Advertisement

ಪೆರ್ಡೂರು ರೋಟರಿಯಿಂದ ಅಶಕ್ತ ಕುಟುಂಬಕ್ಕೆ ಮನೆ ಹಸ್ತಾಂತರ

12:43 PM Mar 11, 2017 | |

ಹೆಬ್ರಿ: ಈಗಾಗಲೇ ಹತ್ತು ಹಲವಾರು ಜನಪರ ಕಾರ್ಯ ಕ್ರಮದೊಂದಿಗೆ ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿರುವ ಪೆರ್ಡೂರು ರೋಟರಿ ಕ್ಲಬ್‌ 2016-17ನೇ ಸಾಲಿನ ಅಧ್ಯಕ್ಷ, ಶಿಕ್ಷಣ ಸಂಯೋಜನಾಧಿಕಾರಿ ಚಂದ್ರ ನಾಯ್ಕ ಎಚ್‌. ಪ್ರಸ್ತುತ ವರ್ಷದಲ್ಲಿ ಎರಡು ಮನೆ ನಿರ್ಮಿಸಿಕೊಡುವ ಉದ್ದೇಶದಿಂದ ಕಾಯೊನ್ಮುಖರಾಗಿದ್ದು ನಿವೇಶನ ರಹಿತ ಅಸಕ್ತ ಕುಟುಂಬಕ್ಕೆ ಸಹಾಯ ಹಸ್ತಚಾಚಲು ಮುಂದಾಗಿದ್ದಾರೆ.

Advertisement

ಉಡುಪಿ ತಾಲೂಕು ಚೇರ್ಕಾಡಿ ಗ್ರಾಮದ ಕನ್ನಾರು ತೆಂಗಿನಜಡ್ಡು ನೇತ್ರಾವತಿ ಕೃಷ್ಣ ದಂಪತಿ ತೀರಾ ಬಡಕುಟುಂಬವಾಗಿದ್ದು, ನೇತ್ರಾವತಿ ಹಲವು ಸಮಯದಿಂದ ಅಸೌಖ್ಯದಿಂದ ಬಳಲುತ್ತಿದ್ದಾರೆ. ಇಬ್ಬರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೃಷ್ಣ ಅವರು  ಹೋಟೆಲ್‌ನಲ್ಲಿ ದಿನಗೂಲಿ ನೌಕರ. ಇವರ ಸಂಪಾದನೆ ಮಡದಿಯ ಚಿಕಿತ್ಸೆಗೆ ಸಾಕಾಗದು. ಇಂತಹ ಪರಿಸ್ಥಿತಿಯಲ್ಲಿ ಮನೆಯಿಲ್ಲದ ಇವರಿಗೆ ರಿಯಾಯಿತಿ ದರದಲ್ಲಿ ಜಾಗ ಖರೀದಿಸಿಕೊಟ್ಟು 2.5ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದ್ದು ಗ್ರಾಮ ಪಂಚಾಯತ್‌ನಿಂದ 60ಸಾವಿರ ದೊರಕಿಸಿಕೊಟ್ಟಿದ್ದು ಉಳಿದ ಹಣವನ್ನು ರೋಟರಿ ಭರಿಸಲು ಮುಂದಾಗಿದೆ. ಹಾಗೂ ಇನ್ನೊಂದು  ಮನೆ ಕುಂದಾಪುರ ತಾಲೂಕು ರಟ್ಟಾಡಿ ಗ್ರಾಮದ ಬಂಡೀಮರದ ಕಟ್ಟೆಯ ವಸಂತಿ ಸುರೇಶ್‌ರವರಿಗೆ ನೀಡುತ್ತಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿಗೂ ಸಹ 2 ಲಕ್ಷ  ನೀಡುವ ಉದ್ದೇಶವಿದ್ದು ಈಗಾಗಲೇ ಒಂದು ಲಕ್ಷ ರೂಪಾಯಿ ನೀಡಲಾಗಿದೆ. ಸದ್ದಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಪೆರ್ಡೂರು ರೋಟರಿ ಬಗ್ಗೆ ಗ್ರಾಮಸ್ಥರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next