Advertisement
ಮೊದಲು ಮೆನ್ಸ್ ಫೋರ್ ವಿಭಾಗದ ಸ್ಪರ್ಧೆಯಲ್ಲಿ ಜಸ್ವಿಂದರ್ ಸಿಂಗ್, ಭೀಮ್ ಸಿಂಗ್, ಪುನೀತ್ ಕುಮಾರ್ ಮತ್ತು ಅಶಿಷ್ ಗೊಲಿಯಾನ್ ಅವರನ್ನೊಳಗೊಂಡ ತಂಡ ಬೆಳ್ಳಿ ಪದಕವನ್ನು ಸ್ವಲ್ಪದರಲ್ಲೇ ಕಳೆದುಕೊಂಡಿತು. ಭಾರತ 2 ಸಾವಿರ ಮೀಟರ್‌ಗಳ ಈ ದೂರವನ್ನು 6:10.81 ಸೆಕೆಂಡ್‌ಗಳಲ್ಲಿ ಕ್ರಮಿಸಿತು. ಚೀನ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಜಯಿಸಿದರೆ (6:10.04), ಉಜ್ಬೆಕಿಸ್ಥಾನ್ ಚಿನ್ನ ಗೆದ್ದಿತು (6:04.96).
Related Articles
Advertisement
ಭಾರತಕ್ಕೆ 5ನೇ ಸ್ಥಾನಭಾರತ ಒಟ್ಟು 5 ಪದಕಗಳೊಂದಿಗೆ ಸ್ಪರ್ಧೆ ಮುಗಿಸಿತು. ಪದಕ ಗಳಿಕೆಯಲ್ಲಿ ಇದು 2018ರ ಜಕಾರ್ತಾ ಏಷ್ಯಾಡ್‌ಗಿಂತ ಉತ್ತಮ ಸಾಧನೆ. ಆದರೆ ಈ ಬಾರಿ ಚಿನ್ನ ಒಲಿಯಲಿಲ್ಲ. ಜಕಾರ್ತಾದಲ್ಲಿ ಭಾರತ ರೋವಿಂಗ್ ಸ್ಪರ್ಧೆಯಲ್ಲಿ ಒಂದು ಚಿನ್ನ ಹಾಗೂ 2 ಕಂಚಿನ ಪದಕ ಜಯಿಸಿತ್ತು. ಆದರೆ 6ನೇ ಸ್ಥಾನಿಯಾಗಿತ್ತು. ಈ ಬಾರಿ ಒಂದು ಸ್ಥಾನ ಮೇಲೇರಿದೆ.
ಈ ಬಾರಿ ಆತಿಥೇಯ ಚೀನ ಅಗ್ರಸ್ಥಾನ ಅಲಂಕರಿಸಿದರೆ (11 ಚಿನ್ನ, 2 ಬೆಳ್ಳಿ), ಉಜ್ಬೆಕಿಸ್ಥಾನ ದ್ವಿತೀಯ ಸ್ಥಾನಿಯಾಯಿತು (2 ಚಿನ್ನ, 4
ಬೆಳ್ಳಿ, 1 ಕಂಚು).