Advertisement

ಮೋದಿ ರೋಡ್‌ ಶೋಗಾಗಿ ಮರದ ಕೊಂಬೆ ಕಟಾವು

03:29 PM Mar 09, 2023 | Team Udayavani |

ಮಂಡ್ಯ: ಮಾ.12ರಂದು ಪ್ರಧಾನಿ ಮೋದಿ ಜಿಲ್ಲೆಗೆ ಆಗಮಿಸುತ್ತಿದ್ದು, ರೋಡ್‌ ಶೋ ಹಿನ್ನೆಲೆಯಲ್ಲಿ ನಗರದ ಬೆಂಗಳೂರು -ಮೈಸೂರು ಹೆದ್ದಾರಿ ಇಕ್ಕೆಲಗಳಲ್ಲಿದ್ದ ಬೃಹತ್‌ ಮರಗಳ ಕೊಂಬೆಗಳನ್ನು ಅರಣ್ಯ ಇಲಾಖೆ ಕತ್ತರಿಸಿರಿವುದರಿಂದ ಸಾರ್ವಜನಿಕರು ಹಾಗೂ ಪರಿಸರವಾದಿಗಳಿಂದ ಆಕ್ರೋಶ ವ್ಯಕ್ತವಾಗಿದೆ.

Advertisement

ನಗರದ ಪಿಇಟಿ ಕ್ರೀಡಾಂಗಣದ ಹೆಲಿ ಪ್ಯಾಡ್‌ಗೆ ಬಂದಿಳಿಯುವ ಮೋದಿ, ಅಲ್ಲಿಂದ ಕಾರಿನ ಮೂಲಕ ಪ್ರವಾಸಿ ಮಂದಿರದ ವೃತ್ತದವರೆಗೆ ಬಂದು, ನಂತರ ನಂದ ವೃತ್ತದವರೆಗೂ ರೋಡ್‌ ಶೋ ನಡೆಸಲಿದ್ದಾರೆ. ಆದರೆ, ರೋಡ್‌ ಶೋ ನಡೆಯುವ 1.5 ಕಿ.ಮೀ ಉದ್ದದವರೆಗೂ ಹೆದ್ದಾರಿ ಇಕ್ಕೆಲಗಳಲ್ಲಿ ಇರುವ ಮರಗಳ ಕೊಂಬೆಗಳನ್ನು ಕಡಿದು ಹಾಕಿದ್ದಾರೆ.

ಮರ ಕತ್ತರಿಸಿರುವುದು ಎಷ್ಟು ಸರಿ: ಹೆದ್ದಾರಿಗೆ ಬಾಗುವ ಕೊಂಬೆಗಳನ್ನು ಮಾತ್ರ ಕಡಿದಿ ರುವುದರಿಂದ ಮತ್ತೂಂದು ಭಾಗದ ಮೇಲೆ ಮರದ ಭಾರ ಬಿದ್ದು, ಮಳೆಗಾಲದಲ್ಲಿ ಬಿರುಗಾಳಿಗೆ ಬೀಳುವ ಸ್ಥಿತಿಗೆ ತಲುಪಿವೆ. ಇದು ಅಕ್ಕಪಕ್ಕದ ಕಟ್ಟಡ ಮಾಲೀಕರಿಗೆ ಆತಂಕ ತಂದೊಡ್ಡಿದೆ. ಪರಿಸರ ಉಳಿಸಿ, ಜಾಗತಿಕ ತಾಪಮಾನ ಕಡಿಮೆ ಮಾಡಲು ಮರಗಿಡಗಳನ್ನು ಬೆಳೆಸಿ ಎನ್ನುವ ಪ್ರಧಾನಿ ಮೋದಿ ಅವರು, ತಮ್ಮ ರೋಡ್‌ ಶೋಗಾಗಿ ಮರಗಳನ್ನು ಕತ್ತರಿಸಿರುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.

