Advertisement

ಭಾರಿ ಮಳೆಗೆ ಮರದ ಬಳಿ ನಿಂತಿದ್ದವರಿಗೆ ಬಡಿದ ಸಿಡಿಲು… ಓರ್ವ ಮೃತ್ಯು, ಇನ್ನೋರ್ವನಿಗೆ ಗಾಯ

08:58 PM Jun 06, 2024 | Team Udayavani |

ಗದಗ: ನರಗುಂದ ತಾಲೂಕಿನಾದ್ಯಂತ ಗುರುವಾರ ಗುಡುಗು ಸಿಡಿಲು, ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು ಪರಿಣಾಮ ಸಿಡಿಲು ಬಡಿದು ಓರ್ವ ಬಾಲಕ ಮೃತಪಟ್ಟು ಇನ್ನೋರ್ವ ಗಾಯಗೊಂಡಿರುವ ಘಟನೆ ನರಗುಂದ ತಾಲೂಕಿನ ಬಂಡೆಮ್ಮ ನಗರ ಗ್ರಾಮದ ಬಳಿ ನಡೆದಿದೆ.

Advertisement

ಮೃತ ಬಾಲಕನನ್ನು ಯಲ್ಲಪ್ಪ ಕಿಲೀಕೈ (17) ಎನ್ನಲಾಗಿದ್ದು, ಪರಸಪ್ಪ ಕಿಲೀಕೈ (15) ಗಾಯಗೊಂಡಿದ್ದು ಆತನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಯಲ್ಲಪ್ಪ ಮತ್ತು ಪರಸಪ್ಪ ಮಳೆ ಬರುವ ಸಮಯದಲ್ಲಿ ಕುರಿ ಮೇಯಿಸಲು ಹೋಗಿದ್ದರು ಎನ್ನಲಾಗಿದೆ ಈ ವೇಳೆ ಮಳೆಯಿಂದ ರಕ್ಷಣೆ ಪಡೆಯಲು ಮರದ ಬಳಿ ಹೋಗಿ ನಿಂತಿದ್ದಾರೆ ಈ ವೇಳೆ ಸಿಡಿಲು ಬಡಿದಿದೆ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟರೆ ಇನ್ನೋರ್ವ ಗಾಯಗೊಂಡಿದ್ದಾನೆ.

ಮೃತರು ನರಗುಂದ ಪಟ್ಟಣದ ಗುಡ್ಡದಕೇರಿ ಬಡಾವಣೆಯ ನಿವಾಸಿಗಳು ಎಂದು ಹೇಳಲಾಗಿದೆ. ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next