Advertisement

ಉಡುಪಿ: ಮಣ್ಣಿನಲ್ಲಿ ಅಧಿಕ ಆಮ್ಲೀಯತೆ- ಫ‌ಸಲು ಪ್ರಮಾಣ ಕುಂಠಿತ

06:09 PM Jun 11, 2024 | Team Udayavani |

ಉಡುಪಿ: ಕಳೆದ ಬಾರಿ ಸುರಿದ ಅತಿಯಾದ ಮಳೆ ಸಹಿತ ವಿವಿಧ ಕಾರಣಗಳಿಂದ ಜಿಲ್ಲೆಯಲ್ಲಿ ಮಣ್ಣಿನ ಆಮ್ಲೀಯತೆ ಪ್ರಮಾಣ
ಹೆಚ್ಚಳವಾಗಿದ್ದು, ಪರಿಣಾಮ ಬೆಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಫ‌ಸಲು ನೀಡುತ್ತಿಲ್ಲ. ಮಣ್ಣಿನಲ್ಲಿ ಆಮ್ಲೀಯತೆ ಪ್ರಮಾಣವಿರುವ ಕಾರಣ ಜಿಲ್ಲೆಯ ರೈತರು ತಮ್ಮ ಹೊಲಗಳಲ್ಲಿನ ಮಣ್ಣಿಗೆ ಕೃಷಿ ಸುಣ್ಣ ಹಾಕುವಂತೆ ಮಣ್ಣು ಆರೋಗ್ಯ ತಜ್ಞರು ಸೂಚನೆ ನೀಡಿದ್ದಾರೆ. ಆದಿಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಣ್ಣು ಆರೋಗ್ಯ ಕೇಂದ್ರದಲ್ಲಿ ಮಾ.23ಕ್ಕೆ
ಜಿಲ್ಲೆಯ ಎಲ್ಲ ತಾಲೂಕುಗಳಿಂದಲೂ 4,500 ಮಾದರಿಗಳ ಪರೀಕ್ಷೆಯನ್ನು ಪೂರ್ಣಗೊಳಿಸಲಾಗಿತ್ತು. ಈ ಎಲ್ಲ
ಪರೀಕ್ಷೆಗಳಲ್ಲಿ ಆಮ್ಲೀಯತೆ ಪ್ರಮಾಣ ಹೆಚ್ಚಳವಾಗಿರುವ ಅಂಶ ಬೆಳಕಿಗೆ ಬಂದಿದೆ.

Advertisement

ಕಾರಣವೇನು?
ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿ ಭಾರೀ ಮಳೆಯಾಗುವುದರಿಂದ ಇಲ್ಲಿನ ಮಣ್ಣು ಆಮ್ಲೀಯ ವಾಗಿರುತ್ತದೆ. ಇದರಿಂದ ಬೆಳೆ ಉತ್ಪಾದನೆ ಕುಂಠಿತಗೊಳ್ಳುತ್ತದೆ. ಈ ಕಾರಣಕ್ಕೆ ಮಣ್ಣೆಗೆ ಕೃಷಿ ಸುಣ್ಣ ಬಳಕೆ ಮಾಡುವುದು ಅನಿವಾರ್ಯವಾಗಿದೆ.

ಏನು ಮಾಡಬಹುದು?
ಜೂನ್‌ ಮತ್ತು ಜುಲೈನಲ್ಲಿ ನಿರೀಕ್ಷಿತ ಮಳೆ ಕಡಿಮೆಯಾದ ಅನಂತರ ರೈತರು ಪ್ರತೀ ಎಕರೆ ಕೃಷಿ ಭೂಮಿಗೆ ಸುಮಾರು 2 ಕ್ವಿಂಟಾಲ್‌ ಕೃಷಿ ಸುಣ್ಣವನ್ನು ಅನ್ವಯಿಸಬೇಕು. ಅತಿವೃಷ್ಟಿ ಕಡಿಮೆಯಾದ ಅನಂತರ ರೈತರು ಸುಮಾರು 2-3 ವರ್ಷಗಳ ಕಾಲ ಈ ಪದ್ಧತಿಯನ್ನು ಮುಂದುವರಿಸಬೇಕು. ಅನಂತರ ಹೊಲದಿಂದ ತೆಗೆದ ಮಣ್ಣಿನ ಮಾದರಿಗಳನ್ನು ಅದರ ಪಿಎಚ್‌ ಮೌಲ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿದೆಯೇ ಎಂದು ತಿಳಿಯಲು ಪರೀಕ್ಷಿಸಬೇಕು. ಈ ವೇಳೆ ಇದು ಇನ್ನೂ ಆಮ್ಲಿಯವಾಗಿರುವುದು ಕಂಡುಬಂದರೆ ಎರಡು ವರ್ಷಗಳ ಕಾಲ ಕೃಷಿ ಸುಣ್ಣ ಅನ್ವಯಿಸುವುದನ್ನು ಮುಂದುವರಿಸಬೇಕು.

