Advertisement

ಬ್ಯಾಟಿಂಗಿಗಾಗಿ ರೋಹಿತ್‌ ನಾಯಕತ್ವ ತ್ಯಜಿಸಲಿ: ಅಮೂಲ್ಯ ಸಲಹೆ ನೀಡಿದ ಮಾಂಜ್ರೇಕರ್

03:58 PM Apr 14, 2022 | Team Udayavani |

ಮುಂಬೈ: ತಮ್ಮ ಬ್ಯಾಟಿಂಗ್‌ ಮೇಲೆ ಸಂಪೂರ್ಣ ಗಮನ ಹರಿಸುವ ನಿಟ್ಟಿನಲ್ಲಿ ರೋಹಿತ್‌ ಶರ್ಮ ಅವರು ವಿರಾಟ್‌ ಕೊಹ್ಲಿ ಅವರಂತೆ ನಾಯಕತ್ವದ ಹೊಣೆಯನ್ನು ಬೇರೆಯವರಿಗೆ ಬಿಟ್ಟುಕೊಡುವುದು ಅತ್ಯಂತ ಸೂಕ್ತ ಎಂದು ಮಾಜಿ ಕ್ರಿಕೆಟಿಗೆ ಸಂಜಯ್‌ ಮಾಂಜ್ರೇಕರ್‌ ಹೇಳಿದ್ದಾರೆ.

Advertisement

ರೋಹಿತ್‌ ಅವರು ಬ್ಯಾಟ್ಸ್‌ಮನ್‌ ಆಗಿ ಕಳೆದ ಕೆಲವು ಐಪಿಎಲ್‌ ಋತುಗಳಲ್ಲಿ ಬಹಳಷ್ಟು ಒದ್ದಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಅವರು ನಾಯಕತ್ವದ ಜವಾಬ್ದಾರಿಯನ್ನು ಕೈರನ್‌ ಪೊಲಾರ್ಡ್‌ ಅವರಿಗೆ ಹಸ್ತಾಂತರಿಸುವುದು ಒಳ್ಳೆಯದು ಎಂದವರು ಅಭಿಪ್ರಾಯಪಟ್ಟಿದ್ದಾರೆ.

ತಂಡದ ಬ್ಯಾಟಿಂಗ್‌ ಕ್ರಮಾಂಕಕ್ಕೆ ಪೊಲಾರ್ಡ್‌ ಹೆಚ್ಚಿನ ಮೌಲ್ಯ ದೊರಕಿಸಿ ಕೊಡಲಿದ್ದಾರೆ. ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದ್ದರೂ ಪೊಲಾರ್ಡ್‌ ಅವರಲ್ಲಿ ನಾಯಕತ್ವದ ಗುಣಗಳಿವೆ ಎಂದವರು ತಿಳಿಸಿದರು.

ಇದನ್ನೂ ಓದಿ:ಕೆಜಿಎಫ್ 2 ವಿಮರ್ಶೆ: ವಿಲನ್ ಗಳ ಬಿರುಗಾಳಿ ಎದುರು ನಿಂತ ರಾಕಿ ಸುಲ್ತಾನನೆಂಬ ಚಂಡಮಾರುತ

ಪೊಲಾರ್ಡ್‌ ಆಡಿದ ನಾಲ್ಕು ಪಂದ್ಯಗಳಿಂದ ಕೇವಲ 47 ರನ್‌ ಗಳಿಸಿರಬಹುದು. ಆದರೆ ಅವರು ತಮ್ಮ ನೈಜ ಫಾರ್ಮ್ ಗೆ ಮರಳಲು ಕೇವಲ ಒಂದು ಉತ್ತಮ ಪಂದ್ಯದ ಅಗತ್ಯವಿದೆ ಎಂದರು ಮಾಂಜ್ರೇಕರ್‌. ಪೊಲಾರ್ಡ್‌ ಅವರಲ್ಲಿ ಇನ್ನೂ ಬ್ಯಾಟಿಂಗ್‌ ಕೌಶಲವಿದೆ. ಕೊಹ್ಲಿ ಅವರಂತೆ ರೋಹಿತ್‌ ನಾಯಕತ್ವ ಬಿಡುವುದು ಉತ್ತಮ. ಈ ಮೂಲಕ ಅವರು ಆರಾಮವಾಗಿ ಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶನ ನೀಡಲು ಪ್ರಯತ್ನಿಸಬಹುದು ಎಂದವರು ತಿಳಿಸಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next