Advertisement
ಬೆಂಗಳೂರು, ತುಮಕೂರು ಬಸ್ಸುಗಳಲ್ಲಿ ಪ್ರಯಾಣ ಕೈಗೊಂಡರೆ ನಿಮಗೆ ಕೆಲವು ಹೆಂಗಸರ ಮಡಿಲಲ್ಲಿ ಕಾಕಡ, ಕನಕಾಂಬರ ಇತ್ಯಾದಿ ಬಿಡಿಹೂಗಳು ತುಂಬಿದ ಚೀಲ ಕಾಣುತ್ತದೆ. ಚಲಿಸುತ್ತಿರುವ ಬಸ್ಸಿನಲ್ಲೇ ಅವರು ಚೀಲದಿಂದ ಒಂದೊಂದೇ ಹೂಗಳನ್ನು ಆಯ್ದು ನೂಲಿನಿಂದ ಮಾಲೆ ಹೆಣೆಯುತ್ತಿರುತ್ತಾರೆ.
Related Articles
Advertisement
ಬೇಸಾಯದ ವಿಷಯಕ್ಕೆ ಬಂದರೆ ಬೀಜವನ್ನು ಜೋಪಾನವಾಗಿ ಕಾಪಿಡುವುದು, ಬಿತ್ತುವುದು, ಗೊಬ್ಬರ ಹಾಕುವುದು, ನೇಜಿ ನೆಡುವುದು, ಪೈರು ಕೊಯ್ಯುವುದು, ಸೂಡಿ ಹೊಡೆಯುವುದು, ಭತ್ತ ಬೇಯಿಸುವುದು-ಒಣಗಿಸುವುದು ಈ ಎಲ್ಲದರಲ್ಲೂ ಹೆಣ್ಣಿನ ಪಾತ್ರವೇ ಅಧಿಕ. ಹೈನುಗಾರಿಕೆಯನ್ನು ತೆಗೆದುಕೊಂಡರೆ ಹಾಲು ಕರೆಯುವುದು, ಹಿಂಡಿ ಕೊಡುವುದು, ಹುಲ್ಲು ಕೊçದು ಹಾಕುವುದೂ ಹೆಚ್ಚಾಗಿ ಹೆಣ್ಣಿನ ಕೆಲಸವೇ. ಕುರಿ, ಕೋಳಿ, ಹಂದಿ ಸಾಕಣೆಯ ವಿಷಯದಲ್ಲೂ ಅಷ್ಟೆ ಹೆಣ್ಣಿನದೇ ಪ್ರಧಾನ ಪಾತ್ರ.
ಈ ಮೇಲಿನ ಉದಾಹರಣೆಗಳಲ್ಲಿ ಹೆಣ್ಣಿನ ಶ್ರಮ, ಶ್ರದ್ಧೆ, ಮನೋಬಲ, ನಿಯತ್ತು, ತಾಳ್ಮೆ, ಶಕ್ತಿ, ಸಾಮರ್ಥ್ಯವನ್ನು ಕಾಣಬಹುದು. ಹೆಣ್ಣು ಕುಟುಂಬದ ಹಿತಕ್ಕಾಗಿ ತನ್ನನ್ನು ಗಂಧದಂತೆ ತೇಯುತ್ತಾಳೆ. ಅವಳ ಸ್ವಂತ ಆಸೆ, ಆಕಾಂಕ್ಷೆಗಳು ಅವಳಿಗೇ ಗೊತ್ತಿರುವುದಿಲ್ಲ. ಹೆಣ್ಣಿನ ಈ ಅವಿರತ ದುಡಿಮೆ, ಕಷ್ಟ ಸಹಿಷ್ಣುತೆ, ಸಹನೆ, ಸ್ವಾವಲಂಬನೆ, ತ್ಯಾಗವನ್ನು ಗಂಡಿನಲ್ಲಿ ಕಾಣಲು ಸಾಧ್ಯವಿಲ್ಲ. ಹೆಣ್ಣನ್ನು ಭೂಮಿಗೆ ಹೋಲಿಸುವುದು ಇದೇ ಕಾರಣದಿಂದ ಇರಬಹುದು. ಅದು ಅವಳು ಹುಟ್ಟಿನಿಂದಲೇ ಪಡೆದ ಗುಣ.
