Advertisement

ಸತತ 2ನೇ ದಿನವೂ ವಾದ್ರಾ ವಿಚಾರಣೆ

12:30 AM Feb 08, 2019 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ಹೃದಯ ಭಾಗದ ಜಾಮ್‌ ನಗರ್‌ ಕಟ್ಟಡದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಗುರುವಾರ ಇಬ್ಬರು ಗಣ್ಯ ವ್ಯಕ್ತಿಗಳ ವಿಚಾರಣೆ ನಡೆಯಿತು. ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರ ಪತಿ ರಾಬರ್ಟ್‌ ವಾದ್ರಾ ಹಾಗೂ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ವಿಚಾರಣೆಯೂ ನಡೆಯಿತು.
 
ಬುಧವಾರ ವಾದ್ರಾರನ್ನು ಐದೂವರೆ ಗಂಟೆ ವಿಚಾರಣೆ ನಡೆಸಿದ್ದ ಅಧಿಕಾರಿಗಳು, ಗುರುವಾರ ಪುನಃ ವಿಚಾರಣೆಗೊಳಪಡಿಸಿದರು. ವಾದ್ರಾ ಲಂಡನ್‌ನಲ್ಲಿ 2005ರಿಂದ 2010ರ ನಡುವೆ ಖರೀದಿಸಿರುವ ಅಂದಾಜು 110 ಕೋಟಿ ರೂ. ಮೌಲ್ಯದ ವಿವಿಧ ಸ್ಥಿರಾಸ್ತಿಗಳ ಬಗ್ಗೆ ಪ್ರಶ್ನಿಸಲಾಯಿತು. ಅದರಲ್ಲೂ, ಲಂಡನ್‌ನ ಬ್ರ್ಯಾನ್‌ಸ್ಟನ್‌ ಸ್ಕ್ವೇರ್‌ನಲ್ಲಿ 2009ರಲ್ಲಿ 17.77 ಕೋಟಿ ರೂ. ಮೊತ್ತಕ್ಕೆ ಕೊಂಡಿದ್ದ ಬಂಗಲೆಯನ್ನು 60.85 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳಿಸಿ, ಯಾವುದೇ ಲಾಭವಿಲ್ಲದೆ ಕೊಂಡಿದ್ದ ಬೆಲೆಗೇ 2010ರಲ್ಲಿ ಮಾರಾಟ ಮಾಡಿರುವುದರ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಜತೆಗೆ, ಬಂದೂಕು ಬಿಡಿಭಾಗಗಳ ಮಾರಾಟಗಾರ ಸಂಜಯ್‌ ಭಂಡಾರಿ ಹಾಗೂ ಇತರ ಇಬ್ಬರ ನಡುವೆ ವಾದ್ರಾ ಹೊಂದಿರುವ ವ್ಯವಹಾರಗಳ ಬಗ್ಗೆಯೂ ಪ್ರಶ್ನಿಸಲಾಯಿತು. 

Advertisement

ಮತ್ತೂಂದೆಡೆ, ಐಎನ್‌ಎಸ್‌ ಮೀಡಿಯಾ ಹಗರಣಕ್ಕೆ ಸಂಬಂಧಿಸಿ, ಕಾರ್ತಿ ಚಿದಂಬರಂ ಗುರುವಾರ ಇ.ಡಿ. ಮುಂದೆ ವಿಚಾರಣೆಗೆ ಹಾಜರಾದರು. 

Advertisement

Udayavani is now on Telegram. Click here to join our channel and stay updated with the latest news.

Next