Advertisement
ಮಾಡು, ಕಂಬಗಳನ್ನು ಆಕರ್ಷಕ ದಾರುಶಿಲ್ಪಗಳಿಂದ ರಚಿಸಲಾಗುತ್ತಿದೆ. ಸಾಗುವಾನಿ, ಕಿರಾಲ್ ಬೋಗಿ, ಸಂಪಿಗೆ-ಈ 3 ಜಾತಿಗಳ ಸುಮಾರು 3,000 ಕ್ಯುಬಿಕ್ ಫೀಟ್ (ಸಿಎಫ್ಟಿ) ಮರ ಬಳಸಲಾಗಿದೆ. ಸಾಗುವಾನಿ ಮರವನ್ನು ಸರಕಾರಿ ಡಿಪೋಗಳಿಂದ ಏಲಂನಿಂದ ಖರೀದಿಸಿದ್ದರೆ, ಕಿರಾಲ್ಬೋಗಿ, ಸಂಪಿಗೆ ಮರವನ್ನು ಬೈಂದೂರಿನಿಂದ ಮುಂಡ ಗೋಡು ತನಕ ವಿವಿಧ ಮರದ ಮಿಲ್‌ಗಳಿಂದ ಖರೀದಿಸಲಾಗಿದೆ. ಒಟ್ಟು 1.25 ಕೋ. ರೂ. ಕೇವಲ ಮರಕ್ಕಾಗಿ ವೆಚ್ಚವಾಗಿದೆ.
ತಾಮ್ರದ ಕೆಲಸವನ್ನು ಅಮಾಸೆ ಬೈಲಿನ ನರಸಿಂಹ ಆಚಾರ್ಯ, ಮರದ ಕೆಲಸವನ್ನು ಇನ್ನ ನಾರಾಯಣ ಆಚಾರ್ಯ, ಅವರ ಮಕ್ಕಳಾದ ಸದಾಶಿವ ಮತ್ತು ರವಿ, ಮರ್ಣೆಯ ಶಶಿಕಾಂತ ಆಚಾರ್ಯ, ಬಾರಕೂರಿನ ಶ್ರೀಪತಿ ಆಚಾರ್ಯರ ತಂಡ ನಿರ್ವಹಿಸುತ್ತಿದೆ. ಮೊದಲು ರಥಬೀದಿಯ ಕನಕಗೋಪುರದ ಎದುರು ಮರದ ಕೆಲಸ ಮಾಡುತ್ತಿದ್ದರೆ ಕೆಲಸ ವಿಳಂಬವಾಗುತ್ತದೆ ಎಂದು ತಿಳಿದು ಸಂಸ್ಕೃತಕಾಲೇಜಿನ ಆವರಣದಲ್ಲಿ ಕೆಲಸ ಮಾಡಲಾಗುತ್ತಿದೆ. ಆರು ತಿಂಗಳಿಂದ ಕೆಲಸ ನಡೆಯುತ್ತಿದೆ. ಮೊದಲು 10-20 ಜನರು ಕೆಲಸ ಮಾಡಿದರೆ ಈಗ 50-60 ಕುಶಲಕರ್ಮಿಗಳು ಕೆಲಸ ಮುಗಿಸಲು ಪ್ರಯತ್ನಿಸುತ್ತಿದ್ದಾರೆ.ಸುತ್ತುಪೌಳಿ ಕಾಮಗಾರಿ ನಡೆದು ಎಷ್ಟು ವರ್ಷವಾಗಿದೆಯೋ ಗೊತ್ತಿಲ್ಲ. ಇದು ಜೀರ್ಣಗೊಂಡ ಕಾರಣ ಶ್ರೀ ಪೇಜಾವರರು ತಮ್ಮ ಐದನೇ ಪರ್ಯಾಯ ಅವಧಿಯಲ್ಲಿ ಕಿರಿಯ ಶ್ರೀಗಳ ಕಲ್ಪನೆಯಂತೆ ಯೋಜನೆ ಕಾರ್ಯಗತಗೊಳಿಸುತ್ತಿದ್ದಾರೆ. ಸಮಾಲೋಚನ ಸಭೆ
ಬ್ರಹ್ಮಕಲಶೋತ್ಸವ ಪ್ರಯುಕ್ತ ಬುಧವಾರ ನಡೆದ ಸಮಾಲೋಚನ ಸಭೆಯಲ್ಲಿ ಮೇ 13ರಂದು ಹೊರೆ ಕಾಣಿಕೆ ಸಮರ್ಪಣೆ, ಮೇ 16ರಂದು ರಜಕಲಶಗಳ ಮೆರವಣಿಗೆ, ಮೇ 18ರಂದು ಅನ್ನಸಂತರ್ಪಣೆ ನಡೆಸಲು,ಡಾ| ಮೋಹನ ಆಳ್ವ, ಪ್ರೊ| ಎಂ.ಎಲ್.ಸಾಮಗ ಅವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು. ವಿ| ಪಂಜಭಾಸ್ಕರ ಭಟ್, ಮಾಜಿ ಶಾಸಕ ರಘುಪತಿ ಭಟ್, ಮಂಜುನಾಥ ಉಪಾಧ್ಯ ಮಾತ ನಾಡಿದರು. ವಸತಿ, ನೀರಿನ ವ್ಯವಸ್ಥೆಗೆಗಮನ ಹರಿಸಲು ನಿರ್ಧರಿಸಲಾಯಿತು.
Related Articles
Advertisement
ಮೈಸೂರಿನ ಪಿಳ್ಳೆ ಅಯ್ಯಂಗಾರ್ ಹೇಳಿಕೆ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಶ್ರೀಪಾದರು, ಕನಕದಾಸರು ಉಡುಪಿಗೆ ಬಂದ ಮತ್ತು ಹಾಡು ರಚಿಸಿದ ಕುರಿತು ದಾಖಲೆಗಳಿವೆ. ಆದರೆ “ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ’ ಎಂಬ ಹಾಡು ಎಲ್ಲಿ ರಚಿಸಿದ್ದು ಎಂಬ ಬಗ್ಗೆ ಖಚಿತ ಮಾಹಿತಿಗಳಿಲ್ಲ ಎಂದರು.
500 ಕೆ.ಜಿ. ತಾಮ್ರದ ಮೊಳೆ !ಮೇಲ್ಭಾಗದಲ್ಲಿ ತಾಮ್ರದ ತಗಡು ಹೊದೆಸಲಾಗುತ್ತಿದೆ. 14ರಿಂದ 16 ಟನ್ ತಾಮ್ರ ಬಳಸಲಾಗುತ್ತಿದೆ. ಟನ್‌ಗೆ 5 ಲ. ರೂ. ಬೆಲೆ. ತಾಮ್ರದ ತಗಡಿಗೆಒಟ್ಟು 80 ಲ. ರೂ. ಖರ್ಚಾಗಿದೆ. ಮರಕ್ಕೂ, ತಗಡಿಗೂ ಮೊಳೆ ಹೊಡೆಯುವಾಗ ಕಬ್ಬಿಣದ ಮೊಳೆ ಹೊಡೆಯದೆ ತಾಮ್ರದ ಮೊಳೆಯನ್ನೇ ಬಳಸಲಾಗಿದೆ. ಬಳಸಲಾದ ತಾಮ್ರದ ಮೊಳೆಯ ತೂಕವೇ ಸುಮಾರು 500 ಕೆ.ಜಿ.