ಹೆಣ್ಣು ಮನೆಕೆಲಸ, ಕೌಟುಂಬಿಕ ಜವಾಬ್ದಾರಿಯನ್ನೂ ನಿರ್ವಹಿಸಿ ಕೃಷಿ ಅಥವಾ ಹೊರಗಿನ ಕೆಲಸದಲ್ಲಿ ಪಾಲ್ಗೊಳ್ಳುತ್ತಾಳೆ. ಆದರೂ ಅವಳ ಕೆಲಸ ಗಣನೆಗೇ ಬರುವುದಿಲ್ಲ. ಯಾಕೆಂದರೆ ಮಹಿಳೆಯರು ಮಾಡುವ ಮನೆಕೆಲಸವನ್ನು ಸೇವೆಯೆಂದು ಪರಿಗಣಿಸಿ, ಹೆಂಗಸರು ಇರಬೇಕಾದುದು ಹೀಗೇ ಎಂದು ಸಮಾಜದಲ್ಲಿ ನಡೆದುಕೊಂಡು ಬಂದುಬಿಟ್ಟಿದೆ. ಕೃಷಿ ಕೇತ್ರದಲ್ಲಿ ಹೆಣ್ಣು, ಗಂಡು ಸಮಾನ ಕೆಲಸ ಮಾಡಿದರೂ ಹೆಣ್ಣಿಗೆ ಸಂಬಳ ಕಡಿಮೆ, ಗಂಡಿಗೆ ಜಾಸ್ತಿ. ಈ ತಾರತಮ್ಯ ಅಂದಿನಿಂದ ಇಂದಿನವರೆಗೂ ಹಾಗೆಯೇ ಇದೆ!
ಮಡಿಕೇರಿ ಆಕಾಶವಾಣಿಯಲ್ಲಿ ಆಗಾಗ ಬಾನುಲಿ ಕಿರು ಸಂದೇಶವೊಂದು ಪ್ರಸಾರವಾಗುತ್ತದೆ. ಅದು ರೈತ ಮತ್ತು ಡಾಕ್ಟರ್‌ನ ಮಧ್ಯೆ ಗ್ರಾಮೀಣ ಪ್ರದೇಶದ ಕ್ಲಿನಿಕ್ ಒಂದರಲ್ಲಿ ನಡೆಯುವ ಸಂಭಾಷಣೆ. ಹಳ್ಳಿಯ ಹೆಣ್ಣುಮಕ್ಕಳ ವಿಷಯದಲ್ಲಿ ಅದು ಬಹಳ ಪ್ರಸ್ತುತ ಎಂದು ನನಗೆ ಅನಿಸಿದ್ದರಿಂದ ಅದನ್ನು ಇಲ್ಲಿ ಹಾಗೆಯೇ ಕೊಟ್ಟಿದ್ದೇನೆ.
“ಡಾಕ್ಟ್ರೇ ನಮಸ್ಕಾರ’.“ಓ! ಬಾಪ್ಪ, ಏನು ಸಮಾಚಾರ?’
“ಒಂದು ವಾರವಾಯಿತು ಡಾಕೆó ಕೆಮ್ಮು. ಹೋಗ್ತಾನೆ ಇಲ.
“ಹೂಂ. ಎಷ್ಟು ಮಕ್ಕಳಪ್ಪಾ ನಿಂಗೆ? ಏನು ಕೆಲಸ ಮಾಡ್ತೀಯ?’
“ನಾನು ರೈತ ಸ್ವಾಮಿ’.
“ಎಷ್ಟು ಮಕ್ಕಳು?’
“ಮೂರುವರೆ’.
“ಮೂರೂವರೆ?’
“ಒಂದು ಹೊಟ್ಟೆಯಲ್ಲಿದೆ’.
“ಓ! ಅಂದ್ರೆ ಹೆಂಡ್ತಿ ಗರ್ಭಿಣಿ! ಏನು ಕೆಲಸ ಮಾಡ್ತಾಳೆ ನಿನ್ನ ಹೆಂಡ್ತಿ?’
“ಏನಿಲ್ಲ ಸ್ವಾಮಿ. ಅವಳು ಮನೆಯಲ್ಲೇ ಇರ್ತಾಳೆ’.
“ಏನೂ ಕೆಲ್ಸ ಮಾಡಲ್ವ?’
“ಇಲ್ಲ ಸಾಮಿ. ಬೆಳಿಗ್ಗೆ ನಾಲ್ಕು ಗಂಟೆಗೆ ಏಳ್ತಾಳೆ. ನೀರು, ಸೌದೆ ಹೊತ್ತು ತರ್ತಾಳೆ. ಒಲೆ ಹೊತ್ತಿಸಿ ನಾಷ್ಟಾ ರೆಡಿ ಮಾಡ್ತಾಳೆ. ಮತ್ತೆ ಹೊಳೆ ಕಡೆ ಸ್ನಾನ ಮಾಡ್ಕೊಂಡು ಹಂಗೆ ಬಟ್ಟೆನೂ ಒಗೊRಂಡು ಬರ್ತಾಳೆ. ವಾರಕ್ಕೊಂದು ಬಾರಿ ಗಿರಣಿಗೆ ಹೋಗಿ ಹಿಟ್ಟು ಬೀಸ್ಕೊಂಡು ಬರ್ತಾಳೆ. ನಂತ್ರ ಹತ್ರದ ಸಂತೆಗೆ ಮಕ್ಕಳನ್ನೂ ಕರೊRಂಡು ಹೋಗಿ ಟೊಮೆಟೊ ಮಾರ್ತಾಳೆ. ಅÇÉೇ ಬುಟ್ಟಿ ಹೆಣೀತಾಳೆ. ಬರುವಾಗ ಮನೆಗೆ ಬೇಕಾದ ಸಾಮಾನೂ ತರ್ತಾಳೆ. ಅಲ್ಲಿಂದ ಬಂದು ಮಧ್ಯಾಹ್ನದ ಅಡುಗೆ ತಯಾರು ಮಾಡ್ತಾಳೆ’.
