Advertisement

Helmet; ಬೈಕ್‌ ಖರೀದಿ ವೇಳೆ ಕಂಪೆನಿ ಡಿಸ್ಕೌಂಟ್‌ನಲ್ಲಿ ನೀಡಲಿ: ಗಡ್ಕರಿ

01:12 AM Sep 06, 2024 | Team Udayavani |

ಹೊಸದಿಲ್ಲಿ: ಹೆಲ್ಮೆಟ್‌ ಧರಿಸದ್ದರಿಂದ 2022ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 50,029 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಗ್ರಾಹಕರು ದ್ವಿಚಕ್ರ ವಾಹನಗಳನ್ನು ಖರೀದಿಸುವಾಗ ಅವರಿಗೆ ವಾಹನ ತಯಾರಿಕ ಕಂಪೆನಿಗಳು ರಿಯಾಯಿತಿ ಬೆಲೆಯಲ್ಲಿ ಇಲ್ಲವೇ ಕಡಿಮೆ ಬೆಲೆಗೆ ಹೆಲ್ಮೆಟ್‌ಗಳನ್ನು ನೀಡಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಇದೇ ವೇಳೆ ದೇಶದಲ್ಲಿ ಗ್ರಾಹಕರು ಈಗ ತಮ್ಮ ಇಚ್ಛೆಗೆ ಅನುಗುಣವಾಗಿ ಎಲೆಕ್ಟ್ರಿಕ್‌, ಸಿಎನ್‌ಜಿ ವಾಹನಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಸರಕಾರ ಇನ್ನು ಈ ಕಂಪೆನಿಗಳಿಗೆ ಸಬ್ಸಿಡಿ ನೀಡುವ ಅಗತ್ಯ ಇಲ್ಲ ಎಂದೂ ಗಡ್ಕರಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next