Advertisement
ಪಟ್ಟಣದ ಎಎಸ್ ರಾವ್ ನಗರದ ಬಾಡಿಗೆ ಮನೆಯಲ್ಲಿ ಲಂಚ ಪಡೆಯುತ್ತಿದ್ದಾಗ ಕಂದಾಯ ಅಧಿಕಾರಿ ಎರ್ವಾ ಬಾಲರಾಜು ನಾಗರಾಜು ಭ್ರಷ್ಟಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿರುವುದಾಗಿ ವರದಿ ತಿಳಿಸಿದೆ.
Related Articles
Advertisement
100 ರೂಪಾಯಿ ಹಾಗೂ 500 ರೂಪಾಯಿ ನೋಟುಗಳ ಕಂತೆ ಇದಾಗಿದೆ ಎಂದು ವರದಿ ವಿವರಿಸಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ತನ್ನ ಕಾರ್ಯವ್ಯಾಪ್ತಿಯಲ್ಲಿ ಬರುವ 28 ಎಕರೆ ಜಾಗದ ವಿವಾದವನ್ನು ಬಗೆಹರಿಸಿಕೊಡಲು ನಾಗರಾಜು ಎರಡು ಕೋಟಿ ರೂಪಾಯಿ ಲಂಚ ಕೇಳಿರುವುದಾಗಿ ಆರೋಪಿಸಿದ್ದಾರೆ.
ಮನೆಯ ಮೇಲೆ ದಾಳಿ ನಡೆಸಿದಾಗ 1.1 ಕೋಟಿ ರೂಪಾಯಿ ನಗದು ಹೊರತುಪಡಿಸಿ, ಚಿನ್ನ ಮತ್ತು 28 ಲಕ್ಷ ರೂಪಾಯಿ ಹೆಚ್ಚುವರಿ ನಗದು ಪತ್ತೆಯಾಗಿದ್ದು, ಹಲವಾರು ಜಾಗಗಳ ದಾಖಲೆಗಳು ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ರಾಜ್ಯ ಕಂದಾಯ ಇಲಾಖೆಯಲ್ಲಿ ನೂರಾರು ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತರುವುದಾಗಿ ಹೇಳಿದ್ದರು.