ಪರಿಸರ ನಾಶ ಸರಿಯಲ್ಲ: ಮರಗಳ ಕೊಂಬೆಗಳನ್ನು ಕತ್ತರಿಸಿರುವುದರಿಂದ ಮಂಡ್ಯ ನಗರದ ಚಿತ್ರಣವೇ ಬದಲಾಗಿದೆ. ಹೆದ್ದಾರಿ ಸಂಪೂರ್ಣ ಹಸಿರುಮಯವಾಗಿತ್ತು. ಆದರೆ, ಈಗ ಸಂಪೂರ್ಣ ಬೋಳಾದಂತೆ ಕಂಡು ಬರುತ್ತಿದೆ. ಮೋದಿ ಅವರ ರೋಡ್‌ ಶೋ ಯಶಸ್ವಿಗೊಳಿಸಲು ಸರ್ಕಾರ ಈ ರೀತಿಯ ಪರಿಸರ ನಾಶ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಪರಿಸರವಾದಿಗಳು ಕಿಡಿಕಾರಿದ್ದಾರೆ.

ಇತ್ತೀಚೆಗೆ ಒಣಗಿದ ಮರದ ಕೊಂಬೆಯೊಂದು ಬಿದ್ದು ಪೌರ ಕಾರ್ಮಿಕನೊಬ್ಬ ಮೃತಪಟ್ಟಿದ್ದನು. ಇದರಿಂದ ಆತನ ಪತ್ನಿ, ಮಗು ಅನಾಥವಾಗಿದೆ. ಅಪಾಯದಲ್ಲಿರುವ ಒಣಗಿದ ಕೊಂಬೆಗಳನ್ನು ಕತ್ತರಿಸಲು ಮುಂದಾ ಗದ ಸರ್ಕಾರ, ಅರಣ್ಯ ಇಲಾಖೆ ಅಧಿಕಾರಿಗಳು ಚುನಾವಣೆ ರೋಡ್‌ ಶೋಗಾಗಿ ಚೆನ್ನಾಗಿರುವ ಮರದ ಕೊಂಬೆಗಳನ್ನು ಕತ್ತರಿಸಿರುವುದು ಎಷ್ಟು ಸರಿ?. ಪಾದಚಾರಿಗಳು, ಬೀದಿಬದಿ ವ್ಯಾಪಾರಿಗಳಿಗೆ ನೆರಳು ನೀಡುತ್ತಿದ್ದ ಮರಗಳ ಕೊಂಬೆಗಳನ್ನು ಕಡಿದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಅಪಾಯದಲ್ಲಿರುವ ಒಣಗಿದ ಕೊಂಬೆಗಳನ್ನು ಕತ್ತರಿಸುವುದಕ್ಕೆ ನಮಗೆ ಅಭ್ಯಂತರವಿಲ್ಲ. ಆದರೆ, ಮೋದಿ ಬರುತ್ತಿರುವ ಹಿನ್ನೆಲೆ ರೋಡ್‌ ಶೋ ಯಶಸ್ವಿಗೊಳಿಸಲು ಹಸಿರುಮ ಯವಾಗಿದ್ದ ಮಂಡ್ಯ ನಗರವನ್ನು ಹಾಳು ಮಾಡಿದ್ದು ಸರಿಯಲ್ಲ. – ಎಂ.ಬಿ.ನಾಗಣ್ಣಗೌಡ, ಗೌರವಾಧ್ಯಕ್ಷ, ಕರುನಾಡು ಸೇವಕರು

ಸಂಘಟನೆ ಮರಗಳ ಕೊಂಬೆಗಳನ್ನು ಬೇಕಾಬಿಟ್ಟಿಯಾಗಿ ಕತ್ತರಿಸಿರು ವುದು ಸರಿಯಲ್ಲ. ಈ ಮರಗಳು ನಗರದ ಸೌಂದರ್ಯ ಹೆಚ್ಚಿಸಿದ್ದವು. ಅಲ್ಲದೆ, ಪಾದಚಾರಿಗಳಿಗೆ ನೆರಳು ನೀಡುತ್ತಿದ್ದವು. ಇಂತಹ ಮರಗಳನ್ನು ಅರ್ಧಂಬರ್ಧ ಕತ್ತರಿಸಿ ಹಾಕಿರುವುದು ಸರಿಯಲ್ಲ. – ಪ್ರೊ.ಜಿ.ಟಿ.ವೀರಪ್ಪ, ಮಾಜಿ ಅಧ್ಯಕ್ಷರು, ಕಸಾಪ

Advertisement

Udayavani is now on Telegram. Click here to join our channel and stay updated with the latest news.

Next