Advertisement

ರೋಟರ್‌ ಡ್ಯಾಮ್‌ ಓಪನ್‌ ಟೆನಿಸ್‌ ಗೇಲ್‌ ಮಾನ್‌ಫಿಲ್ಸ್‌ಗೆ ಗೆಲುವು

12:30 AM Feb 19, 2019 | Team Udayavani |

ರೋಟರ್‌ಡ್ಯಾಮ್‌: ಸ್ವಿಜರ್‌ಲ್ಯಾಂಡಿನ ಸ್ಟಾನಿಸ್ಲಾಸ್‌ ವಾವ್ರಿಂಕ ವಿರುದ್ಧ 3 ಸೆಟ್‌ಗಳ ಕಾದಾಟಗಳ ಬಳಿಕ ಗೆದ್ದು ಬಂದ ಫ್ರಾನ್ಸ್‌ನ ಗೇಲ್‌ ಮಾನ್‌ಫಿಲ್ಸ್‌ ಮೊದಲ ಬಾರಿಗೆ “ರೋಟರ್‌ಡ್ಯಾಮ್‌ ಓಪನ್‌ ಟೆನಿಸ್‌’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Advertisement

ರವಿವಾರ ರಾತ್ರಿ ನಡೆದ ಪ್ರಶಸ್ತಿ ಕಾಳಗದಲ್ಲಿ ಗೇಲ್‌ ಮಾನ್‌ಫಿಲ್ಸ್‌ 6-3, 1-6, 6-2 ಅಂತರದಿಂದ 3 ಬಾರಿಯ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ವಿಜೇತ ವಾವ್ರಿಂಕ ಅವರನ್ನು ಹಿಮ್ಮೆಟ್ಟಿಸಿದರು. ಇದು 2018ರ ಜನವರಿ ಬಳಿಕ ಮಾನ್‌ಫಿಲ್ಸ್‌ ಪಾಲಾದ ಮೊದಲ ಟೆನಿಸ್‌ ಪ್ರಶಸ್ತಿ. ಹಾಗೆಯೇ 2017ರ ಮಂಡಿ ಶಸ್ತ್ರಚಿಕಿತ್ಸೆ ಬಳಿಕ ವಾವ್ರಿಂಕ ಕಂಡ ಮೊದಲ ಫೈನಲ್‌. ದ್ವಿತೀಯ ಸೆಟ್‌ನಲ್ಲಿ ತಿರುಗಿ ಬಿದ್ದ ವಾವ್ರಿಂಕ ನಿರ್ಣಾಯಕ ಸೆಟ್‌ನಲ್ಲಿ ಮಾನ್‌ಫಿಲ್ಸ್‌ ಅವರ ದೀರ್ಘ‌ ರ್ಯಾಲಿಗಳಿಂದ ತಬ್ಬಿಬ್ಟಾದರು. ಗೇಲ್‌ ಮಾನ್‌ಫಿಲ್ಸ್‌ 2016ರಲ್ಲಿ ಫೈನಲ್‌ ಪ್ರವೇಶಿಸಿದರೂ ಪ್ರಶಸ್ತಿ ಗೆಲ್ಲುವಲ್ಲಿ ವಿಫ‌ಲರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next