Advertisement

Delhi ಗನ್ ಪಾಯಿಂಟ್ ನಲ್ಲಿ ದರೋಡೆ; ಎಲ್-ಜಿ ವಿರುದ್ಧ ಸಿಎಂ ಕೇಜ್ರಿವಾಲ್ ವಾಗ್ದಾಳಿ

10:00 PM Jun 26, 2023 | Team Udayavani |

ಹೊಸದಿಲ್ಲಿ: ಜೂನ್ 24 ರಂದು ನಡೆದ ಆಘಾತಕಾರಿ ಘಟನೆಯಲ್ಲಿ, ಪ್ರಗತಿ ಮೈದಾನದ ಸುರಂಗದೊಳಗೆ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಪಿಸ್ತೂಲು ತೋರಿಸಿ ಡೆಲಿವರಿ ಏಜೆಂಟ್ ಮತ್ತು ಅವರ ಸಹಚರನನ್ನು ಬೆದರಿಸಿ ಅಂದಾಜು 1.5 ರಿಂದ 2 ಲಕ್ಷ ರೂಪಾಯಿ ನಗದು ದೋಚಿರುವ ಘಟನೆ ನಡೆದಿದೆ. ದೆಹಲಿ ಪೊಲೀಸರು ಕ್ಷಿಪ್ರವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

ಪೊಲೀಸ್ ವರದಿಗಳ ಪ್ರಕಾರ, ಸಂತ್ರಸ್ತರು ಹಣವನ್ನು ತಲುಪಿಸಲು ಕ್ಯಾಬ್‌ನಲ್ಲಿ ಗುರುಗ್ರಾಮ್‌ಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. 1.5 ಕಿಮೀ ವ್ಯಾಪಿಸಿರುವ ಪ್ರಗತಿ ಮೈದಾನದ ಸುರಂಗ ಮಾರ್ಗವು ನವದೆಹಲಿಯನ್ನು ಸರೈ ಕಾಲೇ ಖಾನ್ ಮತ್ತು ನೋಯ್ಡಾದೊಂದಿಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಡೆಯುತ್ತಿರುವ ತನಿಖೆಗೆ ನಿರ್ಣಾಯಕ ಸಾಕ್ಷ್ಯವಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಮಾತ್ರವಲ್ಲದೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ರಾಜೀನಾಮೆ ನೀಡಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ. ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿ, ರಾಜಧಾನಿಯ ಜನರಿಗೆ ಸುರಕ್ಷತೆ ಒದಗಿಸಿ, ಸಾಧ್ಯವಾಗದಿದ್ದ ಮೇಲೆ ಅಧಿಕಾರ ಯಾಕೆ, ನಮಗೆ ಬಿಟ್ಟುಕೊಡಿ ಎಂದು ಗುಡುಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next