Advertisement

ನಂದಿಗಿರಿಧಾಮಕ್ಕೆ ರೋಪ್‌ ವೇ: ಸರ್ವೆ ಆರಂಭ

05:16 PM Jul 17, 2021 | Team Udayavani |

ಚಿಕ್ಕಬಳ್ಳಾಪುರ: ಕರ್ನಾಟಕದ ಊಟಿ ಎಂದೇ ಖ್ಯಾತಿಪಡೆದ, ಪ್ರಾಕೃತಿಕ ಸೌಂದರ್ಯ ತನ್ನ ಮಡಲಲ್ಲಿಟ್ಟುಕೊಂಡಿರುವ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣನಂದಿಗಿರಿಧಾಮದಲ್ಲಿ ರೂಪವೇ ನಿರ್ಮಿಸಲುಕೊನೆಗೂ ಯೋಗ ಬಂದಂತಾಗಿದೆ.ಚಿತ್ರನಟ ದಿ.ಶಂಕರ್‌ನಾಗ್‌ ಅವರು ಜಿಲ್ಲೆಯ ನಂದಿಬೆಟ್ಟಕ್ಕೆ ರೋಪ್‌ವೇ (ಕೇಬಲ್‌ಕಾರ್‌) ಅಳವಡಿಸಲುಸರ್ಕಾರದೊಂದಿಗೆ ಸಮಾಲೋಚನೆ ನಡೆಸಿದರು.

Advertisement

ಆದರೆ, ಕಾಲ ಕೂಡಿಬಂದಿರಲಿಲ್ಲ. ಇದೀಗ ಅವರಕನಸು ನನಸಾಗುವ ಲಕ್ಷಣಗಳು ಕಂಡು ಬರುತ್ತಿವೆ.ಪ್ರಸ್ತುತ ಸರ್ವೆ ಕಾರ್ಯ ಆರಂಭವಾಗಿದೆ. ಕಳೆದಮೂರ್ನಾಲ್ಕು ದಿನಗಳಿಂದ ನಂದಿ ಬೆಟ್ಟದ ಸುತ್ತಮುತ್ತಸರ್ವೆ ನಡೆಯುತ್ತಿದೆ.

ರೋಪ್ವೆಗೆ ಜಮೀನು ಮಂಜೂರು:ಚಿಕ್ಕಬಳ್ಳಾಪುರತಾಲೂಕಿನಮುಡುಕುಹೊಸಹಳ್ಳಿಯ ಸರ್ವೆ ನಂಬರ್‌20ರಲ್ಲಿ 3.20 ಎಕರೆ ಹಾಗೂ ದೊಡ್ಡಬಳ್ಳಾಪುರತಾಲೂಕಿನ ಹೆಗಡಿಹಳ್ಳಿ ಗ್ರಾಮದಲ್ಲಿ 3.20 ಎಕರೆಜಮೀನು ರೋಪ್‌ವೇಗೆ ಮಂಜೂರಾಗಿದೆ.  ಬೆಟ್ಟದಲ್ಲಿಪ್ರವಾಸಿಗರನ್ನು ಇಳಿಸಲು ಮತ್ತು ಹತ್ತಿಸಿಕೊಳ್ಳಲುಪಾರ್ಕಿಂಗ್‌ ಸ್ಥಳದ ಬಳಿ 5080 ಮೀಟರ್‌ ವಿಸ್ತೀರ್ಣದ ಸ್ಥಳವನ್ನು ಗುರುತು ಮಾಡಲಾಗಿದೆ.

ಪ್ರವಾಸಿಗರಿಂದಲೂ ಮಾಹಿತಿ: ರೋಪ್‌ವೇಅಧ್ಯಯನ ಮತ್ತು ಸರ್ವೆ ನಡೆಸಲು ಐಡೆಕ್‌(ಮೂಲಸೌಕರ್ಯ ಅಭಿವೃದ್ಧಿ ನಿಗಮ)ಗೆ ಸೂಚಿಸಲಾಗಿದೆ. ಸಂಸ್ಥೆಯಿಂದ ಸರ್ವೆ ಆರಂಭವಾಗಿದೆ.ರೋಪ್‌ವೇಯಿಂದ ಅನುಕೂಲ ಇದೆಯಾ? ನಿಮಗೆರೋಪ್‌ವೇನಲ್ಲಿ ತೆರಳಲು ಇಷ್ಟವಾ? ಹೀಗೆ ನಾನಾಪ್ರಶ್ನೆಗಳಿಗೆ ಪ್ರವಾಸಿಗರಿಂದ ಉತ್ತರ ಪಡೆದಿದ್ದಾರೆ.100ಕ್ಕೂ ಹೆಚ್ಚು ಪ್ರವಾಸಿಗರನ್ನು ಈ ಸಮೀಕ್ಷೆಗೆಒಳಪಡಿಸಲಾಗಿದೆ. ಬಹಳಷ್ಟು ಮಂದಿ ರೋಪ್‌ವೇಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನುತ್ತವೆಪ್ರವಾಸೋದ್ಯಮ ಇಲಾಖೆ ಮೂಲಗಳು.ಪಿಲ್ಲರ್‌ ನಿರ್ಮಾಣಕ್ಕೆ ಮಣ್ಣು ಪರೀಕ್ಷೆ: ರೋಪ್‌ವೇಆರಂಭದ ಸ್ಥಳ ಮತ್ತು ಅದು ಸಾಗುವ ಹಾದಿಯಲ್ಲಿಪಿಲ್ಲರ್‌ ನಿರ್ಮಾಣವಾಗುವ ಸ್ಥಳಗಳನ್ನು ಗುರುತಿಸಿಅಲ್ಲಿನ ಮಣ್ಣನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈಆರಂಭಿಕ ಸಮೀಕ್ಷೆಗಳು ವೇಗ ಪಡೆಯುತ್ತಿವೆ

