Advertisement

“ಬಡತನ ದೂರ ಮಾಡುವೆ…’ತಾಯಿಗೆ ಭರವಸೆ ಕೊಟ್ಟಿದ್ದ ರೋವ್ಮನ್ ಪೊವೆಲ್‌

12:00 AM Apr 30, 2022 | Team Udayavani |

ಮುಂಬಯಿ: ವೆಸ್ಟ್‌ಇಂಡೀಸ್‌ನ ಮಾಜಿ ವೇಗಿ ಇಯಾನ್‌ ಬಿಷಪ್‌ ಅವರು ತನ್ನದೇ ದೇಶದ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ಆಲ್‌ರೌಂಡರ್‌ ರೋವ್ಮನ್ ಪೊವೆಲ್‌ ಅವರ ಬಗೆಗಿನ ಹೃದಯ ತಟ್ಟುವ ಕತೆಯೊಂದನ್ನು ಮೆಲುಕು ಹಾಕಿದ್ದಾರೆ. ಪೊವೆಲ್‌ ಸೆಕೆಂಡರಿ ಸ್ಕೂಲ್‌ನಲ್ಲಿ ಓದುತ್ತಿದ್ದ ಸಮಯದಲ್ಲಿ ತನ್ನ ಕುಟುಂಬವನ್ನು ಬಡತನದಿಂದ ದೂರ ಮಾಡುವೆ ಎಂದು ತಾಯಿಗೆ ಭರವಸೆ ಕೊಟ್ಟಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.

Advertisement

28 ವರ್ಷದ ಪೊವೆಲ್‌ ಗುರುವಾರದ ಪಂದ್ಯದಲ್ಲಿ ಡೆಲ್ಲಿ ಪರ ಅಮೋಘ ಪ್ರದರ್ಶನ ನೀಡಿದ್ದರು. ಕೇವಲ 16 ಎಸೆತಗಳಲ್ಲಿ ಅಜೇಯ 33 ರನ್‌ ಗಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದರು. ಈ ಗೆಲುವಿನಿಂದ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದೆ.

ವೀಡಿಯೋ ವೀಕ್ಷಿಸಿ…
ಮಾಧ್ಯಮದ ಜತೆ ಮಾತನಾಡಿದ ಬಿಷಪ್‌, “ಯಾರಿಗಾದರೂ 10 ನಿಮಿಷಗಳ ಸಮಯದ ಅವಕಾಶವಿದ್ದರೆ ಯೂ ಟ್ಯೂಬ್‌ನಲ್ಲಿ ರೋವ್ಮನ್ ಪೊವೆಲ್‌ ಅವರ ಜೀವನಕತೆಯ ವೀಡಿಯೋವೊಂದನ್ನು ನೋಡಿ. ನನ್ನನ್ನೂ ಸೇರಿದಂತೆ ಹಲವಾರು ಮಂದಿ ಪೊವೆಲ್‌ ಹೇಗೆ, ಯಾಕೆ ಐಪಿಎಲ್‌ಗೆ ಸೇರಿಕೊಂಡರು ಎಂಬ ವಿವರಣೆ ಕೇಳಿ ಸಂತೋಪ ಪಟ್ಟಿದ್ದೇವೆ’ ಎಂದರು.

ಕುಟುಂಬವನ್ನು ಬಡತನದಿಂದ ಹೋಗಲಾಡಿಸಲು ಅವರು ತಾಯಿಗೆ ಭರವಸೆ ಕೊಟ್ಟಿದ್ದರು. ಅದು ಕೂಡ ಅವರು ಸೆಕೆಂಡರಿ ಸ್ಕೂಲ್‌ನಲ್ಲಿದ್ದಾಗ. ಅವರೀಗ ಆ ಕನಸನ್ನು ನನಸು ಮಾಡಲು ಜೀವಿಸುತ್ತಿದ್ದಾರೆ. ಇದೊಂದು ಗ್ರೇಟ್‌ ಸ್ಟೋರಿ ಎಂದಿದ್ದಾರೆ ಬಿಷಪ್‌.

ಪೊವೆಲ್‌ ಅವರ ಆಟದಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಸ್ಫೋಟಕವಾಗಿ ಬ್ಯಾಟಿಂಗ್‌ ಮಾಡುವ ಸಾಮರ್ಥ್ಯ ಅವರಲ್ಲಿದೆ. ಕಳೆದ ಫೆಬ್ರವರಿಯಿಂದ ಭಾರತದಲ್ಲಿ ಅವರು ಸ್ಪಿನ್ನರ್‌ಗಳ ದಾಳಿಯೆದುರು ಉತ್ತಮ ಸರಾಸರಿಯ ಆಟ ಪ್ರದರ್ಶಿಸಿದ್ದಾರೆ ಎಂದು ಬಿಷಪ್‌ ವಿವರಿಸಿದರು.

Advertisement

ಸಿಪಿಎಲ್‌ನಲ್ಲೂ ಯಶಸ್ಸು
1993ರ ಜುಲೈ 23ರಂದು ಜನಿಸಿದ ಪೊವೆಲ್‌ ತಾಯಿ ಮತ್ತು ಕಿರಿಯ ಸಹೋದರಿ ಜತೆ ವಾಸಿಸುತ್ತಿದ್ದಾರೆ. ಬಹಳಷ್ಟು ಕಷ್ಟದ ದಿನಗಳನ್ನು ಕಂಡಿದ್ದಾರೆ. “ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌’ನಲ್ಲಿ ತೋರ್ಪಡಿಸಿದ ಬ್ಯಾಟಿಂಗ್‌ ವೈಭವದಿಂದಾಗಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದರು. 2022ರ ಮೆಗಾ ಹರಾಜಿನಲ್ಲಿ ಡೆಲ್ಲಿ ತಂಡ ಖರೀದಿಸಿತ್ತು.

ಟಿ20ಯಲ್ಲಿ ಪೊವೆಲ್‌ ಇಷ್ಟರವರೆಗೆ 39 ಪಂದ್ಯಗಳನ್ನು ಆಡಿದ್ದು, 24.76 ಸರಾಸರಿಯಂತೆ 619 ರನ್‌ ಗಳಿಸಿದ್ದಾರೆ. ಒಂದು ಶತಕ, 3 ಅರ್ಧಶತಕ ಸಿಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next