“ಮತ್ತೆ ನಿನಗೆ ಮಧ್ಯಾಹ್ನದ ಊಟ?’ “ಹೂಂ. ಅವಳೇ ಮೂರು ಕಿ.ಮೀ. ನಡೆದುಕೊಂಡು ಹೊಲಕ್ಕೆ ಬಂದು ಊಟ ತಂದು ಕೊಡ್ತಾಳೆ. ನಾನು ಊಟ ಮಾಡಿ ಬದುವಲ್ಲಿ ಅÇÉೇ ಮಲಗಿ ಸ್ವಲ್ಪ ವಿಶ್ರಾಂತಿ ತಗೋತೀನಿ’.
“ಆಮೇಲೆ?’ “ಆಮೇಲೆ ಅವಳು ಹೊಲದಲ್ಲಿ ಕಳೆ ಕೀಳ್ತಾಳೆ. ಕೈತೋಟಕ್ಕೆ ನೀರು ಹಾಕ್ತಾಳೆ. ಸಂಜೆ ಒಟ್ಟಿಗೆ ಮನೆಗೆ ಬರಿ¤àವಿ’.
“ಆಮೇಲೆ?’
“ನಾನು ಸ್ನೇಹಿತರ ಜೊತೆ ಸ್ವಲ್ಪ ಕಾಲ ಕಳೀತೀನಿ’.
“ಅಲ್ಲಪ್ಪಾ, ನೀನೇನೋ ಸ್ನೇಹಿತರ ಜೊತೆ ಹೊರ ಹೋಗ್ತಿàಯಾ? ಅವಳೇನು ಮಾಡ್ತಾಳೆ?’
“ಅವಳು ಮನೆಯಲ್ಲೇ ಇರ್ತಾಳೆ ಸಾಮಿ. ರಾತ್ರಿ ಊಟಕ್ಕೆ ರೆಡಿ ಮಾಡಬೇಕಲ್ಲ?’
“ಓಹೋಹೋ! ಅಂದ್ರೆ ರಾತ್ರಿ ಊಟಕ್ಕೆ ಮನೆಗೆ ಬರಿ¤àಯಾ?’
“ಹೂಂ. ತಪ್ಪದೆ ಬರ್ತೀನಿ. ಊಟ ಮಾಡಿ ಬೇಗ ಮಲಕ್ಕೋತೀನಿ’.
“ಅವಳು?’
“ಇಲ್ಲ ಸಾಮಿ. ಪಾತ್ರೆಗೀತ್ರೆ ಎಲ್ಲ ತೊಳೀಬೇಕಲ್ಲ?’
“ಅಂದ್ರೆ ಆಗ್ಲೆà ಹೇಳಿದೆ ಅವಳು ಏನೂ ಕೆಲಸ ಮಾಡಲ್ಲಂತ?!’
“ಹೂಂ. ಹೇಳಿದ್ನಲ್ಲ ಡಾಕ್ಟೇ. ಅವಳೇನೂ ಕೆಲಸ ಮಾಡಲ್ಲ. ಮನೇಲಿರ್ತಾಳೆ’.
“ಅಂದ್ರೆ ನಿನ್ನ ದೃಷ್ಟಿನಲ್ಲಿ ಇವೆಲ್ಲ ಕೆಲಸಾನೇ ಅಲ್ಲ…’
“ಹೂಂ. ಮತ್ತೆ?’
ಹಳ್ಳಿಗಳಲ್ಲಿ ಮಾತ್ರವಲ್ಲ ನಗರಗಳಲ್ಲೂ ಗೃಹಿಣಿಯರ ಕೆಲಸ ಲೆಕ್ಕಕ್ಕಿಲ್ಲ.
ಸಂಸಾರದಲ್ಲಿ ಮಹಿಳೆಯ ಕೆಲಸವನ್ನು ಬೇರು ಬಿಡುವ ಕೆಲಸಕ್ಕೆ ಹೋಲಿಸಬಹುದು. ಬೇರು ಬಿಡುವುದು ಯಾರಿಗೂ ಕಾಣಿಸದ ಆದರೆ ಮಹತ್ವದ ಕೆಲಸ. ಇಡೀ ಮರ ನಿಂತಿರುವುದೇ ಬೇರಿನ ಭದ್ರ ತಳಹದಿಯ ಮೇಲೆ. ಇದನ್ನು ಬರೆಯುವಾಗ ಯಾಕೋ ಕವಿ ಜಿ.ಎಸ್. ಶಿವರುದ್ರಪ್ಪ ಬರೆದ “ಗಂಡ, ಮಕ್ಕಳನು ತೂಗಿದಾಕೆ. ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ?’ ಪದ್ಯವೊಂದು ನೆನಪಾಗುತ್ತಿದೆ. ಸಹನಾ ಕಾಂತಬೈಲು