ಬೆಂಗಳೂರು: ಅಸ್ಸಾಂನಿಂದ ಕೆಲಸಕ್ಕಾಗಿ ನಗರಕ್ಕೆ ಬಂದಿದ್ದ ನಾಲ್ವರು ಯುವಕರಿಗೆ ಚೂರಿ ತೋರಿಸಿ ಹಣ ವಸೂಲು ಮಾಡಿದ್ದ ಇಬ್ಬರು ಆಟೋ ಚಾಲಕರನ್ನು ಬೈಯ್ಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಣಸವಾಡಿಯ ರೂಬಿನ್ (48), ಯುವರಾಜ್ (39) ಬಂಧಿತರು. ಮಾ.2 ರಂದು ಅಸ್ಸಾಂನಿಂದ ಸರ್ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ ಅಸ್ಸಾಂ ರಾಜ್ಯದ ಮಿಂಟು ಬರಾಹಾ, ಟುಲ್ ಟುಲ್ ಗೋಗೋಯ್, ಮುನಕನ್ ಬೊರುಗೊಹೈನ್, ಗನ್ ಬೊರುಗೊಹೈನ್ ಬಂದಿ ದ್ದರು. ಮಾಗಡಿ ರೋಡ್ ಸಮೀಪದ ಸುಮನಹಳ್ಳಿಗೆ ಹೋಗಲು ರೈಲು ನಿಲ್ದಾಣದ ಹತ್ತಿರ ಆಟೋಗಾಗಿ ಕಾಯುತ್ತಿದ್ದರು.
ಆ ವೇಳೆ ಆರೋಪಿ ರೂಬಿನ್ 600 ರೂ. ಬಾಡಿಗೆಗೆ ಮಾತ ನಾಡಿ ಕೊಂಡು ನಾಲ್ವರನ್ನೂ ಆಟೋದಲ್ಲಿ ಕೂರಿಸಿ ಕರೆದುಕೊಂಡು ಹೋಗಿದ್ದ. ಸ್ವಲ್ಪ ದೂರ ಹೋಗುತ್ತಿದ್ದಂತೆ ಪ್ರತಿಯೊಬ್ಬರೂ ತಲಾ 600 ರೂ. ಬಾಡಿಗೆ ನೀಡಬೇಕೆಂದು ಹೇಳಿದ್ದ. ಇದಕ್ಕೆ ಹುಡುಗರು ಹಣ ನೀಡಲು ಆಗುವುದಿಲ್ಲವೆಂದು ಹೇಳಿ ಆಟೋದಿಂದ ಇಳಿದಿದ್ದರು. ಅಲ್ಲೇ ಇದ್ದ ಮತ್ತೂಬ್ಬ ಆರೋಪಿ ಯುವರಾಜ್ ದೂರುದಾರ ಹುಡುಗರಿಗೆ ಸಮಾಧಾನ ಮಾಡಿದ್ದ.
ನಂತರ ಇಬ್ಬರು ಆರೋಪಿ ಗಳೂ ಆ ಹುಡುಗರಿಂದ ಹೆಚ್ಚಿನ ಹಣ ವಸೂಲಿ ಮಾಡುವ ಸಂಚು ರೂಪಿಸಿಕೊಂಡು ಅವರನ್ನು ಆಟೋದಲ್ಲಿ ಕೂರಿಸಿಕೊಂಡು ಹೋಗಿದ್ದರು. ಚಿಕ್ಕಬಾಣಸವಾಡಿ ಹತ್ತಿರ ಆಟೋ ನಿಲ್ಲಿಸಿ ಈ ಹುಡುಗರುಗಳನ್ನು ಒತ್ತಾಯ ಪೂರ್ವಕವಾಗಿ ರೈಲ್ವೆ ಟ್ರಾಫಿಕ್‌ನ ಹತ್ತಿರ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ಹೆದರಿಸಿ ಹಣ ಕೊಡುವಂತೆ ಬೆದರಿಸಿ ದ್ದರು. ನಾಲ್ವರ ಪೈಕಿ ಒಬ್ಬನಿಂದ 500 ರೂ. ಕಸಿದುಕೊಂಡಿದ್ದರು.
ಬಳಿಕ ರೂಬಿನ್ ಆಟೋದಲ್ಲಿದ್ದ ಚೂರಿ ತೆಗೆದು ಬೆದರಿಸಿ 3,300 ರೂ. ಅನ್ನು ಫೋನ್ ಪೇ ಮಾಡಿಸಿಕೊಂಡಿದ್ದ. ಬಳಿಕ ಆ ಹುಡು ಗರು ಹೆದರಿಕೊಂಡು ಅಲ್ಲಿಂದ ಓಡಿ ಹೋಗಿದ್ದರು. ಬಳಿಕ ತಾವು ಕೆಲಸ ಮಾಡುತ್ತಿದ್ದ ಐಸ್ ಫ್ಯಾಕ್ಟರಿಯ ಮಾಲೀಕರಿಗೆ ಈ ಬಗ್ಗೆ ಮಾಹಿತಿ ನೀಡಿ ದ್ದರು. ಮಾಲೀಕರಾದ ಎಂ.ಗುಣ ಶೇಖರ್ ಈ ಕುರಿತು ಬೈಯ್ಯಪ್ಪನಹಳ್ಳಿ ರೈಲ್ವೆ ಠಾಣೆಗೆ ದೂರು ನೀಡಿದ್ದರು.