Advertisement

Darshan: ಚೇರ್‌ ಆಯಿತು, ಈಗ ತಮ್ಮ ಸೆಲ್ ನಲ್ಲಿ ಟಿವಿ ಬೇಕೆಂದು ಡಿಮ್ಯಾಂಡ್‌ ಮಾಡಿದ ದಾಸ

04:14 PM Sep 03, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಜೈಲುಪಾಲಾಗಿರುವ ದರ್ಶನ್‌ (Darshan) ಬಳ್ಳಾರಿ ಜೈಲಿಗೆ (Ballari jail) ಸೇರಿದ ಬಳಿಕ ಅಲ್ಲೂ ಕೂಡ ಜೈಲು ಅಧಿಕಾರಿಗಳ ಬಳಿ ಕೆಲ ಬೇಡಿಕೆಗಳನ್ನಿಟ್ಟಿದ್ದಾರೆ ಎಂದು ವರದಿಯಾಗಿದೆ.

Advertisement

ಪರಪ್ಪನ ಅಗ್ರಹಾರದಲ್ಲಿದ್ದ(Parappana Agrahara Prison) ಸಮಯದಲ್ಲಿ ಬಹುತೇಕ ಎಲ್ಲದಕ್ಕೂ ಹೊಂದಿಕೊಂಡಿದ್ದ ದರ್ಶನ್‌ ಬಳ್ಳಾರಿ ಜೈಲಿಗೆ ಶಿಫ್ಟ್‌ ಆದ ಬಳಿಕ ಬೆನ್ನುನೋವು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಇದರಿಂದಾಗಿ ತೊಂದರೆಯನ್ನು ಅನುಭವಿಸಿದ ದಾಸ ತಮಗೆ ಸರ್ಜಿಕಲ್‌ ಚೇರ್‌ ಬೇಕೆಂದು ಮನವಿ ಮಾಡಿದ್ದರು.

content-img

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ವೈದ್ಯರು ದರ್ಶನ್‌ ಆರೋಗ್ಯವನ್ನು ತಪಾಸಣೆ ಮಾಡಿ, ವರದಿ ಕೊಟ್ಟ ಬಳಿಕ ಅವರಿಗೆ ಸರ್ಜಿಕಲ್​ ಚೇರ್ ನೀಡಲಾಗಿದೆ. ಇದೀಗ ಚೇರ್‌ ಸಿಕ್ಕ ಬಳಿಕ ತಮ್ಮ ಸೆಲ್‌ನಲ್ಲಿ ತಮಗೆ ಟಿವಿಬೇಕೆಂದು ದರ್ಶನ್‌ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

Advertisement

ಟಿವಿ ಕೇಳಿದ ಬೆನ್ನಲ್ಲೇ ಜೈಲು ಅಧಿಕಾರಿಗಳು ಇದಕ್ಕೆ ಸ್ಪಂದಿಸಿದ್ದು, ಜೈಲಿನ ನಿಯಮಾವಳಿಗಳನ್ನು ಪರಿಗಣಿಸಿ ಟಿವಿ ನೀಡಲು ವ್ಯವಸ್ಥೆ ಮಾಡಲಾಗುತ್ತಿದ್ದು, ಜೈಲಿನಲ್ಲಿ ಈಗಾಗಲೇ ಇರುವ ಟಿವಿಯನ್ನು ರಿಪೇರಿ ಮಾಡಿ ದರ್ಶನ್‌ ಅವರ ಸೆಲ್‌ನಲ್ಲಿ ಆಳವಡಿಸುವ ಯೋಚನೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

ಸದ್ಯ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಪೊಲೀಸರು ಸಾಕ್ಷಿಗಳನ್ನು ಸಂಗ್ರಹಿಸಿಕೊಂಡು 4500 ಪುಟಗಳ ಆರೋಪ ಪಟ್ಟಿ ಸಲ್ಲಿಕೆಗೆ ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.