Advertisement

Yellapur: ಜಿಂಕೆ ಕೊಂದು‌ ಮಾಂಸ ಸಾಗಾಟ ಮಾಡುತ್ತಿದ್ದ ಹಲವರ ಬಂಧನ

09:23 AM Jun 02, 2024 | Team Udayavani |

ಯಲ್ಲಾಪುರ: ಜಿಂಕೆ ಕೊಂದು‌ ಮಾಂಸ ಸಾಗಾಟ ಮಾಡಿದ ಆರೋಪದ ಮೇಲೆ ಅರಣ್ಯ ಇಲಾಖೆ ಹಲವರನ್ನು ಶನಿವಾರ ದಸ್ತಗಿರಿ ಮಾಡಿದೆ.

Advertisement

ಯಲ್ಲಾಪುರ ತಾಲೂಕಿನ ಚಂದ್ಗುಳಿ ಪಂಚಾಯತ್ ವ್ಯಾಪ್ತಿಯ ದನಕಲಜಡ್ಡಿಯ ಸತೀಶ ಪರಮೆಶ್ವರ ನಾಯ್ಕ್ ಎಂಬಾತನ‌ ಮನೆಯಲ್ಲಿ ತಪಾಸಣೆ ಮಾಡಿದಾಗ ಜಿಂಕೆ ಮಾಂಸ ಮತ್ತು ಅನಧಿಕೃತ ಬಂದೂಕು ಪತ್ತೆಯಾಗಿದೆ.

ವಿಚಾರಣೆಗೊಳಪಡಿಸಿದಾಗ ಯಲ್ಲಾಪುರ ಪಟ್ಡಣದ ರುಸ್ತುಂ ಪಟೇಲ್ ಸಾಬ್ ಭೇಫಾರಿ ಈತ ಇನ್ನಿತರರನ್ನೊಳಗೊಂಡು ಪ್ರಾಣಿಯನ್ನು ಭೇಟೆಯಾಡಿ ವೃತ್ತಿಯಾಗಿಸಿಕೊಂಡಿರುವುದು ತನಿಖೆ ವೇಳೆ ವ್ಯಕ್ತವಾಗಿದೆ.

ಈತನೊಂದಿಗೆ ಸತೀಶ ಪರಮೇಶ್ವರ ನಾಯ್ಕ, ದನಕಲಜಡ್ಡಿ, ಶಬ್ಬೀರ್ ರುಸ್ತುಂ ಸಾಬ್, ಕಾಳಮ್ಮನಗರ, ಮಹಮ್ಮದ ರಫೀಕ್, ಇಮಾಮಸಾಬ್, ಕಾಳಮ್ಮನಗರದ ಮಹಮ್ಮದ ಶಫಿ, ಖಾದರಸಾಬ್ ಶೇಖ್, ಖರೀಂ ಖಾದರ್ಸಾಬ್ ಶೇಖ್, ಕಾಳಮ್ಮನಗರ ಇವರನ್ನು ಬಂಧಿಸಿದ್ದಾರೆ.

ರಸ್ತುಂ ಎಂಬಾತ ಮತ್ತು ಈತನ ಸಹಚರರು ಇದನ್ನು ಒಂದು ದಂಧೆಯಾಗಿ ಮಾಡಿಕೊಂಡಿದ್ದರೆಂಬ ಮಾಹಿತಿ ತನಿಖೆ ವೇಳೆ ವ್ಯಕ್ತವಾಗಿದೆ.

Advertisement

ಪ್ರಶಾಂತ ಮಂಜುನಾಥ ನಾಯ್ಕ ಎಂಬ ಆರೋಪಿ ಪರಾರಿಯಾಗಿದ್ದಾನೆ. ಆರೋಪಿತರಿಂದ ಬಂದೂಕು, ಬೇಯಿಸಿದ ಜಿಂಕೆ ಮಾಂಸ, ಸಾಗಾಟಕ್ಕೆ ಬಳಸಿದ 2 ಇಂಡಿಕಾ ಕಾರು, ವಶಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next