Advertisement

ಲಂಕೆಗೆ ಲೀಡ್‌ ಕೊಡಿಸಿದ ರೋಷನ್‌

06:25 AM Nov 16, 2018 | Team Udayavani |

ಕ್ಯಾಂಡಿ: ಕೆಳ ಕ್ರಮಾಂಕದ ಆಟಗಾರ ರೋಷನ್‌ ಸಿಲ್ವ ಅವರ 85 ರನ್‌ ನೆರವಿನಿಂದ ಇಂಗ್ಲೆಂಡ್‌ ವಿರುದ್ಧದ ಕ್ಯಾಂಡಿ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾ 46 ರನ್ನುಗಳ ಇನ್ನಿಂಗ್ಸ್‌ ಮುನ್ನಡೆ ಗಳಿಸಿದೆ.

Advertisement

ಇಂಗ್ಲೆಂಡಿನ 290 ರನ್ನುಗಳಿಗೆ ಜವಾಬು ನೀಡಿದ ಶ್ರೀಲಂಕಾ, ಪಂದ್ಯದ 2ನೇ ದಿನವಾದ ಗುರುವಾರ 336ರ ತನಕ ಬೆಳೆಯಿತು. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿ ಒಂದು ಓವರ್‌ ಆಡಿರುವ ಇಂಗ್ಲೆಂಡ್‌ ಇನ್ನೂ ಖಾತೆ ತೆರೆದಿಲ್ಲ. 2 ದಿನಗಳಲ್ಲಿ 20 ವಿಕೆಟ್‌ ಉರುಳಿದ್ದನ್ನು ಗಮನಿಸುವಾಗ ಈ ಪಂದ್ಯ ಸ್ಪಷ್ಟ ಫ‌ಲಿತಾಂಶ ದಾಖಲಿಸುವ ಸಾಧ್ಯತೆ ನಿಚ್ಚಳವಾಗಿದೆ. ಗಾಲೆ ಟೆಸ್ಟ್‌ ಪಂದ್ಯ ಜಯಿಸಿದ ಇಂಗ್ಲೆಂಡ್‌ 1-0 ಮುನ್ನಡೆಯಲ್ಲಿದೆ.

ರೋಷನ್‌ ಸಿಲ್ವ ಕ್ರೀಸ್‌ ಆಕ್ರಮಿಸಿಕೊಳ್ಳುವುದಕ್ಕಿಂತ ಮೊದಲು ಆರಂಭಕಾರ ದಿಮುತ್‌ ಕರುಣರತ್ನೆ 63, ಧನಂಜಯ ಡಿ’ಸಿಲ್ವ 59 ರನ್‌ ಮಾಡಿ ಆಂಗ್ಲರ ದಾಳಿಗೆ ಸಡ್ಡು ಹೊಡೆದಿದ್ದರು. ಇವರಿಬ್ಬರ 4ನೇ ವಿಕೆಟ್‌ ಜತೆಯಾಟದಲ್ಲಿ 96 ರನ್‌ ಸಂಗ್ರಹಗೊಂಡಿತು. ಈ ಜೋಡಿ ಬೇರ್ಪಟ್ಟ ಬಳಿಕ ಇಂಗ್ಲೆಂಡ್‌ ಬೌಲರ್‌ಗಳು ತಿರುಗಿ ಬಿದ್ದರು. 165 ರನ್ನಿಗೆ 6 ವಿಕೆಟ್‌ ಬಿತ್ತು. ಆದರೆ ರೋಷನ್‌ ಸಿಲ್ವ ಕೆಳ ಕ್ರಮಾಂಕದ ಆಟಗಾರರ ಉಪಯುಕ್ತ ನೆರವಿನಿಂದ ಲಂಕಾ ಸರದಿಯನ್ನು ಬೆಳೆಸುವಲ್ಲಿ ಯಶಸ್ವಿಯಾದರು. ಅವರಿಗೆ ಡಿಕ್ವೆಲ್ಲ (25), ಧನಂಜಯ (31), ಲಕ್ಮಲ್‌ (15) ಬೆಂಬಲವಿತ್ತರು.

ಶತಕದ ಹಾದಿಯಲ್ಲಿದ್ದ ರೋಷನ್‌ ಸಿಲ್ವ ಕೊನೆಯವರಾಗಿ ಪೆವಿಲಿಯನ್‌ ಸೇರಿಕೊಂಡರು. ಅವರ 85 ರನ್‌ 174 ಎಸೆತಗಳಿಂದ ಬಂತು (4 ಬೌಂಡರಿ, 1 ಸಿಕ್ಸರ್‌). ಇಂಗ್ಲೆಂಡ್‌ ಪರ ಲೀಚ್‌ ಮತ್ತು ರಶೀದ್‌ ತಲಾ 3, ಅಲಿ 2 ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next