Advertisement

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

12:31 PM Apr 24, 2024 | Team Udayavani |

ಪಾಟ್ನಾ: ಕ್ರಿಕೆಟ್‌ ಕುರಿತು ಯಾವ ಜ್ಞಾನವಿಲ್ಲದ ವ್ಯಕ್ತಿಯೊಬ್ಬ ಫ್ಯಾಂಟಸಿ ಗೇಮಿಂಗ್‌ ಆ್ಯಪ್ ನಲ್ಲಿ 59 ರೂ.ಕಟ್ಟಿ 1.5 ಕೋಟಿ ರೂ ಗೆದ್ದಿದ್ದಾರೆ.

Advertisement

ಡ್ರೀಮ್‌ 11 ಫ್ಯಾಂಟಸಿ ಗೇಮಿಂಗ್‌ ಆ್ಯಪ್ ನಲ್ಲಿ ಕೋಟಿ ಗೆಲ್ಲುವುದು ಅಂದರೆ ಅದು ಕೋಟ್ಯಂತರ ಮಂದಿಯಲ್ಲಿ ಒಬ್ಬರಿಗೆ ಸಿಗುವ ಅದೃಷ್ಟವೆಂದೇ ಹೇಳಬಹುದು. ಇಂಥದ್ದೇ ಅದೃಷ್ಟ ಬಿಹಾರದ ಬಡ ವ್ಯಕ್ತಿಯೊಬ್ಬನಿಗೆ ಖುಲಾಯಿಸಿದೆ.

ಬಿಹಾರದ ಅರಾಹ್ ಜಿಲ್ಲೆಯ ಕೊಹ್ಡಾ ಗ್ರಾಮದ ನಿವಾಸಿಯಾದ ದೀಪು ಓಜಾ ಡ್ರೀಮ್‌ 11 ನಲ್ಲಿ ಒಂದೂವರೆ ಕೋಟಿ ಗೆದ್ದು ರಾತ್ರೋರಾತ್ರಿ ಊರಿನವರ ಮುಂದೆ ಸ್ಟಾರ್‌ ಆಗಿದ್ದಾರೆ.

ದೀಪು ಅವರಿಗೆ ಕ್ರಿಕೆಟ್‌ ಬಗ್ಗೆ ಅಷ್ಟಾಗಿ ಜ್ಞಾನವಿಲ್ಲ. 8 ತರಗತಿಯಲ್ಲಿ ಶಿಕ್ಷಣ ಬಿಟ್ಟು  ಗ್ಯಾರೇಜ್‌ ನಲ್ಲಿ ಕೆಲಸ ಮಾಡುವ ದೀಪು ಅವರ ಕುಟುಂಬ ಬಡತನದಲ್ಲೇ ದಿನ ಸಾಗಿಸುತ್ತದೆ. ಕಾರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುವ ದೀಪು ಕಳೆದ 6 ತಿಂಗಳಿನಿಂದ ಡ್ರೀಮ್‌ 11 ನಲ್ಲಿ ಆಡುತ್ತಿದ್ದಾರೆ.

ಇತ್ತೀಚೆಗೆ ಐಪಿಎಲ್‌ ನ ಕೆಕೆಆರ್‌ – ಆರ್‌ ಸಿಬಿ ನಡುವಿನ ಪಂದ್ಯದಲ್ಲಿ ಡ್ರೀಮ್‌ 11 ತಂಡವನ್ನು ಕಟ್ಟಿದ್ದರು. ಈ ಪಂದ್ಯದಲ್ಲಿ ಅವರು ರೆಸೆಲ್‌ ಅವರನ್ನು ಕ್ಯಾಪ್ಟನ್‌ ಆಗಿ ಆಯ್ಕೆ ಮಾಡಿದ್ದರು. ರಸೆಲ್‌ ಉತ್ತಮವಾಗಿ ಬೌಲಿಂಗ್‌ ಮಾಡಿದ ಕಾರಣ ಹಾಗೂ ತಂಡದ ಇತರೆ ಆಟಗಾರರು ಉತ್ತಮ ಪ್ರದರ್ಶನ ನೀಡಿದ ಪರಿಣಾಮ ದೀಪು ಡ್ರೀಮ್‌ 11 ನಲ್ಲಿ ಫಸ್ಟ್‌ ರ್‍ಯಾಂಕ್‌ ಬಂದು ಕೋಟ್ಯಧಿಪತಿ ಆಗಿದ್ದಾರೆ.

