Advertisement
ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು 3-4 ವರ್ಷಗಳೇ ಕಳೇದ್ದಿದು, ಇದೊಂದು ಜ್ವಲಂತ ಸಮಸ್ಯೆಯಾಗಿ ಉಳಿದಿದೆ. ಇದನ್ನು ಸರಿಪಡಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಮೂಕಪ್ರೇಕ್ಷಕರಾಗಿ ಇರುವದರಿಂದ ಸಮಸ್ಯೆಯಾಗಿ ಉಳಿದಿದೆ.
Related Articles
Advertisement
ಕೊಪ್ಪಳ-ಕ್ಯಾದಗುಂಪಿ ಮಾರ್ಗದ ಹಳೆ ರಸ್ತೆ 5ಮಿಮಿ ಇದು. ಈ ರಸ್ತೆಯ 7ಮೀಟರವರಗೆ ಅಗಲಿಕಣ ಮಾಡಬೇಕಾಗಿತ್ತು. ರಸ್ತೆಯ ಎರಡು ಬದಿಗಳಲ್ಲಿ 1ಮೀಟರ ಅಗಲಿಕರಣ ಮಾಡಬೇಕಾದರೆ ರಸ್ತೆ ಪಕ್ಕದಲ್ಲಿ ಇರುವ ಮನೆಗಳನ್ನು ತೆರವು ಮಾಡಬೇಕಾಗಿತ್ತು. ಇದರ ಬಗ್ಗೆ ಗ್ರಾಪಂ, ತಾಪಂ ಇಲಾಖೆಯವರು ಮನೆಗಳ ಮಾಲಿಕರಿಗೆ 2018ರಲ್ಲಿ 2-3 ಬಾರಿ ಸೂಚನೆಯನ್ನು ನೀಡಿದರು ತೆರವು ಕರ‍್ಯಕ್ಕೆ ಮಾಲಿಕರು ಮುಂದಾಗಲಿಲ್ಲ. ಹೀಗಾಗಿ ಕಾಮಗಾರಿಯ ನಿಯಮದ ಪ್ರಕಾರ 7ಮೀಟರವರಗೆ ರಸ್ತೆಯನ್ನು ಅಗಲಿಕರಣ ಆಗಲಿಲ್ಲ.
ಸಾರಿಗೆ ಬಸ್ಸು ಜಖಂ: ಈ ರಸ್ತೆಯ ಮಾರ್ಗವಾಗಿ ಪ್ರತಿನಿತ್ಯ ಸಂಚರಿಸು ಸಾರಿಗೆ ಇಲಾಖೆಯ ಎಷ್ಟೋ ಬಸ್ಸುಗಳು ಈ ಕಂದಕದಿಂದ ಜಖಂಗೊಂಡಿವೆ. ಸಾರಿಗೆ ಬಸ್ಸ್ ಅಲ್ಲದೆ ಖಾಸಗಿ ವಾಹನಗಳು ಈ ರಸ್ತೆಯ ಸಂಚರಿಸಿ ಹಾಳಾಗಿವೆ. ಸಾರಿಗೆ ಬಸ್ಸು ಚಾಲಕರು ಈ ಕಂದಕ ದಿಂದ ಬಸ್ಸ ಜಖಂಗೊಂಡ(ಹಾಳದ) ಕಾರಣ ಇಲಾಖೆಗೆ ದಂಡ ಕಟ್ಟಿದ ಉದಾರಣೆಗಳು ಇವೆ. ಹೀಗಾಗಿ ಈ ಮಾರ್ಗದ ವಾಹನಗಳಿಗೆ ಬಸ್ ಚಾಲಕರಾಗಿ ಬರಲು ಹಲವರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಈ ಮಾರ್ಗ ಬಸ್ಸುಗಳು ಸರಿಯಾದ ಸಮಯಕ್ಕೆ ಬರುತ್ತಲ್ಲ. ಇದರಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದರ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿದರೆ ಮೊದಲು ನಿಮ್ಮ ರಸ್ತೆಯನ್ನು ಸರಿಪಡಿಸಿ ಆಮೇಲೆ ಬಸ್ ಕೇಳಿ ಎಂದು ಹೇಳುತ್ತಿದ್ದಾರೆ.
ರಸ್ತೆ ಅಗಲಿಕರಣ ವೇಳೆ ಕೇಸೂರ-ದೋಟಿಹಾಳ ಗ್ರಾಮಸ್ಥರು ಸಹಕಾರ ನೀಡದೇ ಇರುವದರಿಂದ ಕಾಮಗಾರಿ ಅಪೂರ್ಣಗೊಂಡಿದ್ದೆ. ಹೀಗಾಗಿ ರಸ್ತೆ ಮಧ್ಯ ಕಂದಕ ನಿರ್ಮಾಣವಾಗಿ ಸದ್ಯ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. –ನಾಗರಾಜ ಇಳಗೇರ, ಖಾಸಗಿ ವಾಹನ ಚಾಲಕ
ದೋಟಿಹಾಳ ಗ್ರಾಮದಲ್ಲಿ ರಸ್ತೆ ಅಗಲಿಕರಣ ವೇಳೆ ಗ್ರಾಮಸ್ಥರು ಸಹಕಾರ ನೀಡದ ಕಾರಣ ಕಾಮಗಾರಿ ಪೂರ್ಣಗೊಳದೆ ಇರುವದರಿಂದ ರಸ್ತೆಯ ಕಂದಕ ನಿರ್ಮಾಣವಾಗಿದೆ. ಇದರಿಂದ ನಮ್ಮ ಇಲಾಖೆಯ 6-7 ಬಸ್ಸುಗಳು ಜಖಂಗೊಂಡಿವೆ. ರಸ್ತೆ ಸರಿಪಡಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. –ಸಂತೋಷಕುಮಾರ,ಕೆಎಸ್‌ಆರ್‌ಟಿಸಿ ಕುಷ್ಟಗಿ ಡಿಪೋ ಮ್ಯಾನೇಜರ್
-ಮಲ್ಲಿಕಾರ್ಜುನ ಮೆದಿಕೇರಿ