ತಿ.ನರಸೀಪುರ: ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವಿನ ಕಲಿಕಾ ಅಂತರವನ್ನು ಸರಿದೂಗಿಸಲು, ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟದಲ್ಲಿ ಸುಧಾರಣೆ ತರಲು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪೂರಕವಾದ ಕಾರ್ಯಕ್ರಮವನ್ನು ರೂಪಿಸಲು ರೋಟರಿ ಸಂಸ್ಥೆ ಸಜಾjಗಿದೆ ಎಂದು ರೋಟರಿ ಜಿಲ್ಲಾ ಗೌರ್ನರ್ ಡಾ.ಆರ್.ಎಸ್.ನಾಗಾರ್ಜುನ ಹೇಳಿದರು.
ನಂಜನಗೂಡು ರಸ್ತೆಯಲ್ಲಿರುವ ಕಬಿನಿ ನೀರಾವರಿ ನಿಗಮದ ಅತಿಥಿ ಗೃಹದಲ್ಲಿ ಆಯೋಜಿಸಿದ್ದ ರೋಟರಿ ಸಂಸ್ಥೆಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಿಗುವ ಸೌಲಭ್ಯ, ಅನುಕೂಲತೆಯನ್ನು ಸರ್ಕಾರಿ ಶಾಲೆಗಳಲ್ಲೂ ಕಲ್ಪಿಸಲು ರೋಟರಿ ಸಂಸ್ಥೆ ಮುಂದಾಗಿದೆ.
ಕೊಠಡಿಗಳು, ಶೌಚಾಲಯ, ಕೈ ತೊಳೆಯಲು ಘಟಕ ನಿರ್ಮಾಣಕ್ಕೆ ನೆರವು ನೀಡಿ ಮಕ್ಕಳಿಗೆ ಇ- ಲರಿ°ಂಗ್ ಕಿಟ್ ವಿತರಣೆಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. ಸಾಮಾನ್ಯ ಜನರು ಕಡಿಮೆ ವೆಚ್ಚದಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳುವ ಬಗ್ಗೆ ಮಾಹಿತಿ ಕೊಟ್ಟು, ನೆರವು ನೀಡುವ ವಿನೂತನ ಯೋಜನೆಗಳು ರೋಟರಿ ಸಂಸ್ಥೆಯ ಮುಂದಿವೆ ಎಂದು ನುಡಿದರು.
ಸೇವಾ ವೆಚ್ಚ ಭರಿಸಿ: ರೋಟರಿಯ ನಿಯಮಗಳನ್ನು ಸದಸ್ಯರೆಲ್ಲರೂ ಸೇವಾ ಮನೋಭಾವನೆಯಿಂದ ಪಾಲಿಸಬೇಕು. ಸೇವಾ ಕಾರ್ಯಕ್ರಮಕ್ಕೆ ವಾರ್ಷಿಕ ವೆಚ್ಚವನ್ನು ಮಾಡಲಿಚ್ಛಿಸದ ಸದಸ್ಯರು ಸಂಸ್ಥೆಯಿಂದ ನಿರ್ಗಮಿಸಬಹುದು. ವಾರಕ್ಕೊಮ್ಮೆ ಇಲ್ಲವೇ ತಿಂಗಳಲ್ಲಿ ಎರಡು ಸಭೆಯನ್ನು ಕಡ್ಡಾಯವಾಗಿ ನಡೆಸಬೇಕು. ರೋಟರಿ ನಿಯತಕಾಲಿಕೆಗೆ ಸದಸ್ಯರೆಲ್ಲರೂ ಚಂದದಾರರಾಗಬೇಕು. ನಿಷ್ಕ್ರಿಯತೆಯಿಂದ ಇರುವ ನರಸೀಪುರ ರೋಟರಿ ಸಂಸ್ಥೆಯನ್ನು ಕ್ರಿಯಾಶೀಲಗೊಳಿಸಬೇಕೆಂದು ಡಾ.ಆರ್.ಎಸ್.ನಾಗಾರ್ಜುನ ಸೂಚಿಸಿದರು.
ರೋಟರಿಯ ನಿಯೋಜಿತ ಅಧ್ಯಕ್ಷ ಡಿ.ದೇವರಾಜ ಅರಸು ಮಾತನಾಡಿ, ಹಗಲಿನಲ್ಲಿ ಉರಿಯುವ ವಿದ್ಯುತ್ ದೀಪಗಳಿಂದ ಇಂಧನ ಅಪವ್ಯಯವನ್ನು ತಪ್ಪಿಸಲು ಜಾಗೃತಿ ಮೂಡಿಸಲಾಗುವುದು. ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡುವ ರೋಟರಿಯ ಉದ್ದೇಶಿತ ಯೋಜನೆಯ ಅನುಷ್ಠಾನಕ್ಕೆ ಬದ್ಧರಾಗಿ ದುಡಿಯುತ್ತೇವೆ. ನೆಟ್ಟ ಗಿಡವನ್ನು ಮರವಾಗಿ ಬೆಳೆಯುವವರೆವಿಗೂ ರಕ್ಷಣೆ ಮಾಡಲು ಗಮನ ನೀಡಲಾಗುವುದೆಂದು ತಿಳಿಸಿದರು.
ಅಭಿನಂದನೆ: ಗ್ರಾಮ ವಿದ್ಯೋದಯ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಗೊಂಡ ಎಸ್.ಮಹೇಶರನ್ನು ಅಭಿನಂದಿಸಲಾಯಿತು. ಸಹಾಯಕ ಗೌರ್ನರ್ ಬಿ.ಕೆ.ಪ್ರಕಾಶ್, ರೋಟರಿ ಅಧ್ಯಕ್ಷ ಬಿ.ಎಸ್.ಬಸಪ್ಪ, ಕಾರ್ಯದರ್ಶಿ ಎಲ್‌ಐಸಿ ನಾರಾಯಣ, ನಿಯೋಜಿತ ಕಾರ್ಯದರ್ಶಿ ವಿಜಯಕುಮಾರ್, ಪುರಸಭಾ ಸದಸ್ಯ ಟಿ.ಜಿ.ಪುಟ್ಟಸ್ವಾಮಿ, ಗ್ರಾಪಂ ಸದಸ್ಯ ಬಿ.ಪಿ.ಸಿದ್ದರಾಜು, ರೋಟರಿ ಸಂಸ್ಥೆಯ ನಿರ್ದೇಶಕರಾದ ಮಂಜುನಾಥ್, ರಾಮಮೂರ್ತಿ, ತೋಟದಪ್ಪ ಬಸವವರಾಜು, ಎಂ.ರಾಜಪ್ಪ, ಪಿ.ಜಯಶೀಲ ಇತರರು ಇದ್ದರು.