ಚೆನ್ನೈ: ತೆಲುಗು ಮಾತನಾಡುವ ಜನರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಪಡೆದ ಒಂದು ದಿನದ ನಂತರ ನಟಿ ಕಸ್ತೂರಿ ಅವರನ್ನು ಗುರುವಾರ(ನ21) ಚೆನ್ನೈ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ.
ಕಾರಾಗೃಹದಿಂದ ಬಿಡುಗಡೆಯಾದ ಬಳಿಕ ನಟಿ ಕಸ್ತೂರಿ ‘ನನ್ನನ್ನು ಕೆರಳಿದ ಬಿರುಗಾಳಿಯನ್ನಾಗಿ ಮಾಡಿದ ಎಲ್ಲರಿಗೂ ಧನ್ಯವಾದ ಎಂದರು.
ಕೆಲವರನ್ನು ಪರೋಕ್ಷವಾಗಿ ಉಲ್ಲೇಖಿಸಿ, ‘ಅಂತಿಮವಾಗಿ ದೂರಿನ ಆಧಾರದ ಮೇಲೆ ಪೋಲೀಸ್ ಪ್ರಕರಣ ನನ್ನ ಜೈಲುವಾಸಕ್ಕೆ ಕಾರಣವಾಯಿತು. ನನ್ನದು ಸಣ್ಣ ದನಿ ಆದರೆ ಈಗ ಉಗ್ರ ಚಂಡಮಾರುತ’ವಾಗಿ ಮಾರ್ಪಾಡಾಗಿದೆ’ ಎಂದರು.
ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನರು ನನ್ನ ಸ್ನೇಹಿತರು, ಕೆಲವು ರಾಜಕೀಯ ನಾಯಕರು, ಕಾನೂನು ತಂಡ ಮತ್ತು ತಮ್ಮ ಬೆಂಬಲಕ್ಕೆ ಧ್ವನಿ ನೀಡಿದ ಎಲ್ಲರಿಗೂ ಧನ್ಯವಾದ. ಜೈಲಿನಲ್ಲಿ ತನಗೆ ಉತ್ತಮವಾಗಿ ನೋಡಿಕೊಳ್ಳಲಾಗಿದೆ ಎಂದು ಹೇಳಿದರು.
ಜಾಮೀನು ಷರತ್ತುಗಳ ಪ್ರಕಾರ ನಟಿ ಪ್ರತಿದಿನ ಎಗ್ಮೋರ್ ಪೊಲೀಸ್ ಠಾಣೆಗೆ ಹಾಜರಾಗಬೇಕಾಗಿದೆ.