Advertisement

ಈ ಬಗ್ಗೆ ಮಾತನಾಡುವ ಅವರು, “ನನಗೆ ತುಂಬಾ ಸಂತೋಷವಾಗಿದೆ. ಮೊದಲು ಕೋಟಿ ಗೆದ್ದಿದ್ದೇನೆ ಅಂಥ ನಂಬಿಕೆ ಬರಲಿಲ್ಲ. ಇಂತಹ ಅಪ್ಲಿಕೇಶನ್‌ಗಳಲ್ಲಿ ಎಂದಿಗೂ ಹಣ ಬರುವುದಿಲ್ಲ ಇದು ಮೋಸ ಎಂದು ಭಾವಿಸಿದ್ದೆ. ನಾನು ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತೇನೆ. ನಾನು ಕಳೆದ ಆರು ತಿಂಗಳಿಂದ ಫ್ಯಾಂಟಸಿ ಗೇಮಿಂಗ್ ಆಡುತ್ತಿದ್ದೇನೆ. ಭಾನುವಾರ ನನಗೆ ಕೆಲಸವಿಲ್ಲ. ನಾನು ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಹಣ ಗೆದ್ದಿದ್ದೇನೆ” ಎಂದು ಹೇಳುತ್ತಾರೆ.

ಏನಿದು ಡ್ರೀಮ್‌ 11: ಡ್ರೀಮ್‌ 11 ಒಂದು ಜನಪ್ರಿಯ ಫ್ಯಾಂಟಸಿ ಗೇಮಿಂಗ್‌ ಆ್ಯಪ್ ಆಗಿದೆ. ಡ್ರೀಮ್‌ 11 ನಲ್ಲಿ ಪ್ರತಿನಿತ್ಯ 3 ಮಂದಿ ಕೋಟಿ ಗೆಲ್ಲುವ ಅವಕಾಶಗಳಿರುತ್ತದೆ. 49 ಅಥವಾ 59 ರೂಪಾಯಿಯನ್ನು 11 ಜನರ ತಂಡವನ್ನು ಮಾಡಬೇಕಾಗುತ್ತದೆ. ನಾವು ಆಯ್ಕೆ ಮಾಡಿದ ನಾಯಕ/ ಉಪನಾಯಕ ಸೇರಿದಂತೆ 11 ಮಂದಿ ಆಟಗಾರರು ಉತ್ತಮವಾಗಿ ಆಡಿದರೆ ರ್‍ಯಾಂಕ್‌ ಆಧಾರದಲ್ಲಿ ಕೋಟಿ ಗೆಲ್ಲಬಹುದಾಗಿದೆ. ಪ್ರಥಮ ರ್‍ಯಾಂಕ್‌ ನಲ್ಲಿ ಬಂದರೆ ಒಂದೂವರೆ ಕೋಟಿ ಆ ಬಳಿಕ ಲಕ್ಷ ನಂತರ ಸಾವಿರ ಹೀಗೆ ಈ ಫ್ಯಾಂಟಸಿ ಗೇಮಿಂಗ್‌ ಆ್ಯಪ್ ನಲ್ಲಿ ಬಹುಮಾನ ಇರುತ್ತದೆ.

ಎಚ್ಚರ ಇದು ಹೆಚ್ಚಾದರೆ ಗೀಳು.. ಡ್ರೀಮ್‌ 11 ಸೇರಿದಂತೆ ಹತ್ತಾರು ಫ್ಯಾಂಟಸಿ ಆ್ಯಪ್ ಗಳಿವೆ. ಕೇವಲ 49 ಅಥವಾ 59 ರೂ. ಹಾಕಿದರೆ ಇಲ್ಲಿ ಸುಲಭವಾಗಿ ಕೋಟಿ ಗೆಲ್ಲುತ್ತಾರೆ ಎನ್ನುವುದು ನಮ್ಮ ಭ್ರಮೆ ಅಷ್ಟೇ. ಇಲ್ಲಿ ಕೋಟಿ ಗೆಲ್ಲುವ ಆಸೆಯಿಂದ ಪ್ರತಿನಿತ್ಯ ಕೋಟ್ಯಂತರ ಮಂದಿಯ ಪೈಪೋಟಿ ಇರುತ್ತದೆ. ಇವರಲ್ಲಿ ಕೋಟಿ ಸಿಗುವುದು ಅದೃಷ್ಟವಂತರಿಗೆ ಮಾತ್ರ. ಈ ಅದೃಷ್ಟವಂತರು ಕೋಟಿಯಲ್ಲಿ ಒಬ್ಬರು ಇಬ್ಬರು ಮಾತ್ರ. ಇಲ್ಲಿ ಕೋಟಿ ಗೆಲ್ಲುತ್ತೇವೆ ಎಂದು ತಂಡವನ್ನು ಕಟ್ಟಿ ಹಣ ಹಾಕುತ್ತಲೇ ಹೋದರೆ ನಷ್ಟ ಆಗಿ ಜೇಬು ಖಾಲಿ ಆಗುವುದು ಗ್ಯಾರಂಟಿ. ಆದ್ದರಿಂದ ಈ ಫ್ಯಾಂಟಸಿ ಆ್ಯಪ್ ಗಳ ಬಗ್ಗೆ ಎಚ್ಚರವಿರಲಿ.

Advertisement

Udayavani is now on Telegram. Click here to join our channel and stay updated with the latest news.

Next