Advertisement

ಹದಗೆಟ್ಟ ರಸ್ತೆ: ಸಂಚಾರ ಅಯೋಮಯ : ರಸ್ತೆ ದುರಸ್ತಿಗೆ ಸ್ಪಂದಿಸುತ್ತಿಲ್ಲ ಅಧಿಕಾರಿಗಳು

02:25 PM Sep 13, 2020 | sudhir |

ಕುಳಗೇರಿ ಕ್ರಾಸ್‌: ಇಲ್ಲಿಯ ಖಾನಾಪುರ ಎಸ್‌.ಕೆ. ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಕೆರೆಯ ಮುಖ್ಯ ರಸ್ತೆ ಕೊಳಚೆ ಪ್ರದೇಶದಂತಾಗಿದೆ. ಸಾರ್ವಜನಿಕರು ಸಂಚರಿಸಲು ಹರಸಾಹಸ ಪಡುವಂತಾಗಿದೆ. ಆ ಪ್ರದೇಶದಲ್ಲಿ ವಾಸವಾಗಿರುವ ಜನರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ.

Advertisement

ಗ್ರಾಮಸ್ಥರಿಗೆ ಕೆರೆಗೆ, ಹೊಲಗದ್ದೆಗಳಿಗೆ ಹಾಗೂ ಹೆದ್ದಾರಿ ಸೇರಲು ಈ ರಸ್ತೆ ಪ್ರಮುಖವಾಗಿದ್ದು, ರಸ್ತೆ ನಿರ್ಮಿಸದ ಕಾರಣ ಮಳೆ ನೀರು ಗ್ರಾಮಸ್ಥರು ಬಳಕೆ ಮಾಡಿದ ನೀರು ಸರಾಗವಾಗಿ ಮುಂದೆ ಸಾಗದೆ ಪ್ರಮುಖ ರಸ್ತೆ ಮೇಲೆ ನಿಲ್ಲುತ್ತಿದೆ. ಚರಂಡಿ ನೀರು ಸಹ ರಸ್ತೆ ಮೇಲೆ ಹರಿಯುತ್ತಿರುವುದರಿಂದ ಸಂಚಾರ ದುಸ್ತರವಾಗಿದೆ. ಶಾಲೆಯ ಮಕ್ಕಳು, ವೃದ್ಧರು, ರೈತರು ಸಹ ಈ ರಸ್ತೆ ಮೂಲಕ ಸಂಚರಿಸುತ್ತಿದ್ದಾರೆ.

ಕೊಳಚೆ ನೀರಲ್ಲಿ ಗಂಗಾಪೂಜೆ: ಈ ಗ್ರಾಮದಲ್ಲಿ ವಿಶೇಷ ಪೂಜೆ- ಪುನಸ್ಕಾರಗಳು ನಡೆದರೆ ಮಹಿಳೆಯರು ಕೊಳಚೆ ನೀರಲ್ಲೇ ಗಂಗೆಯ ಪೂಜೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರು ಬಳಕೆ ಮಾಡಿದ ನೀರು ಸೇರಿದಂತೆ ಹರಿದು ಹೋಗುವ ಎಲ್ಲ ನೀರು ಕೆರೆ ಸೇರುತ್ತಿದ್ದು, ಕೆರೆಯ ನೀರು ಸಹ ಕಲುಷಿತಗೊಂಡು ಬಳಕೆಗೆ ಬಾರದಂತಾಗುತ್ತಿದೆ. ರಸ್ತೆ ಸುಧಾರಣೆ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ.

ದುರಸ್ತಿ ಮಾಡುವ ಗೋಜಿಗೆ ಮಾತ್ರ ಹೋಗಿಲ್ಲ. ಗ್ರಾಮಸ್ಥರು ರೊಚ್ಚಿಗೇಳುವ ಮುನ್ನ ಅ ಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗ್ರಾಪಂ ಸದಸ್ಯ ಶೇಖಪ್ಪ ಪವಾಡಿನಾಯ್ಕರ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಮದುವೆಯಾದ 15ದಿನಕ್ಕೆ ಪತಿ ಆತ್ಮಹತ್ಯೆ: ಜ್ಯೂಸ್ ತರುವ ನೆಪದಲ್ಲಿ ಮಾಲ್ ನಿಂದ ಜಿಗಿದಳು ಪತ್ನಿ

Advertisement

ಹನಗಂಡಿ ಗ್ರಾಮದ ರಸ್ತೆ ದುರಸ್ತಿಗೆ ಗ್ರಾಮಸ್ಥರ ಒತ್ತಾಯ
ಬನಹಟ್ಟಿ; ಹನಗಂಡಿ ಗ್ರಾಮದ ದುರ್ಗಾದೇವಿ ಹಾಗೂ ಸಂಗಮೇಶ್ವರ ದೇವಸ್ಥಾನ ಎದುರಿನ ರಸ್ತೆ ಹಲವು ವರ್ಷಗಳಿಂದ ಹಾಳಾಗಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಕೂಡಲೆ ದುರಸ್ತಿ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ರಸ್ತೆ ಹಾಳಾಗಿ ಅನೇಕ ವರ್ಷಗಳೇ ಕಳೆದಿವೆ. ಆದರೆ, ಗ್ರಾಪಂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ, ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ನಿಂತು ಹೋಗಿವೆ ಎಂದು ಇಲ್ಲಿನ ನಿವಾಸಿಗರು ಆರೋಪಿಸಿದ್ದಾರೆ. ರಸ್ತೆ ತುಂಬೆಲ್ಲ ತಗ್ಗು ಗುಂಡಿಗಳು ಬಿದ್ದಿವೆ, ಚಿಕ್ಕಮಕ್ಕಳು, ವೃದ್ದರು ಇಲ್ಲಿ ತಿರುಗಾಡುವಂತಿಲ್ಲ. ಸಂಬಂದಿಸಿದ ಅಧಿಕಾರಿಗಳು ಕೂಡಲೆ ಇಲ್ಲಿನ ರಸ್ತೆ ದುರಸ್ತಿ ಮಾಡಿ ಜನರ ತೊಂದರೆಯನ್ನು ಸರಿಪಡಿಸಬೇಕು ಎಂದು ಗ್ರಾಮದ ನಿವಾಸಿ ಮಲ್ಲಪ್ಪ ತೋಟದ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next