.ಆರು ವರ್ಷಗಳ ಹಿಂದೆಯೇ ಘೋಷಣೆ: ಚಿತ್ರನಟಶಂಕರ್‌ನಾಗ್‌ 80ರ ದಶಕದಲ್ಲಿ ನಂದಿ ಬೆಟ್ಟಕ್ಕೆ ರೋಪ್‌ವೇಅಳವಡಿಸುವ ಸಂಬಂಧರಾಜ್ಯಸರ್ಕಾರದೊಂದಿಗೆಸಮಾಲೋಚನೆ ನಡೆಸಿದ್ದರು. ಅವರ ನಿಧನದ ನಂತರಯೋಜನೆ ನನೆಗುದಿಗೆ ಬಿದ್ದಿತ್ತು. ಸಿದ್ದರಾಮಯ್ಯಮುಖ್ಯಮಂತ್ರಿ ಆಗಿದ್ದಾಗ 2015-16ರ ಬಜೆಟ್‌ನಲ್ಲಿಈ ಯೋಜನೆ ಪ್ರಕಟಿಸಿದ್ದರು.ಬಿಡ್‌ನ‌ಲ್ಲಿ ಭಾಗವಹಿಸಿದ ಸಂಸ್ಥೆಗಳು: ರೋಪ್‌ವೇನಿರ್ಮಾಣಕ್ಕೆ ಸಂಬಂಧಿಸಿದಂತೆ 2017ರ ಮೇತಿಂಗಳಲ್ಲಿ ಮೊದಲ ಬಾರಿಗೆ ಟೆಂಡರ್‌ ಕರೆದಾಗಒಂದು ಸಂಸ್ಥೆ ಮಾತ್ರ ಭಾಗವಹಿಸಿತ್ತು. ತಾಂತ್ರಿಕ ಬಿಡ್‌ನಲ್ಲಿ ತೇರ್ಗಡೆ ಆಗದ ಕಾರಣ ಟೆಂಡರ್‌ ತಿರಸ್ಕರಿಸಲಾಗಿತ್ತು.

Advertisement

ಎರಡನೇ ಬಾರಿ ಟೆಂಡರ್‌ ಕರೆದಾಗಲೂಅದೇ ಸಮಸ್ಯೆ ಮರುಕಳಿಸಿತ್ತು. ಮೂರನೇ ಟೆಂಡರ್‌ಸಹ ಫಲಪ್ರದವಾಗಿರಲಿಲ್ಲ. ಪ್ರವಾಸೋದ್ಯಮ ಸಚಿವಸಿ.ಪಿ.ಯೋಗೀಶ್ವರ್‌ ರೋಪ್‌ವೇ ಅಳವಡಿಸುವಎರಡು ತಿಂಗಳ ಹಿಂದೆ ಅಧಿಕಾರಿಗಳ ಸಭೆ ಸಹನಡೆಸಿದ್ದರು. ಆ ಸಭೆಯಲ್ಲಿ ಐಡೇಕ್‌ ಸಂಸ್ಥೆಯ ಅಧಿಕಾರಿಗಳು ನಂದಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣಯೋಜನೆಯ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ವರ್ಷದಲ್ಲಿನಂದಿಬೆಟ್ಟಕ್ಕೆ ರೋಪ್‌ವೇ ನಿರ್ಮಿಸಲಾಗುವುದುಎಂದು ಸಚಿವರು ಸಭೆಯಲ್ಲಿ ತಿಳಿಸಿ, ಸ್ವತಃ ತಾವೇನಂದಿಗಿರಿಧಾಮಕ್ಕೆ ಭೇಟಿ ನೀಡು ವುದಾಗಿ ಹೇಳಿದ್ದಾರೆ.ಅಂದುಕೊಂಡಂತೆ ನಡೆದರೇ ಜಿಲ್ಲೆಯ ನಂದಿಗಿರಿಧಾಮಕ್ಕೆ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಲು ಸಾಧ್ಯವಾಗುತ್ತದೆ ಎಂಬ ಆಶಾಭಾವನೆ ಜನರಲ್ಲಿ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next