Advertisement
ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಸ್ಮಾರ್ಟ್‌ಸಿಟಿ ಯೋಜನೆಗೆ ಗಾಂಧಿನಗರ, ಶಿವಾಜಿನಗರ, ಚಾಮರಾಜಪೇಟೆ ಹಾಗೂ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರಗಳ 16 ವಾರ್ಡ್‌ಗಳನ್ನು ಗುರುತಿಸಲಾಗಿದೆ. ಅದರ ಹೊರತಾಗಿರುವ ಹಲವು ರಸ್ತೆಗಳನ್ನು ಅಭಿವೃದ್ಧಿಪಡಿಸಲು ಪಾಲಿಕೆಯ ಅಧಿಕಾರಿಗಳು ಯೋಜನೆ ರೂಪಿಸಿದ್ದು, ಗಾಂಧಿನಗರ ಹಾಗೂ ಚಾಮರಾಜಪೇಟೆ ವ್ಯಾಪ್ತಿಯ ಆರು ರಸ್ತೆಗಳನ್ನು ಟೆಂಡರ್ ಶ್ಯೂರ್ ಯೋಜನೆಗೆ ಆಯ್ಕೆ ಮಾಡಿಕೊಂಡಿದ್ದಾರೆ.
Related Articles
ನಗರದ ಅತ್ಯಂತ ಪುರಾತನವಾದ ಕೃಷ್ಣರಾಜ ಮಾರುಕಟ್ಟೆಯನ್ನು (ಕೆ.ಆರ್.ಮಾರುಕಟ್ಟೆ) ಮೇಲ್ದರ್ಜೆàರಿಸಲು ಬಿಬಿಎಂಪಿ ವತಿಯಿಂದ ಯೋಜನೆ ರೂಪಿಸಲಾಗಿದೆ. ಅದರಂತೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಮಾರುಕಟ್ಟೆ ಅಭಿವೃದ್ಧಿಗೆ ನಗರಾಭಿವೃದ್ಧಿ ಇಲಾಖೆ ಶೀಘ್ರದಲ್ಲಿಯೇ ಟೆಂಡರ್ ಆಹ್ವಾನಿಸಲಿದೆ. ಸ್ಮಾರ್ಟ್‌ಸಿಟಿ ಯೋಜನೆ ಪ್ರಸ್ತಾವನೆಯಲ್ಲಿ ಪಾರಂಪರಿಕ ಮಾರುಕಟ್ಟೆಯ ಸೌಂದರ್ಯ ಹೆಚ್ಚಿಸುವುದರೊಂದಿಗೆ ಸುಸಜ್ಜಿತ ಮಳಿಗೆಗಳು, ವಾಹನ ನಿಲುಗಡೆ ವ್ಯವಸ್ಥೆಯಂತಹ ಸೌಲಭ್ಯಗಳನ್ನು ಕಲ್ಪಿಸುವ ವಿಚಾರವನ್ನು ಉಲ್ಲೇಖೀಸಲಾಗಿದೆ.
Advertisement
ಯೋಜನೆಗೆ ಆಯ್ಕೆಯಾದ ರಸ್ತೆಗಳು-ರಸ್ತೆ ಉದ್ದ (ಕಿಲೋ ಮೀಟರ್‌ಗಳಲ್ಲಿ)
-ಸುಬೇದಾರ್ ಛತ್ರಂ ರಸ್ತೆ-0.60
-ಗುಬ್ಬಿ ತೋಟದಪ್ಪ ರಸ್ತೆ-1.68
-ಧನ್ವಂತರಿ ರಸ್ತೆ-1.05
-ಡಬ್ಲ್ಯು.ಎಚ್.ಹನುಮಂತಪ್ಪ ರಸ್ತೆ-0.68
-ಗಾಂಧಿನಗರ ಸುತ್ತಮುತ್ತಲಿನ ರಸ್ತೆಗಳು-4.60
-ಕೆ.ಆರ್.ಮಾರುಕಟ್ಟೆ ಬಳಿ ರಸ್ತೆಗಳು-2.00
-ಒಟ್ಟು-10.61 ಬಿಬಿಎಂಪಿ ವತಿಯಿಂದ ಕೇಂದ್ರ ಭಾಗದಲ್ಲಿರುವ ಆರು ರಸ್ತೆಗಳನ್ನು ಟೆಂಡರ್‌ಶ್ಯೂರ್ ಯೋಜನೆಯಡಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಟೆಂಡರ್‌ಅಂತಿಮಗೊಳಿಸಿ ಸರ್ಕಾರದ ಅನುಮೋದನೆಗಾಗಿ ಕಳುಹಿಸಲಾಗಿದೆ. ಸದ್ಯ ಯೋಜನೆ ರೂಪಿಸಿರುವ ಆರು ರಸ್ತೆಗಳು ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಬರುವುದಿಲ್ಲ.
-ಎನ್. ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