ನಾಂ ಪ್ರವಾಸಕ್ಕೆ ಕರೆದೊಯ್ದಿದ್ದಾರೆ.

Advertisement

ವಿಯೆಟ್ನಾಂನ ಪ್ರಮುಖ ಪ್ರವಾಸಿ ತಾಣಗಳಿಗೆ ಉದ್ಯೋಗಿಗಳನ್ನು ಕರೆದೊಯ್ಯಲಾಗುತ್ತದೆ. ಇದೇ ಮಂಗಳವಾರದಿಂದ ಪ್ರವಾಸ ಆರಂಭವಾಗಿದೆ. ದಿಲೀಪ್‌ ಅವರು ಭಾರತದ 5ನೇ ಅತಿದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವರ ನಿವ್ವಳ ಆಸ್ತಿ ಮೌಲ್ಯ 2,460 ಲಕ್ಷ ಕೋಟಿ ರೂ. ಎಂದು ಇತ್ತೀಚೆಗೆ ಫೋರ್ಬ್ಸ್ ವರದಿ ಮಾಡಿತ್ತು. ತಂದೆ ನಿರ್ವಹಿಸುತ್ತಿದ್ದ ಔಷಧದ ಸಂಸ್ಥೆಯನ್ನು ಮುಂದುವರಿಸುತ್ತಾ ಬಂದ ದಿಲೀಪ್‌ ಈಗ ಈ ಕ್ಷೇತ್ರದಲ್ಲಿ ಪಾರಮ್ಯ ಮೆರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next