Advertisement
ಪುರಸಭೆ ವ್ಯಾಪ್ತಿ ಆರಂಭವಾಗುವಲ್ಲಿಂದಲೇ ಹದಗೆಟ್ಟ ರಸ್ತೆ ಕುಂದಾಪುರ ನಗರಕ್ಕೆ ಬಿಳಿಧೂಳಿನ ಸ್ವಾಗತ ನೀಡುತ್ತದೆ. ಬಸ್ರೂರು ಮೂರುಕೈಯಲ್ಲಿ ಶಿವಮೊಗ್ಗಕ್ಕೆ ಹೋಗುವ ತಿರುವಿನಲ್ಲೂ ಹದಗೆಟ್ಟಿದೆ. ಸಂಗಮ್‌ವರೆಗೂ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಮಳೆ ಬಂದಾಗ ರಸ್ತೆಯ ಹೊಂಡಗಳಲ್ಲಿ ನೀರು ತುಂಬಿ ರಸ್ತೆ-ಹೊಂಡ, ರಸ್ತೆ ಅಂಚು ತಿಳಿಯದೆ ವಾಹನ ಸವಾರರು ತ್ರಾಸ ಪಡುತ್ತಾರೆ.
ಮಳೆ ಬಂದಾಗ ಇಂತಹ ದುರವಸ್ಥೆಯಾದರೆ ಬಿಸಿಲಿದ್ದಾಗ ಈ ಪ್ರದೇಶವಿಡೀ ಧೂಳುಮಯ. ನಡೆದಾಡಲೂ ಅಸಾಧ್ಯ. ಜತೆಗೆ ಅಕ್ಕಪಕ್ಕದ ಅಂಗಡಿಯವರಿಗೂ ಧೂಳು ತಿನ್ನುವ ಸಂಕಷ್ಟ. ಇದರಿಂದ ಕಾಯಿಲೆ ಭೀತಿ ಬೇರೆ. ರಾಷ್ಟ್ರೀಯ ಹೆದ್ದಾರಿಯಾದ ಕಾರಣ ವಾಹನಗಳ ಓಡಾಟ ನಿಲ್ಲುವುದೇ ಇಲ್ಲ. ಹಾಗೆ ವಾಹನ ಹೋದಾಗಲೆಲ್ಲ ಧೂಳು ಹಾರಾಡುತ್ತಿರುತ್ತದೆ. ಈ ಬಗ್ಗೆ ಉದಯವಾಣಿ ಸೆ. 13ರಂದು ವರದಿ ಪ್ರಕಟಿಸಿತ್ತು. ಇದೀಗ ನವಯುಗ ಕಂಪೆನಿ ತೇಪೆ ಕಾರ್ಯ ನಡೆಸಿದೆ.