Advertisement

Actor Darshan: ದರ್ಶನ್‌ ಜತೆ ವಿಡಿಯೋ ಕಾಲ್‌ನಲ್ಲಿ ಮಾತಾಡಿದ್ದ‌ ರೌಡಿಯ ಪುತ್ರ ವಶಕ್ಕೆ

10:12 AM Aug 27, 2024 | Team Udayavani |

ಬೆಂಗಳೂರು: ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ನಟ ದರ್ಶನ್‌ ವಿಡಿಯೋ ಕರೆಯಲ್ಲಿ ಮಾತನಾಡಿರುವ ವ್ಯಕ್ತಿ ರೌಡಿ ಶೀಟರ್‌ನ ಮಗ ಎಂಬುದನ್ನು ಆಗ್ನೇಯ ವಿಭಾಗದ ಪೊಲೀಸರು ಪತ್ತೆ ಹಚ್ಚಿದ್ದಾರೆ.

Advertisement

ಬ್ಯಾಡರಹಳ್ಳಿ ಪೊಲೀಸ್‌ ಠಾಣೆ ರೌಡಿಶೀಟರ್‌ ಜನಾರ್ದನ್‌ ಅಲಿಯಾಸ್‌ ಜಾನಿ ಎಂಬಾತನ ಪುತ್ರ ಸತ್ಯ ಎಂದು ಗುರುತಿಸಲಾಗಿದೆ. ವಿಡಿಯೋ ಕರೆ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಸತ್ಯನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ದರ್ಶನ್‌ಗೆ ಮೊಬೈಲ್‌ ಕೊಟ್ಟವನೂ ರೌಡಿಶೀಟರ್‌!: ಇನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್‌ಗೆ ಮೊಬೈಲ್‌ ಕೊಟ್ಟು ವಿಡಿಯೋ ಕರೆಯಲ್ಲಿ ಸತ್ಯನ ಜತೆ ಮಾತನಾಡಿಸಿದ ವ್ಯಕ್ತಿ ಅನ್ನಪೂರ್ಣೇಶ್ವರಿನಗರ ಠಾಣೆ ರೌಡಿಶೀಟರ್‌ ಧರ್ಮ ಎಂದು ಗುರುತಿಸಲಾಗಿದೆ. ರೌಡಿ ಧರ್ಮ ಹಲ್ಲೆ ಪ್ರಕರಣವೊಂದರಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ದಲ್ಲಿದ್ದಾನೆ. ಈತ ರೌಡಿ ಪುತ್ರ ಸತ್ಯನಿಗೆ ಕರೆ ಮಾಡಿ ಬಳಿಕ ದರ್ಶನ್‌ಗೆ ಮೊಬೈಲ್‌ ನೀಡಿದ್ದಾನೆ. ಈ ಕಾರಾಗೃಹದಿಂದ ವಿಡಿಯೋ ಕರೆ ಮಾಡಿ ಮಾತನಾಡಿದ ಸಂಬಂಧ ಈಗಾಗಲೇ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಶಿವಾಜಿ ಮಿಲ್ಟ್ರಿ ಹೋಟೆಲ್‌ನಿಂದ ಬಿರಿಯಾನಿ?: ಜೈಲಿನಲ್ಲಿರುವ ನಟ ದರ್ಶನ್‌ಗೆ ಜಯನಗರ ಸಮೀಪ ದಲ್ಲಿರುವ ಶಿವಾಜಿ ಮಿಲ್ಟ್ರಿ ಹೋಟೆಲ್‌ನಿಂದ ಬಿರಿಯಾನಿ ಪೂರೈಕೆ ಮಾಡಲಾಗುತ್ತಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ದರ್ಶನ್‌ ಭೇಟಿಗೆ ಹೋಗಿದ್ದ ಕೆಲ ಸೆಲೆಬ್ರಿಟಿಗಳು ಅಥವಾ ಆಪ್ತರು ಶಿವಾಜಿ ಮಿಲಿó ಹೋಟೆಲ್‌ನಿಂದ ಬಿರಿಯಾನಿ ತೆಗೆದುಕೊಂಡು ಹೋಗಿದ್ದರು ಎಂದು ಹೇಳಲಾಗಿದೆ.

ರೌಡಿಗಳ ಸಹವಾಸ ಬಿಡದ ದಾಸ:

Advertisement

13 ವರ್ಷಗಳ ಹಿಂದೆ ಪತ್ನಿ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದ್ದ ದರ್ಶನ್‌ಗೆ ಕುಖ್ಯಾತ ರೌಡಿ ಶೀಟರ್‌ ಸೈಕಲ್‌ ರವಿ ಮತ್ತು ತಂಡ ಆತಿಥ್ಯ ನೀಡಿತ್ತು. ಇದೀಗ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಜೈಲಿನಲ್ಲೇ ರೌಡಿಶೀಟರ್‌ ವಿಲ್ಸನ್‌ಗಾರ್ಡನ್‌ ನಾಗ ಮತ್ತು ತಂಡದಿಂದ ರಾಜಾತೀಥ್ಯ ಪಡೆದುಕೊಂಡಿದ್ದಾನೆ. ಅಲ್ಲದೆ, ತನ್ನೊಂದಿಗಿರುವ ವಿಚಾರಣಾಧೀನ ಕೈದಿ, ರೌಡಿಶೀಟರ್‌ ಧರ್ಮನ ಜತೆ ಆತ್ಮೀಯತೆ ಬೆಳೆಸಿಕೊಂಡಿದ್ದು, ಜೈಲಿನ ಕೋಣೆಯಲ್ಲೇ ಸಿಗರೆಟ್‌, ಟೀ ಸೇವಿಸುತ್ತಿರುವ ಫೋಟೋ ಕೂಡ ವೈರಲ್‌ ಆಗಿದೆ. ಅಲ್ಲದೆ, ಧರ್ಮನ ಮೂಲಕ ಮತ್ತೂಬ್ಬ ರೌಡಿಶೀಟರ್‌ ಪುತ್ರನ ಜತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ. ಹೀಗಾಗಿ ದರ್ಶನ್‌ ಎಂದಿನಂತೆ ತಾವು ರೌಡಿಗಳ ಸಹವಾಸ ಮುಂದು ವರಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next