Advertisement

ಹೊಂಡ ಗುಂಡಿಗಳದ್ದೇ ಕಾರುಬಾರು

09:24 PM Sep 16, 2021 | Team Udayavani |

ಮಲ್ಪೆ:  ಕರಾವಳಿ ಬೈಪಾಸ್‌ನಿಂದ ಮಲ್ಪೆಯವರೆಗೆ ಸುಮಾರು 4 ಕಿ. ಮೀ. ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಅಲ್ಲಲ್ಲಿ ಭಾರೀ ಗಾತ್ರದ ಹೊಂಡಗಳು ಉಂಟಾ ಗಿ ವಾಹನ ಸವಾರರಿಗೆ ಕಂಟಕವಾಗಿದೆ.

Advertisement

ಕೆಲವೆಡೆ ಹೊಂಡಗಳಿಗೆ ತೇಪೆ ಹಾಕುವ ಕೆಲಸವೂ ಕೂಡ ನಡೆದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸೇರಿದ ಈ ರಸ್ತೆಯಲ್ಲಿ  ದಿನನಿತ್ಯ ನಿರೀಕ್ಷೆಗೂ ಮೀರಿದ  ವಾಹನ ಸಂಚಾರವಿದೆ.  ಪ್ರಮುಖ ವಾಣಿಜ್ಯ ಕೇಂದ್ರವಾದ ಮಲ್ಪೆ ಮೀನುಗಾರಿಕೆ ಬಂದರು ಹಾಗೂ ಪ್ರವಾಸಿ ಕೇಂದ್ರವಾದ ಮಲ್ಪೆ ಬೀಚ್‌, ಸೈಂಟ್‌ ಮೇರೀಸ್‌ ದ್ವೀಪಗಳಿಗೆ ಹಾಗೂ ಇನ್ನಿತರ ಕಡೆಗಳಿಗೆ ಪ್ರಮುಖ ಸಂಪರ್ಕವನ್ನು ಈ ರಸ್ತೆ ಕಲ್ಪಿಸುತ್ತದೆ.

ರಸ್ತೆಗಳು ಹಾಳಾಗಿ ತಿಂಗಳುಗಟ್ಟಲೆ ಆದರೂ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆರೋಪಿಸ ಲಾಗಿದೆ.

ಟ್ರಾಫಿಕ್‌ ದಟ್ಟಣೆ:

ರಸ್ತೆ ಹೊಂಡಗಳ ಪರಿಣಾಮ ಕರಾವಳಿ ಬೈಪಾಸ್‌ನಿಂದ ಆದಿವುಡುಪಿ ವರೆಗೆ ಟ್ರಾಫಿಕ್‌ ದಟ್ಟಣೆ ದಿನನಿತ್ಯದ ಕೊಡುಗೆಯಾಗಿದೆ. ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬರುತ್ತದೆ. ಉಡುಪಿಯಿಂದ ಆಗಮಿಸುವ ವಾಹನಗಳ ಸರದಿ ಸಾಲು ಒಂದೆಡೆಯಾದರೆ ಮಲ್ಪೆಯಿಂದ ಉಡುಪಿಯತ್ತ ತೆರಳುವ ವಾಹನಗಳ ಸಾಲು ಮತ್ತೂಂದೆಡೆೆ. ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಎಲ್ಲೆಂದರಲ್ಲಿ ನಿಲ್ಲುವುದೂ  ಟ್ರಾಫಿಕ್‌ ಜಾಮ್‌ ಸಮಸ್ಯೆ ಬಿಗ ಡಾ ಯಿ ಸು ವಂತೆ ಮಾಡಿದೆ.

Advertisement

ಎಲ್ಲೆಲ್ಲಿ ಹೊಂಡಗಳಿವೆ?:

ಪ್ರಮುಖವಾಗಿ ಕರಾವಳಿಯ ಬೈಪಾಸ್‌ ಅಂಡರ್‌ಪಾಸ್‌ ಬಳಿ ಭಾರೀ ಪ್ರಮಾಣದ ಗುಂಡಿಗಳುಂಟಾಗಿ ರಸ್ತೆಯೇ ಮಾಯವಾಗಿದೆ. ಸವಾ ರರು ಹೊಂಡಗಳನ್ನು ತಪ್ಪಿಸಲು ಹೋಗಿ ಅಪಘಾತಕ್ಕೆ ತುತ್ತಾಗುತ್ತಿದ್ದಾರೆ.   ಆದಿವುಡುಪಿ ಜಂಕ್ಷನ್‌, ಮೀನು ಮಾರ್ಕೆಟ್‌ ಎದುರು, ಆದಾಯ ತೆರಿಗೆ ಕಚೇರಿಯ ಮುಂಭಾಗ, ಪಂದುಬೆಟ್ಟು ಮಸೀದಿಯ ಪಕ್ಕ, ವಿಲೇಜ್‌ ಇನ್‌ ಬಾರ್‌ ಎದುರುಗಡೆ, ಕಲ್ಮಾಡಿ ಚರ್ಚ್‌ ಸಮೀಪ, ಕಲ್ಮಾಡಿ ಜಂಕ್ಷನ್‌, ಮಲ್ಪೆಯವರೆಗೂ ಆಲ್ಲಲ್ಲಿ ಹೊಂಡಗಳು ನಿರ್ಮಾಣವಾಗಿವೆ.

ದ್ವಿಚಕ್ರ ಸವಾರರು ಈ ರಸ್ತೆಯಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಸಂಚಾರ ನಡೆಸ‌ಬೇಕಾಗಿದೆ. ಮಹಿಳೆಯರು, ಹಿರಿಯರಿಗೆ ಸ್ಕೂಟರ್‌ ಚಲಾಯಿಸುವುದೇ ತ್ರಾಸದಾಯಕವಾಗಿದೆ. ಸಂಬಂಧಪಟ್ಟ ಇಲಾಖೆ  ಶೀಘ್ರ ರಸ್ತೆ ದುರಸ್ತಿ  ಮಾಡಬೇಕಿದೆ.ಪ್ರೀತಿಕಾ ಬಂಗೇರ,  ದ್ವಿಚಕ್ರ ವಾಹನ ಸವಾರರು

ಕರಾವಳಿ ಬೈಪಾಸ್‌ – ಮಲ್ಪೆ ರಸ್ತೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿದೆ, ಅಕ್ಟೋಬರ್‌ನಲ್ಲಿ ಟೆಂಡರ್‌ ಪ್ರಕ್ರಿಯೆ ನಡೆ ಯಲಿದೆ. ಪ್ರಸ್ತುತ ತಾತ್ಕಾಲಿಕವಾಗಿ ಹೊಂಡ ಮುಚ್ಚುವ ಮತ್ತು ರಸ್ತೆ ಡಾಮರು ಕಾಮ ಗಾರಿ ನಡೆಸ ಲಾಗುವುದು. ಮಳೆ ಕಡಿಮೆಯಾದ ಬಳಿಕ ಕಾಮಗಾರಿ ನಡೆಯಲಿದೆ. ಕೆ. ರಘುಪತಿ ಭಟ್‌, ಶಾಸಕರು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next