Advertisement
ಕುಂದಾಪುರದಿಂದ ಸಿದ್ದಾಪುರ, ಹೊಸಂಗಡಿ ಮಾರ್ಗವಾಗಿ ಬಾಳೇಬರೆ ಘಾಟಿ ಮೂಲಕವಾಗಿ ತೀರ್ಥಹಳ್ಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ – 52 ಇದಾಗಿದ್ದು, ನಿತ್ಯ ಸಾವಿರಕ್ಕೂ ಹೆಚ್ಚು ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ದಿನಂಪ್ರತಿ ನೂರಾರು ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು, ಶಾಲಾ ವಾಹನಗಳು ಇದೇ ರಸ್ತೆಯನ್ನು ಅವಲಂಬಿಸಿವೆ.
ಮೂಡುಬಗೆ, ಅಂಪಾರುವಿನಿಂದ ಕಂಡ್ಲೂರುವರೆಗಿನ ರಸ್ತೆಯುದ್ದಕ್ಕೂ ಅನೇಕ ಕಡೆಗಳಲ್ಲಿ ಬೃಹತ್ ಹೊಂಡ – ಗುಂಡಿಗಳಿದ್ದು, ಅವುಗಳಿಗೆ ಕಾಟಾಚಾರದ ತೇಪೆ ಕಾರ್ಯ ನಡೆಯುತ್ತಿದೆ ಎನ್ನುವ ಟೀಕೆ ಸ್ಥಳೀಯರಿಂದ ವ್ಯಕ್ತವಾಗುತ್ತಿದೆ. ಆದರೆ ಈ ಸಂಬಂಧ ಪ್ರತಿಕ್ರಿಯಿಸಿದ ಲೋಕೋಪಯೋಗಿ ಅಧಿಕಾರಿಗಳು, ಈ ರಸ್ತೆಯನ್ನು ಮುಂದಿನ 10 ವರ್ಷಗಳ ಕಾಲ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಈಗ ತೇಪೆ ಕಾರ್ಯ ಕೂಡ ಅವರ ಅನುದಾನದಿಂದಲೇ ನಡೆಯುತ್ತಿರುವುದು. ಈಗ ಹೊಂಡಗಳನ್ನು ಮುಚ್ಚಿದ್ದು, ಕೂಡಲೇ ಅದರ ಮೇಲೆ ಮರುಡಾಮರೀಕರಣ ನಡೆಯಲಿದೆ ಎಂದು ತಿಳಿಸಿದ್ದಾರೆ.