Advertisement

ರೋಟರಿ ಸಮುದಾಯ ದಳ ಆರೋಗ್ಯ ಶಿಬಿರ

10:38 AM Nov 08, 2017 | |

ಬೆಂಗ್ರೆ: ಮಂಗಳೂರಿನ ಗೂಡ್ಸ್‌ ಶೆಡ್‌ ಪ್ರದೇಶದಲ್ಲಿ ರೈಲ್ವೆ ಇಲಾಖೆಗೆ ಭೂಸ್ವಾಧೀನ ಕಾರಣ ಸುಮಾರು 100 ವರ್ಷಗಳ ಹಿಂದೆ ಇಲ್ಲಿಗೆ ಬಂದು ನೆಲೆಸಿರುವವರಿಗೆ ತಮ್ಮ ಭೂಮಿಯ ಆರ್‌ಟಿಸಿ ಇತ್ಯಾದಿ ಸಿಕಿಲ್ಲ. ಇಲ್ಲಿ ಕುಡಿಯುವ ನೀರು ಸಹಿತ ಹಲವು ಸಮಸ್ಯೆಗಳಿವೆ. ಆದರೂ ಅವೆಲ್ಲವುಗಳ ಬಗ್ಗೆ ಸರಕಾರ ನಿರ್ಲಕ್ಷ್ಯ ಹೊಂದಿದೆ ಎಂದು ವಿಜಯ ಸುವರ್ಣ ಬೆಂಗ್ರೆ ಹೇಳಿದರು.

Advertisement

ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲ, ರೋಟರಿ ಸಮುದಾಯ ದಳ ಬೆಂಗ್ರೆ, ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ನೋಂದಾಯಿತ ಕುಟುಂಬಗಳಿಗೆ ಮಣಿಪಾಲ ಆರೋಗ್ಯ ಕಾರ್ಡ್‌ ವಿತರಣೆ ಕಾರ್ಯಕ್ರಮ ಸಂದರ್ಭ ರೋಟರಿ ಸಮುದಾಯ ದಳ ವತಿಯಿಂದ ನೀಡಲಾದ ಸಮ್ಮಾನ ಸ್ವೀಕರಿಸಿ ಮಾತನಾಡಿದರು.

ರಾಜ್ಯೋತ್ಸವ ಪ್ರಶಸ್ತಿಗೆ ಯೋಗ್ಯರು
ಮಾಜಿ ಮೇಯರ್‌ ಗಣೇಶ್‌ ಹೊಸ ಬೆಟ್ಟು ಮಾತನಾಡಿ, ವಿಜಯ ಸುವರ್ಣ ರಾಷ್ಟ್ರಮಟ್ಟದ ಕ್ರೀಡಾಳುವಾಗಿದ್ದಾಗ, ಕೋಚ್‌ ಆಗಿದ್ದಾಗಲೇ, ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯಬೇಕಿತ್ತು ಎಂದು ಹೇಳಿದರು.

ಮಂಗಳೂರು ರೋಟರಿ ಕ್ಲಬ್‌ ಅಧ್ಯಕ್ಷ ವಸಂತ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ನೇತೃತ್ವ ವಹಿಸಿದ್ದ ಹಿರಿಯ ಎಲುಬು ಮತ್ತು ಕೀಲು ತಜ್ಞ ಡಾ| ಆತ್ಮಾನಂದ ಹೆಗ್ಡೆ ಮಾತನಾಡಿದರು.

ರೋಟರಿ ನಿರ್ದೇಶಕ ಸಂಜೀವ ಪೂಜಾರಿ, ರೋಟರಿ ಸಮುದಾಯ ದಳದ ಮಾಧವ ಸುವರ್ಣ, ನಿವೃತ್ತ ಪ್ರಾಂಶುಪಾಲ ಪ್ರೊ| ರಾಧಾಕೃಷ್ಣ, ಕಾರ್ಪೊರೇಟರ್‌ ಮೀರಾ ಕರ್ಕೇರ, ಮಾಜಿ ಉಪಮೇಯರ್‌ ಕವಿತಾ ಸಾಲ್ಯಾನ್‌, ಬೆಂಗ್ರೆ ಮಹಾಜನ ಸಭಾ ಉಪಾಧ್ಯಕ್ಷ ಓಂದಾಸ್‌ ಬೆಂಗ್ರೆ, ಬೆಂಗ್ರೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಸಂಜಯ್‌ ಬೆಂಗ್ರೆ, ಉಪಾಧ್ಯಕ್ಷ ಲೋಕೇಶ್‌ ಸುವರ್ಣ, ಕಾರ್ಯದರ್ಶಿ ರಾಕೇಶ್‌ ಬಿ. ಸುವರ್ಣ, ಸಂಘದ ಸಮಿತಿಯ ಸದಸ್ಯರಾದ ರಂಜಿತ್‌ ಸುವರ್ಣ, ರೂಪಾ ಮೊದಲಾದವರು ಉಪಸ್ಥಿತರಿದ್ದರು.

Advertisement

ಆರೋಗ್ಯ ಕಾರ್ಡ್‌ ವಿತರಣೆ
ಶಿಬಿರದಲ್ಲಿ ಪಾಲ್ಗೊಂಡ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಆರೋಗ್ಯ ಕಾರ್ಡ್‌ಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

ಪ್ರಸ್ತುತ ಕಾಲದ ಬೇಡಿಕೆ
ಮೂರು ಸುತ್ತ ನೀರಿನಿಂದ ಆವೃತ್ತವಾದ ಪರ್ಯಾಯ ದ್ವೀಪ ಬೆಂಗ್ರೆಯಲ್ಲಿ ಈಗ ಜನಸಂಖ್ಯೆ ಹೆಚ್ಚುತ್ತಿದ್ದು, ಇಲ್ಲಿಗೆ ಒಳಚರಂಡಿ ವ್ಯವಸ್ಥೆ ಇನ್ನೂ ಆಗಿಲ್ಲ.ಹಾಗಾಗಿ ಇನ್ನು ಪೈಪ್‌ಲೈನ್‌ ನೀರನ್ನು ಕುಡಿಯಲು ಬಳಸುವುದು ಸೂಕ್ತ.
– ಗಣೇಶ್‌ ಹೊಸಬೆಟ್ಟು, ಮಾಜಿ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next