ರೈತ ಕೇಂದ್ರಗಳಲ್ಲಿ ಲಭ್ಯ
ಜಿಲ್ಲಾದ್ಯಂತ ಇರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಸುಣ್ಣ ಲಭ್ಯವಿದೆ. ರೈತರು ರಿಯಾಯಿತಿ ದರದಲ್ಲಿ ಖರೀದಿಸಬಹುದು. ಈ ಮೂಲಕ ಮಣ್ಣಿನ ಫ‌ಲವತ್ತತೆಯನ್ನು ಹೆಚ್ಚಿಸುವ ಜತೆಗೆ ಮಣ್ಣಿನ ಆಮ್ಲೀಯತೆ ಯನ್ನೂ ವೃದ್ಧಿಸಬೇಕು. ಇದರಿಂದ ರೈತರು ನಿರೀಕ್ಷಿತ ಪ್ರಮಾಣದಲ್ಲಿ ಫ‌ಸಲು ಹೊಂದಿಸಿ ಕೊಳ್ಳಲು ಸಾಧ್ಯವಿದೆ ಎನ್ನುತ್ತಾರೆ ಮಣ್ಣಿನ ಆರೋಗ್ಯ ಪರಿಣತರಾದ ಅನಂತ ಪ್ರಭು.

ಪ್ರಮಾಣ ಎಷ್ಟಿದೆ?
ಪರೀಕ್ಷೆಗೊಳಪಡಿಸಿದ ಮಣ್ಣಿನ ಮಾದರಿಗಳಲ್ಲಿ ಶೇ.96.61 ರಷ್ಟು ಪೊಟೆನ್ಶಿಯಲ್‌ ಆಫ್ ಹೈಡ್ರೋಜನ್‌(ಪಿಎಚ್‌) ಮಟ್ಟವು ಆಮ್ಲೀಯವಾಗಿದೆ ಎಂದು ತೋರಿಸಿದೆ. ಪರೀಕ್ಷಿಸಿದ ಮಾದರಿಗಳಲ್ಲಿ ಪಿಎಚ್‌ ಮಟ್ಟವು 3.38ರಷ್ಟಿದೆ. ಮಣ್ಣಿನ ಪಿಎಚ್‌ ಮಟ್ಟವು
6.5ಕ್ಕಿಂತ ಕಡಿಮೆಯಿದ್ದರೆ ಅದನ್ನು ಆಮ್ಲಿಯ ಎಂದು ಕರೆಯಲಾಗುತ್ತದೆ. 6.5ರಿಂದ 7.5ರ ನಡುವೆ ಇದ್ದರೆ ಅದು ತಟಸ್ಥ ಮಣ್ಣು. 6.5 ಮತ್ತು 7.5ರ ನಡುವೆ ಇದ್ದರೆ ಕ್ಷಾರೀಯ ಮಣ್ಣು ಎಂದುಪರಿಗಣಿಸಲಾಗುತ್ತದೆ. ಇದು ಉತ್ತರ ಕನ್ನಡ ಭಾಗದಲ್ಲಷೇ ಕಾಣಸಿಗುತ್ತದೆ ಎನ್ನುತ್ತಾರೆ ತಜ್ಞರು.

Advertisement

ಮಣ್ಣು ತಪಾಸಣೆ ಅಗತ್ಯ
ಬೆಳೆ ಪ್ರಮಾಣ ಕುಸಿತ ಉಂಟಾಗಲು ಮಣ್ಣಿನಲ್ಲಿ ಉಂಟಾಗುವ ಆಮ್ಲೀಯತೆಯೂ ಒಂದು ಕಾರಣವಾಗಿದೆ. ನಿಯಮಿತವಾಗಿ ಮಣ್ಣು ತಪಾಸಣೆ ಮಾಡುವ ಮೂಲಕ ಇದನ್ನು ತಿಳಿದುಕೊಳ್ಳಬಹುದು. ಮಣ್ಣಿಗೆ ಕೃಷಿ ಸುಣ್ಣ ಬಳಕೆ ಮಾಡು ವುದರಿಂದ ಫ‌ಲವತ್ತತೆಯನ್ನು ಹತೋಟಿಗೆ ತರಬಹುದು.
*ಶಿವಪ್ರಸಾದ್‌,
ಜಂಟಿ ನಿರ್ದೇಶಕರು, ಕೃಷಿ ಇಲಾಖೆ

*ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next