Advertisement

ಡೊಂಬಿವಲಿ, ಕಲ್ಯಾಣ್‌: ರಸ್ತೆ ಬದಿ ಅಂಗಡಿ ತೆರೆಯಲು ಅವಕಾಶ

11:47 AM Aug 23, 2020 | Suhan S |

ಥಾಣೆ, ಆ. 20: ಮಾಲ್‌ಗ‌ಳು, ಜಿಮ್‌ ಮತ್ತು ಈಜುಕೊಳಗಳನ್ನು ಹೊರತುಪಡಿಸಿ ಕೋವಿಡ್‌ ಹಾಟ್‌ಸ್ಪಾಟ್‌ ಗಳ ಹೊರಗಿನ ವಾಣಿಜ್ಯ ಸಂಸ್ಥೆಗಳಿಗೆ ಕಾರ್ಯನಿರ್ವಹಿಸಲು ಸ್ಥಳೀಯ ನಾಗರಿಕ ಸಂಸ್ಥೆ ಅವಕಾಶವನ್ನು ನೀಡಿದೆ. ಇಲ್ಲಿನ ಈ ಹಿನ್ನೆಲೆ ಕಲ್ಯಾಣ್‌ ಮತ್ತು ಡೊಂಬಿವಲಿ ಪಟ್ಟಣಗಳಲ್ಲಿ ಬುಧವಾರದಿಂದ ರಸ್ತೆಯ ಎರಡೂ ಬದಿಗಳಲ್ಲಿ ಅಂಗಡಿಗಳು ತೆರೆಯಲ್ಪಟ್ಟಿವೆ.

Advertisement

ಕಲ್ಯಾಣ್‌ ಡೊಂಬಿವಲಿ ಮಹಾನಗರ ಪಾಲಿಕೆಯು (ಕೆಡಿಎಂಸಿ) ಪ್ರದೇಶದಲ್ಲಿ ಅಂಗಡಿಗಳನ್ನು ತೆರೆದಿಡುವ ಸಮಯವನ್ನು ಕೂಡ ವಿಸ್ತರಿಸಿದೆ. ಈ ಮೊದಲು ರಸ್ತೆಯ ಎರಡು ಬದಿಗಳಲ್ಲಿನ ಅಂಗಡಿಗಳನ್ನು ಪರ್ಯಾಯ ದಿನಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ತೆರೆದಿಡಲು ಅವಕಾಶವಿತ್ತು. ಕೆಡಿಎಂಸಿ ಆಯುಕ್ತ ವಿಜಯ್‌ ಸೂರ್ಯವಂಶಿ ಅವರು ಮಂಗಳವಾರ ಸಂಜೆ ಹೊರಡಿಸಿದ ಆದೇಶದಲ್ಲಿ ಮಾಲ್‌ಗ‌ಳು, ಮಾರುಕಟ್ಟೆ ಸಂಕೀರ್ಣಗಳು, ತರಕಾರಿ ಮಾರುಕಟ್ಟೆಗಳು, ಜಿಮ್‌ಗಳು ಮತ್ತು ಈಜುಕೊಳಗಳನ್ನು ಹೊರತುಪಡಿಸಿ ಕೋವಿಡ್‌ ಹಾಟ್‌ಸ್ಪಾಟ್‌ಗಳ ಹೊರಗಿನ ಎಲ್ಲ ಅಂಗಡಿಗಳನ್ನು ಎಲ್ಲ ದಿನಗಳಲ್ಲಿ ತೆರೆಯಲು ಅವಕಾಶ ಮಾಡಿಕೊಟ್ಟಿದ್ದು, ಅವುಗಳ ಸಮಯವನ್ನು ವಿಸ್ತರಿಸಿದ್ದಾರೆ.

ಕೋವಿಡ್ ಹರಡುವುದನ್ನು ತಡೆಗಟ್ಟಲು ನಿಗದಿಪಡಿಸಿದ ಪೋಟೋಕಾಲ್ ಗಳನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕು. ಮಾರ್ಗ ಸೂಚಿಗಳನ್ನು ಉಲ್ಲಂಘಿಸುವ ವ್ಯಾಪಾರ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕಾಲಕಾಲಕ್ಕೆ ಘೋಷಿಸಲಾಗುವ ನಿರ್ಬಂಧಗಳನ್ನು ಅನುಸರಿಸಲು ಕೋವಿಡ್‌ ಹಾಟ್‌ಸ್ಪಾಟ್‌ಗಳಾಗಿ ಗೊತ್ತುಪಡಿಸಿದ ಪ್ರದೇಶಗಳು ಅಗತ್ಯವಾಗಿರುತ್ತವೆ ಎಂದು ಕೆಡಿಎಂಸಿ ವಕ್ತಾರೆ ಮಾಧುರಿ ಫೋಪಾಲೆ ಹೇಳಿದ್ದಾರೆ.

ಪ್ರಸ್ತುತ ಪಟ್ಟಣದ ಬೀದಿಗಳಲ್ಲಿ ಜನರು ಮಾಸ್ಕ್ ಧರಿಸಿಕೊಂಡು ಗಣೇಶ ಚತುರ್ಥಿ ಹಿನ್ನೆಲೆ ವಿಗ್ರಹಗಳು, ಅಲಂಕಾರಿಕ ವಸ್ತು ಮತ್ತು ಮಿಠಾಯಿಗಳನ್ನು ಖರೀದಿಸಲು ಅಂಗಡಿಗಳ ಹೊರಗೆ ಸರದಿ ಸಾಲುಗಳಲ್ಲಿ ನಿಂತಿರುವುದು ಕಾಣಲು ಸಿಕ್ಕಿದೆ ಎಂದಿದಾರೆ. ನಿಯಮಗಳನ್ನು ಸಡಿಲಿಸುವ ನಾಗರಿಕ ಸಂಸ್ಥೆಯ ನಿರ್ಧಾರವನ್ನು ಕಲ್ಯಾಣ್‌ ನಿವಾಸಿ ತುಷಾರ್‌ ರಾಜೆ ಅವರು ಸ್ವಾಗತಿಸಿದ್ದು, ನಾಗರಿಕರು ಸೋಂಕು ಹರಡುವುದನ್ನು ತಡೆಗಟ್ಟುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿದ್ದಾರೆ. ನಿರ್ಬಂಧಗಳ ಸರಾಗಗೊಳಿಸುವಿಕೆಯು ಮಾರುಕಟ್ಟೆಗಳಲ್ಲಿ ಜನಸಂದಣಿಗೆ ಕಾರಣವಾಗಬಹುದು ಆದರೆ ವ್ಯವಹಾರಗಳನ್ನು ಬಹಳ ಸಮಯದವರೆಗೆ ಮುಚ್ಚಲು ಸಾಧ್ಯವಿಲ್ಲ ಎಂದು ಡೊಂಬಿವಲಿ ನಿವಾಸಿ ಭಗವಾನ್‌ ಮಾಂಡ್ಲಿಕ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next