Advertisement
ವಂಡ್ಸೆ ಪೇಟೆಯಿಂದ ಈ ಮಾರ್ಗವು ಸುಮಾರು 2 ಕಿ.ಮೀ. ದೂರವಿದ್ದು, ಒಟ್ಟಾರೆ ಇಲ್ಲಿ 100 ಮನೆಗಳಿವೆ. ಅದರಲ್ಲೂ ವಂಡ್ಸೆ ಕಡೆಯಿಂದ ಆರಂಭದಲ್ಲಿ ಸುಮಾರು 100 ಮೀಟರ್ ವರೆಗೆ ರಸ್ತೆ ಗದ್ದೆಯಂತಾಗಿದೆ. ಅನೇಕವರ್ಷದಿಂದ ಇಲ್ಲಿನ ಜನ ಈ ರಸ್ತೆಯ ಅಭಿವೃದ್ಧಿಗೆ ಒತ್ತಾಯಿಸು ತ್ತಿದ್ದರೂ ಯಾವುದೇ ಪ್ರಯೋಜನ ಮಾತ್ರ ಆಗಿಲ್ಲ. ಇದರಿಂದಾಗಿ ಈ ಮಾರ್ಗವನ್ನು ಆಶ್ರಯಿಸಿರುವವರು, ವಾಹನ ಸವಾರರು ಪ್ರತಿನಿತ್ಯ ಸರ್ಕಸ್ ಮಾಡುತ್ತ ಸಂಚರಿಸುತ್ತಿದ್ದಾರೆ.
ಚುನಾವಣೆ ಸಂದರ್ಭ ಜನಪ್ರತಿನಿಧಿಗಳು ಭರವಸೆ ನೀಡಿ ತೆರಳುತ್ತಾರೆ. ಮಹಿಳೆಯರು, ಶಾಲೆಗೆ ಹೋಗುವ ಮಕ್ಕಳ ಸಂಕಷ್ಟ ಹೇಳತೀರದಾಗಿದೆ. ಗ್ರಾಮ ಸಭೆಯಲ್ಲೂ ಪ್ರತಿ ವರ್ಷ ಈ ರಸ್ತೆಯ ವಿಚಾರ ಪ್ರಸ್ತಾವವಾಗುತ್ತದೆ. ಮತ್ತೆ ನನೆಗುದಿಗೆ ಬೀಳುತ್ತದೆ. ಈ ರಸ್ತೆಗಾಗಿ ಕೆಲವರು ತಮ್ಮ ಸ್ವಂತ ಜಾಗವನ್ನು ಬಿಟ್ಟು ಕೊಟ್ಟಿದ್ದರು. ಇವರಿಗೂ ಈಗ ಮನೆ ತಲುಪಲು ಪ್ರಯಾಸಪಡಬೇಕಾದ ಪರಿಸ್ಥಿತಿ ಇಲ್ಲಿನಜನರದ್ದಾಗಿದೆ. ಶಾಸಕ, ಸಂಸದರಿಗೆ ಪ್ರಸ್ತಾವನೆ
10 ವರ್ಷಗಳ ಹಿಂದೆ ಈ ಊರಿಗೆ ಸಂಪರ್ಕ ರಸ್ತೆಯನ್ನು ಪಂಚಾಯತ್ ವತಿಯಿಂದ ಮಾಡಲಾಗಿತ್ತು. ಆದರೆ ಸುಮಾರು 2 ಕಿ.ಮೀ. ದೂರದ ಈ ರಸ್ತೆಯ ಅಭಿವೃದ್ಧಿ ಪಂಚಾಯತ್ ಅನುದಾನದಿಂದ ಸಾಧ್ಯವಿಲ್ಲ. ಅದಕ್ಕಾಗಿ ಪಂಚಾಯತ್‌ನಿಂದ ಈಗಾಗಲೇ ಶಾಸಕರು ಹಾಗೂ ಸಂಸದರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅನುದಾನ ಬಂದಲ್ಲಿ ಕಾಂಕ್ರೀಟ್ ರಸ್ತೆ ಮಾಡಬಹುದು.
-ಉದಯ ಕುಮಾರ್ ಶೆಟ್ಟಿ, ಅಧ್ಯಕ್ಷರು, ವಂಡ್ಸೆ ಗ್ರಾ.ಪಂ.