Advertisement

Sannidhanam P O; ತಮಿಳಿನತ್ತ ರೂಪೇಶ್ ಶೆಟ್ಟಿ

01:06 PM Mar 22, 2024 | Team Udayavani |

ಕನ್ನಡದ “ಬಿಗ್‌ಬಾಸ್‌ 9ನೇ ಆವೃತ್ತಿ’ ವಿಜೇತ, ನಟ ರೂಪೇಶ್‌ ಶೆಟ್ಟಿ ಈಗ ತಮಿಳು ಚಿತ್ರರಂಗದತ್ತ ಹೆಜ್ಜೆ ಇಟ್ಟಿದ್ದಾರೆ. ಕಳೆದ ವರ್ಷ “ಸರ್ಕಸ್‌’ ಸಿನಿಮಾ ಮೂಲಕ ತುಳು ಸಿನಿಮಾರಂಗದಲ್ಲಿ ಸಕ್ಸಸ್‌ ಕಂಡಿದ್ದ ರೂಪೇಶ್‌ ಶೆಟ್ಟಿ, ಸದ್ಯ ಕನ್ನಡದಲ್ಲಿ “ಅಧಿಪತ್ರ’ ಸೇರಿದಂತೆ ಎರಡು ಹೊಸ ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಈ ಸಿನಿಮಾಗಳ ಕೆಲಸಗಳು ಭರದಿಂದ ನಡೆಯುತ್ತಿರುವಾಗಲೇ ರೂಪೇಶ್‌ ಶೆಟ್ಟಿ ತಮಿಳಿನಲ್ಲಿ ಅಭಿನಯಿಸುತ್ತಿರುವ ಹೊಸ ಸಿನಿಮಾ ಕೂಡ ಅನೌನ್ಸ್‌ ಆಗಿದೆ.

Advertisement

ಅಂದಹಾಗೆ, ರೂಪೇಶ್‌ ಶೆಟ್ಟಿ ತಮಿಳಿನಲ್ಲಿ ಅಭಿನಯಿಸುತ್ತಿರುವ ಹೊಸ ಸಿನಿಮಾಕ್ಕೆ “ಸನ್ನಿಧಾನಂ ಪಿ. ಓ’ ಎಂದು ಹೆಸರಿಡಲಾಗಿದ್ದು, ಈ ಸಿನಿಮಾದಲಿ ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ಯೋಗಿ ಬಾಬು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಮಧುರಾವ್‌ ಈ ಸಿನಿಮಾಗೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದು, ಅಮುದ ಸಾರಥಿ ಈ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಈಗಾಗಲೇ ಸದ್ದಿಲ್ಲದೆ “ಸನ್ನಿಧಾನಂ ಪಿ. ಓ’ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದ್ದು, ಎರಡನೇ ಹಂತದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಜೂನ್‌ನಲ್ಲಿ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ತಯಾರಿ ನಡೆಸುತ್ತಿದೆ. ಇನ್ನು “ಸನ್ನಿಧಾನಂ ಪಿ. ಓ’ ಸಿನಿಮಾ ನಾಲ್ಕು ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next